ಗೌರಿಬಿದನೂರು: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜಿಎಸ್’ಟಿ ಎಂಬ ಪೆಡಂಭೂತದಿಂದಾಗಿ ದೇಶದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ಎಂದು ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ವಾಗ್ದಾಳಿ ನಡೆಸಿದರು.
ನಗರದ ಸೂರ್ಯ ಕಲ್ಯಾಣ ಮಂಟಪದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಜನರ ಧರ್ಮ ಜಾತಿ ಅವರ ಭಾವನೆಗಳಿಗೆ ಧಕ್ಕೆ ತಂದು ಬಿಜೆಪಿ ಸರಕಾರ ಅಧಿಕಾರದ ಗದ್ಧುಗೆ ಏರಿದ್ದು, ಇದೀಗ ಆರ್ಥಿಕ ವ್ಯವಸ್ಥೆಯು ತೀವ್ರವಾಗಿ ಹದೆಗಟ್ಟಿದ್ದು ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಇದರ ಬಗ್ಗೆ ಹೋರಾಟದ ಮೂಲಕ ಜನತೆಯನ್ನು ಜಾಗೃತಿಗೊಳಿಸಬೇಕು. ಅಗ ಮಾತ್ರ ಈ ದೇಶದ ಸಂವಿಧಾನ ಅಶಯಗಳನ್ನು ಉಳಿಸಿದಂತೆ ಅಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಕಳೆದ ಐದು ವರ್ಷಗಳಿಂದ ಸುಳ್ಳು ಆಶ್ವಾಸನೆಗಳು ಜೊತೆಗೆ ಪಾಕಿಸ್ಥಾನ ದೇಶದ ಯುದ್ದ ಎಂಬ ಪೊಳ್ಳು ಭರವಸೆಗಳು ನೀಡಿ ಈ ದೇಶದ ಜನರ ಧರ್ಮದ ಭಾವನೆಗಳನ್ನು ಕೆದಕುವ ಮೂಲಕ ದೇಶದಲ್ಲಿ ಅಶಾಂತಿ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ್ದಾರೆ. ದೇಶದ ಆರ್ಥಿಕ ಮೂಲಸ್ಥಾನ ಬ್ಯಾಂಕ್’ಗಳನ್ನು ವಿಲೀನಗೊಳಿಸಿ ಬಡವರ ರೈತರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ರಿಸರ್ವ್ ಬ್ಯಾಂಕ್’ನಿಂದ 1.75 ಲಕ್ಷ ಸಾವಿರ ಕೋಟಿ ರೂ. ಪಡೆದು ದೇಶವನ್ನು ದಿವಾಳಿಯತ್ತ ಕೊಂಡ್ಯೂತ್ತಿದ್ದಾರೆ ಎಂದರು.
ಜಿಎಸ್’ಟಿ ಎಂಬ ತೆರಿಗೆ ನೀತಿ ಪೆಡಂಭೂತವಾಗಿ ಸಣ್ಣಪುಟ್ಟ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ಮಟ್ಟ ಕೈಗಾರಿಕೆಗಳ ಕಾರ್ಮಿಕರು ಇಂದು ಬೀದಿ ಪಾಲಾಗಿ ಮುಚ್ಚುವಂತಾಗಿ ನಿರುದ್ಯೋಗ ಮಟ್ಟ ಗಣನೀಯವಾಗಿ ಹೆಚ್ಚಿ ಯುವಕರ ಪಾಡು ಹೇಳತೀರದಂತೆ ಅಗಿದೆ ಎಂದರು.
ನಗರಸಭೆ ಚುನಾವಣೆಗೆ ಸಿದ್ದರಾಗಿ
ಸಭೆಯಲ್ಲಿ ಮುಖ್ಯವಾಗಿ ಇನ್ನು ಮೂರು ತಿಂಗಳಲ್ಲಿ ನಗರಸಭೆಯ ಚುನಾವಣೆ ನಡೆಯಲಿದೆ. ಅದಕ್ಕಾಗಿ ಪ್ರಬಲ ಆಕಾಂಕ್ಷಿಗಳು ಇದ್ದು ಅವರುಗಳು ಭೂತ್ ಮಟ್ಟದಲ್ಲಿ ಎಲ್ಲ ಸಿದ್ದತೆಗಳು ಮಾಡಿಕೊಂಡು ಪಕ್ಷವನ್ನು ಮುನ್ನೆಡಸಬೇಕು ಎಂದು ಕರೆ ನೀಡಿದರು.
ನಗರದಲ್ಲಿ ಕುಡಿಯುವ ನೀರು ಸ್ಥಿತಿ ಬಿಗಾಡಿಸಿದ್ದು ಅದರ ನಿವಾರಣೆಗೆ ಎಲ್ಲ ಪ್ರಯತ್ನಗಳು ಮಾಡಿದ್ದು ಅದರ ಸಲುವಾಗಿ ಎಚ್.ಎನ್. ವ್ಯಾಲಿ ನೀರನ್ನು ತಾಲೂಕಿಗೆ ತರಲು ಎಲ್ಲ ಸಿದ್ದತೆಗಳು ನಡೆದಿದೆ. ಇನ್ನು ಮೂರು ತಿಂಗಳಲ್ಲಿ ಅದರ ಸಮಸ್ಯೆಗೆ ಬಗೆಹರಿಯಲಿದೆ. ನಂತರದಲ್ಲಿ ದಿನದ 24 ಗಂಟೆ ಕುಡಿಯುವ ನೀರು ನಗರಸಭೆ ನೀಡಲಿದೆ ಎಂದ ಅವರು ಎತ್ತಿನ ಹೊಳೆ ಯೋಜನೆ ಪ್ರಗತಿ ಹಂತದಲ್ಲಿದ್ದು ತ್ವರಿತವಾಗಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಡಿ.6ರಂದು ನಗರದ ಹೊರವಲಯದ ಮಿನಿ ವಿಧಾನಸೌಧ ಮತ್ತು ಅಂಬೇಡ್ಕರ್ ಭವನ ಉದ್ಘಾಟನೆಗೊಳ್ಳಲಿದೆ ಹಾಗೂ ನಗರದ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ಸಿದ್ದಗೊಂಡಿದ್ದು ಅದರಿಂದ ನಗರ ಮತ್ತು ತಾಲೂಕನ್ನು ಇನ್ನಷ್ಟು ಅಭಿವೃದ್ದಿಗೆ ಅಗುತ್ತದೆ ಎಂದು ತಿಳಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಪಕ್ಷದ ಆದ್ಯಕ್ಷ ಎಂ. ನರಸಿಂಹಮೂರ್ತಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಡ್ಡದಾರಿಯಲ್ಲಿ ಗದ್ದುಗೆ ಏರಿ ಜನಹಿತ ಮರೆತು ದ್ವೇಷ ರಾಜಕಾರಣದಲ್ಲಿ ಮಗ್ನವಾಗಿದೆ. ಇನ್ನು 6 ತಿಂಗಳು ಸರ್ಕಾರ ಬೀಳುವುದು ಖಚಿತ. ಮುಂಬರುವ ನಗರಸಭೆಯ ಚುನಾವಣೆಯಲ್ಲಿ ಎಲ್ಲಾ ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಆಧ್ಯಕ್ಷರು ಗೀತಾ ಜಯಂಧರ್ ಸೋಮಯ್ಯ ಡಿಸಿಸಿ ಆಧ್ಯಕ್ಷ ಕೇಶವರೆಡ್ಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಚ್.ಎನ್. ಪ್ರಕಾಶ್ ರೆಡ್ಡಿ ಆಶ್ವತ್ಥ ನಾರಾಯಣಗೌಡ ಜಿಲ್ಲಾ ಪಂಚಾಯ್ತಿ ಸದಸ್ಯೆ ಅರುಂಧತಿ, ಕಲೀಂಉಲ್ಲ, ವಿ. ರಮೇಶ್, ಕಲ್ಪನಾ ರಮೇಶ್, ಸುಮನ, ರೇಣುಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಬೊಮ್ಮಣ್ಣ ಕಲ್ಲಿನಾಯಕಹಳ್ಳಿ, ಮುನಿಯಪ್ಪ ವಾಟದಹೊಸಹಳ್ಳಿ, ನಾರಾಯಣಗೌಡ, ಕಮಲಾಕರ್, ಕಾಂಗ್ರೆಸ್ ವಕ್ತಾರ ವೆಂಕಟರಮಣ, ಆರ್. ವೇಣುಗೋಪಾಲ್, ವೇದಲವೇಣಿ, ವೇಣು ಇನ್ನೂ ಮುಂತಾದ ಮುಖಂಡರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post