ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಶ್ವದ ಭೂಟಪ ಹಾಗೂ ಬಾಹ್ಯಾಕಾಶ ಲೋಕದಲ್ಲಿ ಈಗಾಗಲೇ ದಾಖಲೆ ಬರೆದಿರುವ ಭಾರತ ಈಗ ಚಂದ್ರನ ದಕ್ಷಿಣ ಧ್ರುವದ ಮೇಲೆ ನಮ್ಮ ದೇಶದ ಗುರುತನ್ನು ಮೂಡಿಸುವ ಮೂಲಕ ಇನ್ನೊಂದು ಇತಿಹಾಸ ಸೃಷ್ಠಿ ಮಾಡಿದೆ.
ಈ ಕುರಿತಂತೆ ವಿಕ್ರಂ ಲ್ಯಾಂಡರ್’ನಿಂದ #VikramLander ಪ್ರಗ್ಯಾನ್ ರೋವರ್ #PragyanRover ಚಂದ್ರನ ಮೇಲೆ ಇಳಿಯುವ ವೀಡಿಯೋವನ್ನು ಇಸ್ರೋ #ISRO ಬಿಡುಗಡೆ ಮಾಡಿದ್ದು, ಇದನ್ನು ಸ್ಪಷ್ಟಪಡಿಸಿದೆ.
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿರುವ ರೋವರ್ ಈಗಾಗಲೇ ತನ್ನ ಕೆಲಸವನ್ನು ಆರಂಭಿಸಿದ್ದು, ಇಸ್ರೋ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ರೋವರ್ ಚಂದ್ರನ ಮೇಲೆ ಇಳಿಯುವ ದೃಶ್ಯ ಸೆರೆಯಾಗಿದೆ.
ಚಂದ್ರಯಾನ-3 #Chandrayana3 ಆಗಸ್ಟ್ 23ರಂದು ಬುಧವಾರ ಸಂಜೆ 6.04ಕ್ಕೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಯಶಸ್ವಿಯಾಗಿ ನಡೆಸಿತು.
ಸುಮಾರು 4 ಗಂಟೆಗಳ ನಂತರ, ಪ್ರಗ್ಯಾನ್ ರೋವರ್ ಮೇಲ್ಮೈಯಲ್ಲಿ ಹೊರಬಂದಿದೆ. ಈ ಕ್ಷಣವನ್ನು ಇಸ್ರೋ ಹಂಚಿಕೊಂಡ ಇತ್ತೀಚಿನ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ.
ಇಸ್ರೋ ಬಿಡುಗಡೆ ಮಾಡಿದ ಕಲರ್ ವೀಡಿಯೋದಲ್ಲಿ ಪ್ರಗ್ಯಾನ್ ರೋವರ್’ನ ಸೌರ ಫಲಕವು ಸೂರ್ಯನ ಬೆಳಕನ್ನು ಪಡೆಯುತ್ತಿದೆ. ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್’ನ ಸುಂದರವಾದ ನೆರಳು ಕೂಡ ಕಂಡುಬಂದಿದೆ.
… … and here is how the Chandrayaan-3 Rover ramped down from the Lander to the Lunar surface. pic.twitter.com/nEU8s1At0W
— ISRO (@isro) August 25, 2023
ವೀಡಿಯೋದಲ್ಲಿ ಕಾಣಿಸುವಂತೆ ಇಲ್ಲಿ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ತುಂಬಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವಿಕ್ರಮ್ ತುಲನಾತ್ಮಕವಾಗಿ ಬಯಲು ಪ್ರದೇಶಕ್ಕೆ ಬಂದಿಳಿದಿದೆ ಎಂದು ತೋರಿಸುತ್ತದೆ. ಅದು ಪ್ರಗ್ಯಾನ್ ಮೂನ್ವಾಕ್ #MoonWalk ಮಾಡಲು ಅವಕಾಶವನ್ನು ನೀಡುತ್ತದೆ.
ಸ್ಪಷ್ಟವಾಗಿ ಗೋಚರಿಸಿದ ಲಾಂಛನ
ಇನ್ನು, ಪ್ರಗ್ಯಾನ್ ರೋವರ್’ನ ಚಕ್ರದ ಮೇಲೆ ಇಸ್ರೋ #ISRO ಮತ್ತು ಭಾರತದ ರಾಷ್ಟ್ರ ಲಾಂಛನದ ಅಚ್ಚು ಸ್ಪಷ್ಟವಾಗಿ ವಿಡಿಯೋದಲ್ಲಿ ಗೋಚರಿಸುತ್ತಿದೆ. ಹೀಗಾಗಿ ಚಂದ್ರನ ಮೇಲೆ ಲ್ಯಾಂಡರ್ ಮತ್ತು ರೋವರ್ ಯಶಸ್ವಿಯಾಗಿ ಇಳಿಯುವುದರೊಂದಿಗೆ, ಚಂದ್ರನ ನೆಲದ ಮೇಲೆ ಸಾವಿರಾರು ವರ್ಷಗಳ ಕಾಲ ಅಳಿಯದ ರೀತಿಯಲ್ಲಿ ಇಸ್ರೋದ ಚಿಹ್ನೆ ಮತ್ತು ಭಾರತದ ರಾಷ್ಟ್ರ ಲಾಂಛನ ಚಿತ್ರಣ ಮೂಡಿದೆ. ಚಂದ್ರನಲ್ಲಿ ಯಾವುದೇ ವಾತಾವರಣ ಇಲ್ಲದ ಕಾರಣ ಈ ಎರಡೂ ಚಿಹ್ನೆಗಳು ಅಲ್ಲಿ ಸಾವಿರಾರು ವರ್ಷ ಹಾಗೆಯೇ ಇರಲಿದೆ ಎಂದು ವಿಶ್ಲೇಷಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post