ಕಲ್ಪ ಮೀಡಿಯಾ ಹೌಸ್ | ಇಂದೋರ್ |
ದೇವಾಲಯದ ಮೆಟ್ಟಿಲು ಬಾವಿ ಕುಸಿದುಬಿದ್ದ ಪರಿಣಾಮ 12 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್’ನಲ್ಲಿ ನಡೆದಿದೆ.
ಇಂದೋರ್’ನ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಾಲಯದಲ್ಲಿರುವ ಪುರಾತನ ದೊಡ್ಡ ಬಾವಿ(ಬಾವಡಿ) ಇಂದು ಕುಸಿದಿದೆ. ರಾಮನವಮಿ ಹಿನ್ನೆಲೆಯಲ್ಲಿ ಇಂದು ಜನ ದಟ್ಟಣೆ ಹೆಚ್ಚಾಗಿತ್ತು. ಈ ವೇಳೆ ಮೆಟ್ಟಿಲು ಬಾವಿ ಕುಸಿದಿದ್ದು, ಸುಮಾರು 25 ಮಂದಿ ಒಳಕ್ಕೆ ಬಿದ್ದಿದ್ದಾರೆ. 12 ಮಂದಿ ಸಾವನ್ನಪ್ಪಿದ್ದು, 19 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

Also read: ತರಾತುರಿಯ ಎನ್‌ಇಪಿ ಅನುಷ್ಠಾನದಿಂದ ಉನ್ನತ ಶಿಕ್ಷಣಕ್ಕೆ ತೊಂದರೆ: ಪ್ರೊ. ಪೂರ್ಣಾನಂದ ಆತಂಕ
ಘಟನೆ ಕುರಿತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಮಾತನಾಡಿದ್ದು, ಮಾಹಿತಿ ಪಡೆದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.












Discussion about this post