ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಯುದ್ಧದ ವಾತಾವರಣ ಹೊಗೆಯಾಡುತ್ತಿರುವ ಬೆನ್ನಲ್ಲೇ, ಉತ್ತರ ಅರಬ್ಬೀ ಸಮುದ್ರದಲ್ಲಿ ಐಎಸ್’ಎಸ್ ವಿಕ್ರಮಾದಿತ್ಯ ಹಾಗೂ ನ್ಯೂಕ್ಲಿಯರ್ ಸಬ್’ಮರೀನ್’ಗಳನ್ನು ಭಾರತ ನಿಯೋಜನೆ ಮಾಡಿದೆ.
ಪುಲ್ವಾಮಾ ದಾಳಿ ನಂತರ ಭಾರತ ಹಾಗೂ ಪಾಕ್ ನಡುವೆ ಯಾವ ಸಂದರ್ಭದಲ್ಲಿ ಏನಾಗುತ್ತದೋ ಎಂಬಂತೆ ಇರುವಂತೆಯೇ ಈ ಬೆಳವಣಿಗೆ ಕುತೂಹಲ ಮೂಡಿಸಿದೆ.
ಥ್ರೋಪೆಕ್ಸ್ 19 ಅಥವಾ ಥಿಯೇಟರ್ ಮಟ್ಟ ಕಾರ್ಯಾಚರಣೆಯ ಸಿದ್ಧತೆ ವ್ಯಾಯಾಮ ಈಗಾಗಲೇ ಆರಂಭವಾಗಿದ್ದು ನೌಕಾಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ನೌಕಾಗಡಿಯಲ್ಲಿ ಅಭ್ಯಾಸ ನಿರಂತರವಾಗಿ ನಡೆಯುತ್ತಲೇ ಇದೆ. ಐಎನ್’ಎಸ್ ವಿಕ್ರಮಾದಿತ್ಯ, ನ್ಯೂಕ್ಲಿಯರ್ ಸಬ್’ಮರೀನ್, ವಿವಿಧ ಸಬ್’ಮರೀನ್’ಗಳನ್ನು ನಿಯೋಜನೆ ಮಾಡಲಾಗಿದೆ.

















