ಕಲ್ಪ ಮೀಡಿಯಾ ಹೌಸ್ | ಇಂದೋರ್ |
ಎರಡು ಮಹಡಿಯ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಏಳು ಮಂದಿ ಸಜೀವ ದಹನಗೊಂಡಿರುವ ಘಟನೆ ಇಂದೋರ್‌ನ ಸ್ವರ್ಣ ಭಾಗ್ ಕಾಲೊನಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಮನೆಯೊಂದರ ಒಳಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ಹತ್ತಿ ಉರಿದಿರಬಹುದು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು, ಏಳು ಮಂದಿ ಸಜೀವ ದಹನಗೊಂಡರೆ 9 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ಇದುವರೆಗೆ ರಕ್ಷಿಸಿದ್ದಾರೆ ಎಂದು ಇಂದೋರ್ ಪೊಲೀಸ್ ಆಯುಕ್ತ ಹರಿನಾರಾಯಣ ಚಾರಿ ಮಿಶ್ರ ತಿಳಿಸಿದ್ದಾರೆ.
Also read: ಬಿಗ್ ಶಾಕ್! ಇಂದಿನಿಂದ ಅಡುಗೆ ಅನಿಲ ದರ 50ರೂ. ಹೆಚ್ಚಳ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post