No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
  • Advertise With Us
  • Grievances
  • About Us
  • Contact Us
Saturday, September 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಿಶ್ವವೇ ತತ್ತರಿಸಿದರೂ ಭಾರತದ ಆರ್ಥಿಕತೆ ಅಬ್ಬರ: ಮೊದಲ ತ್ರೈಮಾಸಿಕದಲ್ಲಿ GDP 7.8% ಗ್ರೋತ್!

kalpa News by kalpa News
September 5, 2026
in Special Articles
0
Indian Economy 7.8 Percent Growth First Quarter Spl Article
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ : ಅನಿರುದ್ಧ ವಸಿಷ್ಠ ಎಸ್.ಆರ್.  |

ಜಾಗತಿಕ ಮಟ್ಟದಲ್ಲಿ ಭೌಗೋಳಿಕ ರಾಜಕೀಯ ಸಂಘರ್ಷ, ಇಂಧನ ಬೆಲೆ ಏರಿಕೆ, ವ್ಯಾಪಾರ ಅಸ್ಥಿರತೆ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ (Indian Economy) ಭರ್ಜರಿ ವೇಗದಲ್ಲಿ ಮುನ್ನಡೆಯುತ್ತಿದೆ. 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ ಶೇ.7.8ರಷ್ಟು (India GDP Growth 7.8%) ಬೆಳವಣಿಗೆ ದಾಖಲಿಸಿದೆ.

ಈ ಬೆಳವಣಿಗೆ ಭಾರತೀಯ ರಿಸರ್ವ್ ಬ್ಯಾಂಕ್’ನ 7% ಅಂದಾಜು ಹಾಗೂ ಮಾರುಕಟ್ಟೆ ನಿರೀಕ್ಷಿಸಿದ್ದ ಸುಮಾರು 7.3% ಬೆಳವಣಿಗೆ ದರಕ್ಕಿಂತಲೂ ಹೆಚ್ಚಾಗಿದೆ. ಇದು ಭಾರತದ ಆರ್ಥಿಕತೆಯಲ್ಲಿರುವ ಆಂತರಿಕ ಬಲ, ಹೂಡಿಕೆ ಸಾಮರ್ಥ್ಯ ಮತ್ತು ರಚನಾತ್ಮಕ ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ದಾಖಲಾಗಿದ್ದ ಶೇ.6.9ರ ಬೆಳವಣಿಗೆಗೆ ಹೋಲಿಸಿದರೆ ಈ ಬಾರಿ ಆರ್ಥಿಕ ಪ್ರಗತಿ ಮತ್ತಷ್ಟು ವೇಗ ಪಡೆದುಕೊಂಡಿದೆ.

ಜಾಗತಿಕ ಬಿಕ್ಕಟ್ಟಿನ ನಡುವೆಯೂ ಆರ್ಥಿಕ ಸ್ಥಿರತೆ

ಅಮೆರಿಕ-ಇರಾನ್ ಭೌಗೋಳಿಕ ರಾಜಕೀಯ ಸಂಘರ್ಷದ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ, ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್’ಗೆ 87ರಿಂದ 90 ಡಾಲರ್’ವರೆಗೆ ಏರಿಕೆಯಾಗಿತ್ತು. ಆದರೂ ದೇಶೀಯ ಆರ್ಥಿಕ ಚಟುವಟಿಕೆಗಳ ಮೇಲೆ ಇದರ ಪರಿಣಾಮವನ್ನು ನಿಯಂತ್ರಿಸುವಲ್ಲಿ ಭಾರತ ಯಶಸ್ವಿಯಾಗಿರುವುದು ಭಾರತದ ಬಲಿಷ್ಠ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ.

ಇದೇ ವೇಳೆ ಜಾಗತಿಕ ಮಾರುಕಟ್ಟೆಯಲ್ಲಿ ಯೂರಿಯಾ ರಸಗೊಬ್ಬರದ ಬೆಲೆಯೂ ಶೇ.73.5ರಷ್ಟು ಏರಿಕೆಯಾಗಿದೆ. ಆದರೆ ಸರ್ಕಾರದ ತಂತ್ರಾತ್ಮಕ ಕ್ರಮಗಳು ಮತ್ತು ಕೃಷಿ ವಲಯಕ್ಕೆ ನೀಡಿದ ಬೆಂಬಲದಿಂದಾಗಿ ಈ ವೆಚ್ಚದ ಒತ್ತಡವನ್ನು ನಿರ್ವಹಿಸಲು ಸಾಧ್ಯವಾಗಿದೆ.

ಗ್ರಾಮೀಣ ಆರ್ಥಿಕತೆಯ ಸ್ಥಿರತೆ ಆಹಾರ ಭದ್ರತೆ ಮತ್ತು ದೇಶೀಯ ಬೇಡಿಕೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.PES Shivamogga

ಸಣ್ಣ – ಮಧ್ಯಮ ಕೈಗಾರಿಕೆಗಳಿಗೆ ಸಾಲದ ಹರಿವು ಹೆಚ್ಚಳ

ದೇಶೀಯ ಉದ್ಯಮಗಳು ಬಂಡವಾಳದ ಕೊರತೆಯಿಂದ ತತ್ತರಿಸದಂತೆ ಸಾಲದ ಹರಿವು ಹೆಚ್ಚಿಸಲಾಗಿದೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ನೀಡಲಾದ ದೇಶೀಯ ಸಾಲದಲ್ಲಿ 23% ಏರಿಕೆ ಕಂಡುಬಂದಿದೆ. ಇದರಿಂದ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳು ಮಾರುಕಟ್ಟೆಯ ಅಸ್ಥಿರತೆಯನ್ನು ಎದುರಿಸುತ್ತಾ ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಲು ನೆರವಾಗಿದೆ.

ಬಂಡವಾಳ ಹೂಡಿಕೆಯಲ್ಲಿ ಭರ್ಜರಿ ಏರಿಕೆ

ದೇಶದ ದೀರ್ಘಕಾಲೀನ ಆರ್ಥಿಕ ಸಾಮರ್ಥ್ಯವನ್ನು ನಿರ್ಧರಿಸುವ ಪ್ರಮುಖ ಸೂಚಕವಾದ ಒಟ್ಟು ಸ್ಥಿರ ಬಂಡವಾಳ ರಚನೆ ಶೇ.11.9ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ 5.8% ಬೆಳವಣಿಗೆಗೆ ಹೋಲಿಸಿದರೆ ಇದು ಗಮನಾರ್ಹ ಜಿಗಿತವಾಗಿದೆ.

Also Read>> ವಿಮರ್ಶೆಯ ವಿವೇಕದಿಂದ ಜ್ಞಾನದ ಬೆಳಕು ಹರಡಲಿ: ರಾಶಿಸ ಕಾರ್ಯದರ್ಶಿ ನಾಗರಾಜ ಸಲಹೆ

ಸರ್ಕಾರಿ ಮತ್ತು ಖಾಸಗಿ ವಲಯಗಳು ಮೂಲಸೌಕರ್ಯ, ಉತ್ಪಾದನಾ ಸಾಮರ್ಥ್ಯ ಮತ್ತು ದೀರ್ಘಕಾಲೀನ ಆಸ್ತಿಗಳ ನಿರ್ಮಾಣಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ.

Indian Economy : ಚೀನಾ, ಅಮೆರಿಕ, ಯುರೋಪ್’ಗಿಂತ ವೇಗ

ಶೇ.7.8ರ ಬೆಳವಣಿಗೆಯೊಂದಿಗೆ ಭಾರತವು ಪ್ರಮುಖ ಜಾಗತಿಕ ಆರ್ಥಿಕತೆಗಳ ಪೈಕಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಚೀನಾ ಶೇ.5.0ರಷ್ಟು ಬೆಳವಣಿಗೆ ದಾಖಲಿಸಿದ್ದು, ಆ ದೇಶದ ಆಸ್ತಿ ಮಾರುಕಟ್ಟೆ ಬಿಕ್ಕಟ್ಟು, ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಹಾಗೂ ದುರ್ಬಲ ಗ್ರಾಹಕ ಬೇಡಿಕೆ ಆರ್ಥಿಕತೆಯ ಮೇಲೆ ಒತ್ತಡ ಮುಂದುವರೆಸಿದೆ.

ಅಮೆರಿಕದ ಬೆಳವಣಿಗೆ ಶೇ.1.6ರಿಂದ 2.1ರ ವ್ಯಾಪ್ತಿಯಲ್ಲಿ ಇರುವುದಾಗಿ ಅಂದಾಜಿಸಲಾಗಿದ್ದು, ಹಣದುಬ್ಬರ ಹಾಗೂ ಬಿಗಿಯಾದ ಹಣಕಾಸು ನೀತಿಯ ಪರಿಣಾಮ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.

ಇನ್ನು ಯೂರೋಜೋನ್ ಆರ್ಥಿಕತೆ ಕೇವಲ ಶೇ.0.5 ಬೆಳವಣಿಗೆ ದಾಖಲಿಸಿದ್ದು, ಹೆಚ್ಚಿನ ಇಂಧನ ವೆಚ್ಚ ಹಾಗೂ ಉತ್ಪಾದನಾ ವಲಯದ ದುರ್ಬಲತೆಯನ್ನು ಎದುರಿಸುತ್ತಿದೆ.

ಸೇವಾ ವಲಯವೇ ಪ್ರಮುಖ ಎಂಜಿನ

ಭಾರತದ ಜಿಡಿಪಿ ಬೆಳವಣಿಗೆಯಲ್ಲಿ ಸೇವಾ ವಲಯ ಪ್ರಮುಖ ಪಾತ್ರ ವಹಿಸಿದೆ. ತೃತೀಯ ವಲಯವು ಒಟ್ಟಾರೆ ಶೇ.10ರಷ್ಟು ಬೆಳವಣಿಗೆ ದಾಖಲಿಸಿದೆ.
ಐಟಿ, ಹಣಕಾಸು, ವೃತ್ತಿಪರ ಸೇವೆಗಳು ಮತ್ತು ತಂತ್ರಜ್ಞಾನ ಆಧಾರಿತ ಚಟುವಟಿಕೆಗಳಲ್ಲಿ ಭಾರತದ ಜಾಗತಿಕ ಸ್ಥಾನ ಮತ್ತಷ್ಟು ಬಲಗೊಂಡಿದೆ.

ಹಣಕಾಸು, ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ ಹಾಗೂ ವೃತ್ತಿಪರ ಸೇವೆಗಳನ್ನು ಒಳಗೊಂಡ ವಿಭಾಗವು ಶೇ.12.1ರಷ್ಟು ಬೆಳವಣಿಗೆ ಕಂಡಿದೆ. ತಂತ್ರಜ್ಞಾನ, ಸಾಫ್ಟ್’ವೇರ್, ಫಿನ್ಟೆಕ್ ಹಾಗೂ ಉನ್ನತ ಕೌಶಲ್ಯದ ಸೇವೆಗಳ ಬೇಡಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕೈಗಾರಿಕಾ ವಲಯವೂ ಬಲಿಷ್ಠ

ದ್ವಿತೀಯ ಅಥವಾ ಕೈಗಾರಿಕಾ ವಲಯವು ಶೇ.8.6ರಷ್ಟು ಬೆಳವಣಿಗೆ ದಾಖಲಿಸಿದೆ. ಉತ್ಪಾದನಾ ವಲಯದ ಸೂಚ್ಯಂಕವು ಶೇ.9.2ರಷ್ಟು ಏರಿಕೆ ಕಂಡಿದ್ದು, ಕಾರ್ಖಾನೆಗಳ ಉತ್ಪಾದನಾ ಸಾಮರ್ಥ್ಯದ ಬಳಕೆ ಹಾಗೂ ಪೂರೈಕೆ ಸರಪಳಿ ಸುಧಾರಣೆಯ ಸಂಕೇತವಾಗಿದೆ.

ನಿರ್ಮಾಣ ವಲಯವೂ ಶೇ.7.7ರಷ್ಟು ಬೆಳವಣಿಗೆ ದಾಖಲಿಸಿದೆ. ಹೆದ್ದಾರಿ, ಲಾಜಿಸ್ಟಿಕ್ಟ್ ಕಾರಿಡಾರ್, ನಗರ ಸಾರಿಗೆ ಯೋಜನೆಗಳು ಹಾಗೂ ಖಾಸಗಿ ರಿಯಲ್ ಎಸ್ಟೇಟ್ ಹೂಡಿಕೆಗಳು ನಿರ್ಮಾಣ ಚಟುವಟಿಕೆಗೆ ಉತ್ತೇಜನ ನೀಡಿವೆ.

ಗ್ರಾಹಕರ ಖರೀದಿ ಸಾಮರ್ಥ್ಯವೂ ಹೆಚ್ಚಳ

ದೇಶೀಯ ಬೇಡಿಕೆಯ ಪ್ರಮುಖ ಸೂಚಕವಾಗಿರುವ Private Final Consumption Expenditure (PFCE) ಶೇ.7.1ರಷ್ಟು ಏರಿಕೆಯಾಗಿದೆ. ಇದು ದೇಶೀಯ ಗ್ರಾಹಕರ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ವಿಶ್ವಾಸದಲ್ಲಿ ಸ್ಥಿರತೆ ಇರುವುದನ್ನು ಸೂಚಿಸುತ್ತದೆ.

ಜಾಗತಿಕ ವ್ಯಾಪಾರದಲ್ಲಿ ಅಸ್ಥಿರತೆ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಭಾರತದ ರಫ್ತು ಶೇ.12ರಷ್ಟು ಹೆಚ್ಚಾಗಿದೆ. ವಿಶೇಷವಾಗಿ ಉತ್ಪಾದನಾ ವಸ್ತುಗಳು ಹಾಗೂ ವೃತ್ತಿಪರ ಸೇವೆಗಳ ಜಾಗತಿಕ ಬೇಡಿಕೆ ಇದಕ್ಕೆ ನೆರವಾಗಿದೆ.Kalahamsa Infotech private limited

ಕೃಷಿ ವಲಯದಲ್ಲೂ ಸ್ಥಿರ ಬೆಳವಣಿಗೆ

ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳನ್ನು ಒಳಗೊಂಡ ಪ್ರಾಥಮಿಕ ವಲಯವು ಶೇ.3.6ರಷ್ಟು ಬೆಳವಣಿಗೆ ದಾಖಲಿಸಿದೆ. ಗ್ರಾಮೀಣ ಆರ್ಥಿಕತೆಯ ಸ್ಥಿರತೆ ಆಹಾರ ಭದ್ರತೆ, ಆಹಾರ ಬೆಲೆ ನಿಯಂತ್ರಣ ಹಾಗೂ ಗ್ರಾಮೀಣ ಖರೀದಿ ಸಾಮರ್ಥ್ಯಕ್ಕೆ ಪ್ರಮುಖ ಆಧಾರವಾಗಿದೆ.

ಒಟ್ಟಾರೆ, ಬಲವಾದ ದೇಶೀಯ ಬಳಕೆ, ಹೆಚ್ಚುತ್ತಿರುವ ಬಂಡವಾಳ ಹೂಡಿಕೆ, ಕೈಗಾರಿಕಾ ಚಟುವಟಿಕೆ, ಸೇವಾ ವಲಯದ ವೇಗ ಹಾಗೂ ರಫ್ತು ವೃದ್ಧಿಯಿಂದಾಗಿ ಭಾರತದ ಆರ್ಥಿಕತೆ ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ತನ್ನ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಬಳಕೆ ಆಧಾರಿತ ಬೆಳವಣಿಗೆಯಿಂದ ದೀರ್ಘಕಾಲೀನ ಬಂಡವಾಳ ಹೂಡಿಕೆ ಆಧಾರಿತ ಆರ್ಥಿಕತೆಯತ್ತ ಭಾರತ ಸಾಗುತ್ತಿರುವುದು ಮುಂದಿನ ವರ್ಷಗಳ ಬೆಳವಣಿಗೆಗೆ ಬಲವಾದ ಅಡಿಪಾಯ ನಿರ್ಮಿಸುವ ನಿರೀಕ್ಷೆ ಮೂಡಿಸಿದೆ.

7.8% ಜಿಡಿಪಿ ಬೆಳವಣಿಗೆ ಕೇವಲ ಒಂದು ಅಂಕಿ-ಅಂಶವಲ್ಲ; ಇದು ಭಾರತದ ಆರ್ಥಿಕತೆಯಲ್ಲಿರುವ ಆಂತರಿಕ ಚೈತನ್ಯ, ಹೂಡಿಕೆ ಸಾಮರ್ಥ್ಯ ಮತ್ತು ದೀರ್ಘಕಾಲೀನ ಬೆಳವಣಿಗೆಯ ಸಾಮರ್ಥ್ಯವನ್ನು ತೋರಿಸುವ ಪ್ರಮುಖ ಸೂಚಕವಾಗಿದೆ.

ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವೆಯೂ ಶೇ.7.8ರ ಜಿಡಿಪಿ ಬೆಳವಣಿಗೆ ಭಾರತವು ತನ್ನ ದೇಶೀಯ ಬೇಡಿಕೆ ಮತ್ತು ಹೂಡಿಕೆ ಸಾಮರ್ಥ್ಯದ ಆಧಾರದ ಮೇಲೆ ಆರ್ಥಿಕ ವೇಗವನ್ನು ಕಾಯ್ದುಕೊಂಡಿರುವುದನ್ನು ತೋರಿಸುತ್ತದೆ. ಬಲವಾದ ಗ್ರಾಹಕ ಬೇಡಿಕೆ, ಹೆಚ್ಚುತ್ತಿರುವ ಬಂಡವಾಳ ಹೂಡಿಕೆ ಮತ್ತು ಸ್ಥಿರ ರಫ್ತುಗಳು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಆಧಾರವಾಗುವ ನಿರೀಕ್ಷೆಯಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     Kalpa News Advertising Disclaimer

Tags: GDP Growth IndiaIndia economyIndia GDP Growth 7.8%Indian Economy Growthಭಾರತದ ಆರ್ಥಿಕತೆಭಾರತದ ಜಿಡಿಪಿಮೊದಲ ತ್ರೈಮಾಸಿಕ GDP
Share200Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ವಿಮರ್ಶೆಯ ವಿವೇಕದಿಂದ ಜ್ಞಾನದ ಬೆಳಕು ಹರಡಲಿ: ರಾಶಿಸ ಕಾರ್ಯದರ್ಶಿ ನಾಗರಾಜ ಸಲಹೆ

Next Post

ಋಗ್ವೇದವು ಎಲ್ಲ ಶಾಸ್ತ್ರಗಳ ತಾಯಿಯಾಗಿದೆ | ವಿದ್ಯೇಶ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ

kalpa News

kalpa News

Next Post
Udupi rigveda is the mother of all shastras copy

ಋಗ್ವೇದವು ಎಲ್ಲ ಶಾಸ್ತ್ರಗಳ ತಾಯಿಯಾಗಿದೆ | ವಿದ್ಯೇಶ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ

No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL