ಹೈದರಾಬಾದ್: ಹೌದು ನೀವು ಓದಿದ್ದು ಸರಿ… ಅದು ಶ್ವಾನಗಳಿಗಾಗಿಯೇ ನಿರ್ಮಿಸಿರುವ ಪಾರ್ಕ್…
ಇದು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಶ್ವಾನಗಳಿಗಾಗಿಯೇ ನಿರ್ಮಾಣವಾಗಿರುವ ಉದ್ಯಾನವನ. ಹೈದರಾಬಾದ್ ಪುರಸಭೆಯಿಂದ ಸುಮಾರು 1.3 ಎಕರೆ ಪ್ರದೇಶದಲ್ಲಿ, 1.2 ಕೋಟಿ ರೂ.ವೆಚ್ಚದಲ್ಲಿ ಪಾರ್ಕ್ ನಿರ್ಮಿಸಲಾಗಿದೆ.
ಈ ಕುರಿತಂತೆ ಮಾತನಾಡಿರುವ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್ ಪಶ್ಚಿಮ ವಲಯ ಆಯುಕ್ತೆ ಹರಿಚಂದನ್ ದಸರಾಯ್, ಈ ಜಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಸುರಿಯಲಾಗುತ್ತಿತ್ತು. ಈ ಸ್ಥಳವನ್ನು ಈಗ ಶ್ವಾನಪಾರ್ಕ್ ಆಗಿ ಪರಿವರ್ತಿಸಲಾಗಿದ್ದು, ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
India's first exclusive dog park has been set up in Hyderabad and will be inaugurated soon. The park offers training & exercise spaces for dogs, splash pools, an amphitheater among others. The park has been certified by The Kennel Club of India. pic.twitter.com/GD6Xctbmh4
— ANI (@ANI) September 17, 2018
ಸಾರ್ವಜನಿಕರು ತಮ್ಮ ಶ್ವಾನಗಳನ್ನು ಈ ಉದ್ಯಾನವನಕ್ಕೆ ಕರೆತರಬಹುದು. ಈ ಪಾರ್ಕ್‌ನಲ್ಲಿಯೇ ಬೆಕ್ಕುಗಳಿಗೂ ಅವಕಾಶ ಕಲಿಸುವ ಆಲೋಚನೆಯಲ್ಲಿದ್ದೇವೆ. ಆದರೆ ಈ ಬಗ್ಗೆ ನಂತರದ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
We converted a dumping yard to dog park at Rs 1.2 Crore. The park is spread across 1.5 acres of land. We have also thought of adding a cat corner in the park but we will wait for that: Hari Chandana Dasari, Zonal Commissioner, West Zone, Greater Hyderabad Municipal Corporation pic.twitter.com/eKECPu2zkY
— ANI (@ANI) September 17, 2018
ಕೆನ್ನೆಲ್ ಆಫ್ ಕ್ಲಬ್‌ನಿಂದ ಪ್ರಮಾಣೀಕೃತಗೊಂಡಿರುವ ಈ ಉದ್ಯಾನವನದಲ್ಲಿ ವಾಕಿಂಗ್ ಟ್ರಾಕ್, ಶ್ವಾನಗಳಿಗಾಗಿ ಕ್ಲಿನಿಕ್, ತರಬೇತಿ, ವ್ಯಾಯಾಮ, ಬಯಲು ರಂಗಮಂದಿರ ಸೇರಿದಂತೆ ಹಲವಾರು ಸೌಕರ್ಯಗಳನ್ನು ಕಲ್ಪಿಸಲಾಗಿದೆ.






Discussion about this post