No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Wednesday, July 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ದಾಖಲೆ ಜಯ ಗಳಿಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ: ಅಮಿತ್ ಶಾ

kalpa News by kalpa News
March 30, 2023
in ರಾಷ್ಟ್ರೀಯ
0
ದಾಖಲೆ ಜಯ ಗಳಿಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ: ಅಮಿತ್ ಶಾ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಮೇ 10 ರಂದು ನಡೆಯಲಿರುವ 224 ಸ್ಥಾನಗಳ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ #KarnatakaAssemblyElection ಭರ್ಜರಿ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ರಾಜ್ಯದಲ್ಲಿ ಸತತ ಎರಡನೇ ಅವಧಿಗೆ ಸರ್ಕಾರ ರಚಿಸುವ ಮೂಲಕ ದಾಖಲೆ ಬರೆಯುವ ಭರವಸೆಯಲ್ಲಿದ್ದಾರೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ, ಚುನಾವಣಾ ಪೂರ್ವದಲ್ಲಿ ಅಥವಾ ನಂತರದಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಚುನಾವಣಾ ಚಾಣಕ್ಯ ಅಮಿತ್ ಶಾ #AmitShah ಸ್ಪಷ್ಟವಾಗಿ ಸ್ಪಷ್ಟಪಡಿಸಿದರು.

ಅಮಿತ್ ಶಾರವರು “ಕರ್ನಾಟಕದಲ್ಲಿ ನಾನು ಒಂಬತ್ತು ದಿನಗಳನ್ನು ಕಳೆದಿದ್ದೇನೆ. ರಾಜ್ಯದ ಐದೂ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಆದ್ದರಿಂದ ಅರ್ಧದಷ್ಟು ಕ್ಷೇತ್ರಗಳಿಗಿಂತ ಹೆಚ್ಚು ಗೆದ್ದು ರಾಜ್ಯದಲ್ಲಿ ಸಂಪೂರ್ಣ ಬಹುಮತ ಸಾಧಿಸಲಿದ್ದೇವೆ ಎಂದು ವಿಶ್ವಾಸದಿಂದ ಹೇಳಬಲ್ಲೆ. ಇದು ಮೋದಿ ನಾಯಕತ್ವದಲ್ಲಿಯೇ ನಡೆಯುತ್ತದೆ. ಚಿಂತಿಸಬೇಡಿ,” ಎಂದು ನ್ಯೂಸ್ 18 ಆಯೋಜಿಸಿದ್ದ ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಹೇಳಿದರು.

ಜೆಡಿಎಸ್ ಜೊತೆಗಿನ ಯಾವುದೇ ಮೈತ್ರಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಶಾ, ಕರ್ನಾಟಕದ ಎಲ್ಲಾ 224 ಸ್ಥಾನಗಳಲ್ಲಿ ಭಾಜಪ #BJP ಸ್ವಂತ ಬಲದಿಂದಲೇ ಸ್ಪರ್ಧಿಸಲಿದೆ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನೋಡುತ್ತಿಲ್ಲ, ನಮ್ಮ ಪಕ್ಷ ಕಳೆದ ಚುನಾವಣೆಯಲ್ಲಿ ಗಳಿಸಿದ 104 ಸ್ಥಾನಗಳಿಗಿಂತ ಹೆಚ್ಚು ಕ್ಷೇತ್ರಗಳನ್ನು ಜಯಿಸುವ ವಿಶ್ವಾಸವಿದೆ.
“ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ,” ಎಂದ ಶಾ , “ಲಕ್ಷಾಂತರ ಕಾರ್ಯಕರ್ತರೊಂದಿಗೆ” ಚರ್ಚೆಯ ನಂತರ ನಮ್ಮ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಹೊರತರಲಿದೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿವೆ.

ಮಾಜಿ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವ್ಯಂಗ್ಯವಾಡಿದ ಶಾ, ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅವರನ್ನು ಪ್ರಧಾನಿ ಮೋದಿ ಇದಿರು ತಂದು ಹೋರಾಡಿದರೆ, ಬಿಜೆಪಿಗೆ ಅದಕ್ಕಿಂತ ಉತ್ತಮ ಗೆಲುವಿನ ಸೂತ್ರವಿಲ್ಲವೆಂದು ಹೇಳಿದರು.

”ಅವರು ಕರ್ನಾಟಕ ಚುನಾವಣೆಯನ್ನು ‘ಮೋದಿ v/s ಗಾಂಧಿ’ ಹೋರಾಟ ಎಂದು ಬಿಂಬಿಸಿದರೆ, ನಮಗೇನು ಅಭ್ಯಂತರವಿಲ್ಲ. ವಾಸ್ತವವಾಗಿ, ಬಿಜೆಪಿಗೆ ಇದಕ್ಕಿಂತ ಉತ್ತಮವಾದ ಗೆಲುವಿನ ಸೂತ್ರ ಸಿಗಲು ಸಾಧ್ಯವಿಲ್ಲವೆಂದು” ಶಾ ನ್ಯೂಸ್ 18 ರೈಜಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಹೇಳಿದಾಗ ಪ್ರೇಕ್ಷಕರು ನಗುವಿನ ಅಲೆಗಳಲ್ಲಿ ತೇಲಿದರು.

ದೆಹಲಿಯ ರಾಜಕೀಯ ಪಂಡಿತರ ಒಂದು ವಿಭಾಗದ ಪ್ರಕಾರ ಹಳೆಯ ಭವ್ಯವಾದ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸಲು, ಕಾಂಗ್ರೆಸ್‌ಗೂ ಒಬ್ಬ ಅಮಿತ್ ಶಾ ತುಂಬಾ ಅಗತ್ಯವಿದೆ ಎಂದು ನಂಬುತ್ತಾರೆ. ಅವರ ಇನ್ನೊಂದು ಅಭಿಪ್ರಾಯವೆಂದರೆ, ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯ ಭವಿಷ್ಯವನ್ನು ಬೇರೆಯವರಿಗಿಂತ ಉತ್ತಮವಾಗಿಸಲು ರಾಹುಲ್ ಗಾಂಧಿ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಹಲವು ಚುನಾವಣೆಗಳಲ್ಲಿ ಗಾಂಧಿ ಪ್ರಚಾರ ಮಾಡಿದಲ್ಲೆಲ್ಲಾ ಕಾಂಗ್ರೆಸ್ ತುಂಬಾ ಕಳಪೆ ಪ್ರದರ್ಶನವನ್ನು ನೀಡಿದೆ.

ಕರ್ನಾಟಕದಲ್ಲಿ ಒಬಿಸಿ ವರ್ಗದಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ಜಾರಿಗೆ ತಂದಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಬಿಜೆಪಿ ಸರ್ಕಾರವು ಇತ್ತೀಚೆಗೆ ಅದನ್ನು ರದ್ದುಪಡಿಸಿ ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತರಿಗೆ ಹಂಚಿಕೆ ಮಾಡಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಅಸಂವಿಧಾನಿಕ ಕ್ರಮ. ಇದನ್ನು ಮೊದಲೇ ತೆಗೆದು ಹಾಕಬೇಕಿತ್ತು.
Kalahamsa Infotech private limitedಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅಮಿತ್ ಶಾ ಅಷ್ಟಕ್ಕೇ ನಿಲ್ಲದೆ, ಲೋಕಸಭೆಯಿಂದ ರಾಹುಲ್ ಗಾಂಧಿಯವರ ಅನರ್ಹತೆ ಮತ್ತು ನಂತರ ಕಾಂಗ್ರೆಸ್ ಸೃಷ್ಟಿಸುತ್ತಿರುವ ಗದ್ದಲದ ಬಗೆಗಿನ ಪ್ರಶ್ನೆಗೆ ಶಾ, “ಗಾಂಧಿ ಕುಟುಂಬವು ತನಗಾಗಿ ಪ್ರತ್ಯೇಕ ಕಾನೂನನ್ನು ಏಕೆ ಬಯಸುತ್ತದೆ? ಒಂದು ಕುಟುಂಬಕ್ಕೆ ಪ್ರತ್ಯೇಕ ಕಾನೂನು ಬೇಕೇ ಎಂಬುದನ್ನು ಭಾರತದ ಜನತೆಯೇ ನಿರ್ಧರಿಸಬೇಕು ಎಂದರು.

“ಮೋದಿ” ಸಮುದಾಯದ ಬಗೆಗಿನ ಅವಹೇಳನಕಾರಿ ಹೇಳಿಕೆಗಾಗಿ ಸೂರತ್ ಕೋರ್ಟ್ ಇತ್ತೀಚಿಗೆ ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಇದರ ಆಧಾರದ ಮೇಲೆ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿತು. ತರುವಾಯ, ರಾಹುಲ್‌ಗೆ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಲಾಯಿತು. ಈ ಇಡೀ ಸಂಚಿಕೆಯನ್ನು ತನ್ನ ನಾಯಕನ ವಿರುದ್ಧದ ಪಿತೂರಿ ಎಂದು ಬಿಂಬಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಮತ್ತು ವಿವಿಧ ರಾಜ್ಯಗಳಲ್ಲಿನ ನಿರ್ಣಾಯಕ ಚುನಾವಣೆಗಳ ಮುನ್ನ ಇದರಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಆದರೆ ಶಿಕ್ಷೆಯ ವಿರುದ್ಧ ಇದುವರೆಗೆ ಯಾವುದೇ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿಲ್ಲ.

ಪ್ರಧಾನಿಯನ್ನು ದೂಷಿಸುತ್ತಾ ಕೂರುವ ಬದಲು, ದೋಷಾರೋಪಣೆಯ ವಿರುದ್ಧ ಉನ್ನತ ನ್ಯಾಯಾಲಯಗಳಿಗೆ ತೆರಳುವಂತೆ ಗಾಂಧಿಗೆ ಸೂಚಿಸಿದ ಶಾ, ರಾಹುಲ್ ಗಾಂಧಿಯವರ ದುರಹಂಕಾರವೇ ಅವರಿಗೆ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸದಂತೆ ತಡೆಯುತ್ತಿದೆ ಎಂದು ಹೇಳಿದರು. “ಇವರಿಗೆ ಈ ದುರಹಂಕಾರ ಎಲ್ಲಿಂದ ಬರುತ್ತದೆ? ಇಲ್ಲಿಯವರೆಗೆ ಲಾಲೂ ಪ್ರಸಾದ್ ಯಾದವ್, ಜೆ ಜಯಲಲಿತಾ ಮತ್ತು ರಶೀದ್ ಆಳ್ವಿ ಸೇರಿದಂತೆ 17 ಜನರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ, ಆದರೆ ಯಾರೂ ಇವರಂತೆ ಗದ್ದಲ ಸೃಷ್ಟಿಸಲಿಲ್ಲ ”ಎಂದು ಶಾ ಕಾಂಗ್ರೆಸ್‌ನ ಕಿವಿ ಹಿಂಡಿದರು.

ಎಡಪಂಥೀಯ ಉಗ್ರವಾದದ (Left Wing Extremism) ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶಾ, ಕೇಂದ್ರದಲ್ಲಿನ ಕಳೆದ ಒಂಬತ್ತು ವರ್ಷಗಳ ಭಾಜಪದ ಆಡಳಿತದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಮತ್ತು ಎಡಪಂಥೀಯ ಉಗ್ರವಾದ ಸಂಬಂಧಿತ ಘಟನೆಗಳು ನಿರಂತರವಾಗಿ ಕ್ಷೀಣಿಸುತ್ತಿವೆ ಎಂದು ಹೇಳಿದರು. ಒಂದೆರಡು ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಅವರು ಚಿಕ್ಕ ಅಸ್ತಿತ್ವ ಹೊಂದಿದ್ದರೂ, ಈ ಪಿಡುಗಿನ ವಿರುದ್ಧದ ಹೋರಾಟವು ವಿಜಯದ ಹಾದಿಯಲ್ಲಿದೆ. ಹಾಗೇ ಎಡಪಂಥೀಯ ಉಗ್ರವಾದ ಸಂಬಂಧಿತ ಹಿಂಸಾತ್ಮಕ ಘಟನೆಗಳ ಸಂಖ್ಯೆಯು 76% ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Amit shahBENGALURUBJPcongressKannada News Websitekarnataka assembly election 2023Latest News KannadaPM Narendra ModiPolitical Newsಅಮಿತ್ ಶಾಕರ್ನಾಟಕ ವಿಧಾನಸಭಾ ಚುನಾವಣೆ 2018ಬೆಂಗಳೂರುಭಾರತೀಯ ಜನತಾ ಪಕ್ಷ
Share199Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೇವಾಲಯದ ಮೆಟ್ಟಿಲು ಬಾವಿ ಕುಸಿದು 12 ಮಂದಿ ಸಾವು: ಉಳಿದವರ ರಕ್ಷಣೆ

Next Post

ಮಡಿಕೇರಿ ಅಂತಾರಾಜ್ಯ ಗಡಿಯಲ್ಲಿ ಎಷ್ಟು ಚೆಕ್ ಪೋಸ್ಟ್ ಹಾಕಲಾಗಿದೆ? ಏನೆಲ್ಲಾ ಕ್ರಮ ವಹಿಸಲಾಗಿದೆ?

kalpa News

kalpa News

Next Post
ಜಿಲ್ಲೆಯಲ್ಲಿ ಚುನಾವಣಾ ಚೆಕ್ ಪೋಸ್ಟ್: ಸೀಜ್ ಆಯ್ತು ನಾನ್ ಸ್ಟಿಕ್ ತವಾ, ಇಡ್ಲಿ ಕುಕ್ಕರ್, ಸೀರೆ

ಮಡಿಕೇರಿ ಅಂತಾರಾಜ್ಯ ಗಡಿಯಲ್ಲಿ ಎಷ್ಟು ಚೆಕ್ ಪೋಸ್ಟ್ ಹಾಕಲಾಗಿದೆ? ಏನೆಲ್ಲಾ ಕ್ರಮ ವಹಿಸಲಾಗಿದೆ?

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL