ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಸರಾ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಬೆಂಗಳೂರಿನಿಂದ ಹೊಸಪೇಟೆ ನಡುವೆ ಎರಡು ಟ್ರಿಪ್ ವಿಶೇಷ ಎಕ್ಸ್’ಪ್ರೆಸ್ ರೈಲು ಸಂಚರಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ಪ್ರಕಟಿಸಿದ್ದು, ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಹೊಸಪೇಟೆ ನಡುವೆ ತಲಾ ಎರಡು ಟ್ರಿಪ್’ಗಳಿಗೆ ವಿಶೇಷ ಎಕ್ಸ್’ಪ್ರೆಸ್ ರೈಲನ್ನು ಓಡಿಸಲಿದೆ.
ರೈಲು ಸಂಖ್ಯೆ 06215 ಎಸ್’ಎಂವಿಟಿ ಬೆಂಗಳೂರು – ಹೊಸಪೇಟೆ ವಿಶೇಷ ಎಕ್ಸ್’ಪ್ರೆಸ್ ರೈಲು ಸೆಪ್ಟೆಂಬರ್ 26 ಮತ್ತು 28, 2025 ರಂದು ಸಂಜೆ 7:00 ಕ್ಕೆ ಎಸ್’ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 4:15ಕ್ಕೆ ಹೊಸಪೇಟೆ ತಲುಪಲಿದೆ.
ವಾಪಸಾತಿ ಪ್ರಯಾಣದಲ್ಲಿ, ರೈಲು ಸಂಖ್ಯೆ 06216 ಹೊಸಪೇಟೆ – ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್’ಪ್ರೆಸ್ ರೈಲು ಸೆಪ್ಟೆಂಬರ್ 27 ಮತ್ತು 29, 2025 ರಂದು ರಾತ್ರಿ 8:45 ಕ್ಕೆ ಹೊಸಪೇಟೆಯಿಂದ ಹೊರಟು ಮರುದಿನ ಬೆಳಿಗ್ಗೆ 08:10 ಕ್ಕೆ ಎಸ್’ಎಂವಿಟಿ ಬೆಂಗಳೂರು ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ರೈಲು ಎರಡೂ ಮಾರ್ಗಗಳಲ್ಲಿ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆೆಂಟ್ ಮತ್ತು ತೋರಣಗಲ್ಲು ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.
ಎಷ್ಟು ಬೋಗಿಗಳು ಇರಲಿವೆ?
ಈ ರೈಲು ಒಟ್ಟು 19 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ ಒಂದು ಎಸಿ 2-ಟೈರ್, ಮೂರು ಎಸಿ 3-ಟೈರ್, ಹತ್ತು ಸ್ಲೀಪರ್ ಕ್ಲಾಸ್, ಮೂರು ಸಾಮಾನ್ಯ ಎರಡನೇ ದರ್ಜೆ ಹಾಗೂ ಎರಡು ಎಸ್’ಎಲ್’ಆರ್/ಡಿ ಬೋಗಿಗಳು ಇರಲಿವೆ.
ಚಳಗೇರಿ ನಿಲ್ದಾಣದಲ್ಲಿ ರೈಲು ನಿಲುಗಡೆ ಮುಂದುವರಿಕೆ
ರಾಣೇಬೆನ್ನೂರು ಮತ್ತು ಹರಿಹರ ನಿಲ್ದಾಣಗಳ ನಡುವೆ ಇರುವ ಚಳಗೇರಿ ನಿಲ್ದಾಣದಲ್ಲಿ ರೈಲು ಸಂಖ್ಯೆ 17391/17392 ಕೆಎಸ್’ಆರ್ ಬೆಂಗಳೂರು – ಸಿಂಧನೂರು – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್’ಗೆ ನೀಡಲಾಗಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಮುಂದುವರೆಸಲಿದೆ.
ಈ ತಾತ್ಕಾಲಿಕ ನಿಲುಗಡೆಯು ಅಕ್ಟೋಬರ್ 1, 2025 ರಿಂದ ಡಿಸೆಂಬರ್ 31, 2025 ರವರೆಗೆ, ಮುಂದಿನ ಮೂರು ತಿಂಗಳ ಅವಧಿಗೆ ಜಾರಿಯಲ್ಲಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post