ಬೆಂಗಳೂರು: ಎಚ್1 ಎನ್1 ರಾಜ್ಯ ಕಂಡ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನರಾಗಿರುವುದು ರಾಜ್ಯ ಪೊಲೀಸ್ ಇಲಾಖೆಯನ್ನು ದುಃಖದ ಮಡುವಿನಲ್ಲಿ ಮುಳುಗಿಸಿದ್ದು, ಇವರ ಸಾವಿನ ಕುರಿತಾಗಿ ತನಿಖೆಯಾಗಬೇಕು ಎಂಬ ಬೇಡಿಕೆಗಳು ಕೇಳಿಬರಲಾರಂಭಿಸಿವೆ.
ಈ ಕುರಿತಂತೆ ಮಾತನಾಡಿರುವ ಸಚಿವ ಡಿ.ಕೆ. ಶಿವಕುಮಾರ್, ಮಧುಕರ್ ನಾನು ಕಂಡ ಹಾಗೆ ದಕ್ಷ ಅಧಿಕಾರಿಯಾಗಿದ್ದರು. ಅವರ ತಂದೆಯೊಂದಿಗೂ ಸಹ ನನಗೆ ಉತ್ತಮ ಒಡನಾಟವಿತ್ತು. ಇಂತಹ ದಕ್ಷ ಅಧಿಕಾರಿಯ ಸಾವು ಸಹಜವೇ ಅಥವಾ ಅಸಹಜವೋ ಎಂಬ ಕುರಿತಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಮಧುಕರ್ ಸಾವಿನ ಕುರಿತು ಮಾತನಾಡಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಮಧುಕರ್ ಶೆಟ್ಟಿ ಒಬ್ಬ ದಕ್ಷ ಅಧಿಕಾರಿ. ಈ ರೀತಿ ಸಿಗಲು ಸಾಧ್ಯವಿಲ್ಲ. ಚಿಕ್ಕಮಗಳೂರಿಗೆ ಅವರ ನೀಡಿದ ಸೇವೆ ಅಭೂತಪೂರ್ವ. ನನಗೆ ಈಗಲೂ ನೆನಪಿದೆ. ಚಿಕ್ಕಮಗಳೂರಿನಲ್ಲಿ ಭೂ ಒತ್ತುವರಿಯಾದಾಗ ಮಧುಕರ್ ಶೆಟ್ಟಿ ಅವರು ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದರು. ಅವರ ದಕ್ಷತೆ ನಿಜಕ್ಕೂ ಅದ್ಭುತ ಎಂದಿದ್ದಾರೆ.
ಎಚ್೧ಎನ್೧ನಿಂದ ಬಳಲುತ್ತಿದ್ದ ಮಧುಕರ ಶೆಟ್ಟಿ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ಶಸ್ತçಚಿಕಿತ್ಸೆ ಬಳಿಕ ರಕ್ತಸ್ರಾವ ಉಂಟಾಗಿ ಮಧುಕರ್ ಶೆಟ್ಟಿಯವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಉಡುಪಿ ಮೂಲದ ಮಧುಕರ್ ಶೆಟ್ಟಿ 1999ನೆಯ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು.






Discussion about this post