ಚಳ್ಳಕೆರೆ: ಇಂದಿರಾಗಾಂಧಿ ದೇಶ ಕಂಡ ಮೊದಲ ಮಹಿಳಾ ಪ್ರಧಾನಿ ಉಕ್ಕಿನ ಮಹಿಳೆಯಾಗಿದ್ದು, ದೇಶಕ್ಕಾಗಿ ದುಡಿದ ಧೀಮಂತ ನಾಯಕಿ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 35 ನೆಯ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಮಸ್ಕರಿಸಿ ಮಾತನಾಡಿದರು.
ಸುಮಾರು 15 ವರ್ಷಗಳ ಕಾಲ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಿ ಬಡವರ ಬಗ್ಗೆ ತುಂಭ ಕಾಳಜಿ ಇದ್ದ ಇವರು, ಅಮೃತಸರದ ಸ್ವರ್ಣ ಮಂದಿರದಲ್ಲಿ ಆಪರೇಷನ್ ಬ್ಲೂ ಸ್ಟಾರ್ ಬಳಿಕ ಅಂಗ ರಕ್ಷಕರಿಂದಲೇ ಹತ್ಯೆಗೀಡಾಗಿದ್ದು ದುರಂತ ಎಂದು ವಿಷಾದಿಸಿದರು.
ಮೂರು ಬಾರಿ ಪ್ರಧಾನಿಯಾಗಿ ಅಧಿಕಾರ ನಡೆಸಿದಂತಹ ಇವರು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡವರ ಬಗ್ಗೆ ತುಂಬ ಕಳಜಿ ವಹಿಸಿದ್ದು, ಅಂತಹವರಿಗೆ ಬೇಕಾಗುವಂತಹ ಸವಲತ್ತುಗಳನ್ನು ಅಂದೇ ಮಾಡಿದ್ದರು ಎಂದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ಆರ್ಥಿಕ ಮಟ್ಟ ಸುಧಾರಿಸಿತ್ತು. ಆದರೆ ದೇಶದಲ್ಲಿ ಬಿಜೆಪಿ ಸರ್ಕಾರದ ಅಧಿಕಾರ ಅವಧಿಯಲ್ಲಿ ಆರ್ಥಿಕ ಮಟ್ಟ ಕುಸಿಯುತ್ತಿದೆ. ದೇಶದಲ್ಲಿ ಆಡಳಿತ ವ್ಯವಸ್ಥೆ ದಿಕ್ಕು ತಪ್ಪಿದೆ ಎಂದು ಆರೋಪಿಸಿದರು.
ಪುರಸಭೆ ಮಾಜಿ ಸದಸ್ಯ ಎಚ್.ಎಸ್. ಸೈಯದ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಗೀತಾಬಾಯಿ, ಕಾಂಗ್ರೆಸ್ ಕಾರ್ಯಕರ್ತೆ ಮಂಜುಳಮ್ಮ ಮಾತನಾಡಿದರು.
ನಗರಸಭೆ ಸದಸ್ಯ ಮಲ್ಲಿಕಾರ್ಜುನ್, ವೀರಭದ್ರಪ್ಪ, ಸುಮ, ಬಿ.ಟಿ. ರಮೇಶ್ ಗೌಡ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ ಶಂಕರ್, ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಗಿರಿಯಪ್ಪ, ತಾಪಂ ಸದಸ್ಯ ಎಚ್. ಆಂಜನೇಯ, ಮುಖಂಡರಾದ ಟಿ. ತಿಪ್ಪೇಸ್ವಾಮಿ, ಅನ್ವರ ಸಾಬ್, ಶಿವಣ್ಣ, ಮುಜಿಬುಲ್ಲಾ, ವೀರಭದ್ರ, ಪುರುಷೋತ್ತಮ ನಾಯಕ, ಮಹೇಶ್, ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಲಕ್ಷ್ಮೀದೇವಿ, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093, 94487 22200
Discussion about this post