ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ತಮಿಳುನಾಡಿನ ಶ್ರೀಕಾಂತ ಡಿ ಪುರುಷರ ಓಪನ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಮೆರೆದರೆ, ಕಮಲಿ ಮೂರ್ತಿ ಮಹಿಳೆಯರ ಓಪನ್ ಮತ್ತು ಗ್ರೋಮ್ಸ್ ಗರ್ಲ್ಸ್ (ಯು-16) ವಿಭಾಗಗಳಲ್ಲಿ ವಿಜೇತರಾಗಿದ್ದಾರೆ.
ತಮಿಳುನಾಡಿನ ಪ್ರಹ್ಲಾದ್ ಶ್ರೀರಾಮ್ ಅವರು (ಯು-16) ವಿಭಾಗದಲ್ಲಿ ಜಯ ಸಾಧಿಸಿದರು. ಈ ಮೂಲಕ 2025ರ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್’ಶಿಪ್ ಸರಣಿಯ ಎರಡನೇ ಹಂತವಾಗಿದ್ದ 6ನೇ ಇಂಡಿಯನ್ ಓಪನ್ ಆಫ್ ಸರ್ಫಿಂಗ್’ನಲ್ಲಿ ಎಲ್ಲ ನಾಲ್ಕು ವಿಭಾಗಗಳನ್ನೂ ತಮಿಳುನಾಡಿನ ಸರ್ಫರ್ಗಳು ತಮ್ಮದಾಗಿಸಿಕೊಂಡರು.
ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿದ್ದ ಹಾಗೂ ಮಂತ್ರ ಸರ್ಫ್ ಕ್ಲಬ್ ಆತಿಥ್ಯ ವಹಿಸಿದ್ದ ಈ ಸ್ಪರ್ಧೆ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ನಡೆದಿತ್ತು.
ಪುರುಷರ ವಿಭಾಗದಲ್ಲಿ ಶ್ರೀಕಾಂತಿ ಹೊಸ ಚಾಂಪಿಯನ್
ಹಿಂದಿನ ವರ್ಷ ಎರಡನೇ ಸ್ಥಾನಗಳಿಸಿದ್ದ ಶ್ರೀಕಾಂತ ಈ ಬಾರಿ 14.63 ಅಂಕಗಳೊಂದಿಗೆ ಜಯ ಸಾಧಿಸಿದರು. ರಾಷ್ಟ್ರೀಯ ಚಾಂಪಿಯನ್ಸ್ ಮೇಶ್ಬು ದಿಲಾಲ್ (11.87) ಎರಡನೇ ಸ್ಥಾನ ಪಡೆದರೆ, ಶಿವರಾಜ್ ಬಾಬು (9.77) ಮತ್ತು ಸಂಜಯ್ ಸೆಲ್ವಮಣಿ (7.07) ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದರು.
ಕಮಲಿ ಮೂರ್ತಿಗೆ ಡಬಲ್ ಖುಷಿ
ತಾನು ದೇಶದ ಅಗ್ರ ಮಹಿಳಾ ಸರ್ಫರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಕಮಲಿಮೂರ್ತಿ, ಮಹಿಳೆಯರ ಓಪನ್ ಮತ್ತು ಗ್ರೋಮ್ಸ್ ಗರ್ಲ್ಸ್ ವಿಭಾಗಗಳಲ್ಲೂ ಗೆಲುವು ಸಾಧಿಸಿದರು.
ಗ್ರೋಮ್ಸ್ ಗರ್ಲ್ಸ್’ನಲ್ಲಿ ಕಮಲಿ ಅತ್ಯುತ್ತಮ ಪ್ರದರ್ಶನ ನೀಡಿ 15.50 ಅಂಕಗಳನ್ನು ಪಡೆದುಕೊಂಡರು. ಆದ್ಯಾ ಸಿಂಗ್(2.36) ಮತ್ತು ಸಾನ್ವಿ ಹೆಗ್ಡೆ(2.20) ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.
ಗ್ರೋಮ್ಸ್ ಬಾಯ್ಸ್(ಯು-16) ವಿಭಾಗದ ಫೈನಲ್ಸ್’ನಲ್ಲಿ ಪ್ರಹ್ಲಾದ್ ಶ್ರೀರಾಮ್ 11.06 ಅಂಕಗಳೊಂದಿಗೆ ಗೆಲುವು ದಾಖಲಿಸಿದರು. ಹರಿಷ್ಠಿ (9.67) ಮತ್ತು ಸೊಮ್ಸೇಥಿ(9.30) ಅವರೊಂದಿಗೆ ಈ ವಿಭಾಗದ ಪೈಪೋಟಿ ತೀವ್ರವಾಗಿತ್ತು.

ಈ ಬಗ್ಗೆ ಮಾತನಾಡಿದ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಉಪಾಧ್ಯಕ್ಷ ಹಾಗೂ ಮಂತ್ರ ಸರ್ಫಿಂಗ್ ಕ್ಲಬ್ ನಿರ್ದೇಶಕ ರಾಮಮನೋಹರ್ ರಂಜಪೆ, ಸ್ಪರ್ಧೆ ವಿಳಂಬವಾಗಿದ್ದರು ಅದರ ಗುಣಮಟ್ಟ ಅತ್ಯುತ್ತಮವಾಗಿತ್ತು. ರಾಷ್ಟ್ರೀಯ ಸರಣಿಯ ಎರಡನೇ ಹಂತವಾಗಿದ್ದ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಅನ್ನು ರದ್ದು ಪಡಿಸಿದ್ದರೆ, ಸ್ಪರ್ಧಾರ್ಥಿಗಳ ಶ್ರೇಯಾಂಕಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post