ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಮೆರಿಕಾ ಅಧ್ಯಕ್ಷ ಚುನಾವಣೆಗೆ ಮೊದಲೇ, ಅಭ್ಯರ್ಥಿ ಆಯ್ಕೆಗೆ ಮೊದಲೇ ನಾನು ಒಂದು ಲೇಖನ ಬರೆದಿದ್ದೆ. ಡೋನಾಲ್ಡ್ ಟ್ರಂಪ್ ಎಂಬ ಹುಚ್ಚು ಆಡಳಿತಗಾರ ಎಂಬ ಶೀರ್ಷಿಕೆಯ ಲೇಖನವದು. ನಿಶ್ಚಿತವಾಗಿ ಅಮೆರಿಕಾದ ಗದ್ದುಗೆ ಏರಲಿದ್ದಾನೆ ಎಂದಿದ್ದೆ. ಅದೇ ಪ್ರಕಾರ sweeping majorityಯಲ್ಲಿ ಅಧ್ಯಕ್ಷ ಗಾದಿಗೆ ಏರಿಯೂ ಬಿಟ್ಟ.
ಅದೆಲ್ಲ ಹಿಂದಿನ ಮಾತು. ಈಗ ಈ ಮನುಷ್ಯನ ನಡೆ ಹೇಗಿದೆ?
ಇವನೊಬ್ಬ ಅಪಾಯಕಾರಿ ಮನುಷ್ಯ. ಯಾರಿಗೆ ಎಂದರೆ ಹಕ್ಕು ಸ್ಥಾಪನೆ ಮಾಡುವವರಿಗೆ ಮಾತ್ರ. ಹೇಗೆ ಅಕ್ರಮ ವಲಸಿಗರು ಭಾರತಕ್ಕೆ ನುಸುಳಿ, ಭಾರತದ ಕೆಲ ಮೂರ್ಖ ನಾಯಕರೊಡನೆ ಸೇರಿ ಹಕ್ಕು ಸ್ಥಾಪನೆಗೆ ಹೊರಟು, CAA ಇತ್ಯಾದಿ ಶಾಸನಗಳು ಮಂಡನೆಯಾದಾಗ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳುಮಾಡುತ್ತಾ, ಕಲ್ಲು ತೂರುತ್ತಾ ಪ್ರತಿಭಟಿಸುತ್ತಾರೆಯೋ, ಹಾಗೆಯೇ ಅಮೆರಿಕಾದಲ್ಲೂ ನಡೆಯುವುದನ್ನು ತಡೆಯುವ ಡ್ರೊನಾಲ್ಡ್ ಟ್ರಂಪ್ ಇವರಿಗೆ ಹುಚ್ಚನೆ. ಇವನನ್ನು ಕೆಣಕಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಅಫ್ಘಾನಿಸ್ತಾನದಲ್ಲಿ ಟನ್ ಗಟ್ಲೆ ಬಾಂಬ್ ಸುರಿದು ಭಯೋತ್ಪಾದಕರ ಮಾರಣ ಮಾಡಿದ್ದು ಈ ಹುಚ್ಚು ಆಡಳಿತಗಾರ ಟ್ರಂಪ್. ಈಗ ಇರಾನಿನ ಸರದಿ. ಅಲ್ಲಿನ ಸೇನಾ ಮುಖ್ಯಸ್ತನೇ ಈ ಮತಾಂಧರನ್ನು ಬೆಳೆಸಿ ಪೋಷಿಸುತ್ತಿದ್ದ. ಇದು ತಿಳಿದಾಕ್ಷಣ ಡ್ರೋನ್ ಧಾಳಿಯ ಮೂಲಕ ಆತನನ್ನು ಮುಗಿಸಿದ. ಇದು ಇರಾನಿನ ಪ್ರತಿಷ್ಠೆಗೆ ದೊಡ್ಡ ಕಪ್ಪು ಚುಕ್ಕಿಯಾಯ್ತು. ಯಾರೋ ನಾಗರಿಕರ ಮೇಲೆ ದಾಳಿ ನಡೆದದ್ದಲ್ಲ. ಒಬ್ಬ ಸೇನಾ ಮುಖ್ಯಸ್ತರ ಹತ್ಯೆ ಆಯಿತೆಂದರೆ ಇರಾನ್ ಆಗಲೀ, ಅದರ ಮಿತ್ರರಾಗಲೀ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರತಿ ದಾಳಿಗೆ ಸ್ಕೆಚ್ ಹಾಕಿಯೇ ಹಾಕುತ್ತಾರೆ.
ಭಾರತದ ಅಭಿನಂದನನ್ನು ಬಿಡಿಸಲು ಮೋದಿ ಅಮಿತ್ ಷಾ Plan ಮಾಡಿದಂತೆ, ಇರಾನ್ ಕೂಡಾ ಸುಮ್ಮಿನಿರಲು ಸಾಧ್ಯವೇ ಇಲ್ಲ. ಆದರೆ ಇರಾನ್ ಕೆರಳಿಸಲು ಹೊರಟದ್ದು ಡೊನಾಲ್ಡ್ ಟ್ರಂಪ್ ಅವರನ್ನು. ಹಿಂದಿನ ಒಬಾಮ ಆಗಿರುತ್ತಿದ್ದರೆ ಪರಿಣಾಮವು ಇಷ್ಟು ಗಂಭೀರ ಸ್ವರೂಪಕ್ಕೆ ಹೋಗುತ್ತಿರಲಿಲ್ಲ. ಆದರೆ ಟ್ರಂಪ್ ಕೆರಳಿದ ಎಂದರೆ ಇರಾನಿನ ಹೆಸರನ್ನೇ ಭೂಪಟದಿಂದ ಕಿತ್ತಾನು.
ಟ್ರಂಪ್ ಜಾತಕದ ಫಲವು ಅವನ ಇಡೀ ವ್ಯಕ್ತಿತ್ವವನ್ನೇ ತಿಳಿಸುತ್ತದೆ. ಕಾಳಸರ್ಪ ಯೋಗವಿರುವ ಜಾತಕವಿದು. ಈ ಯೋಗ ಇರುವವರು ಭಾವಕ್ಕನುಗುಣವಾಗಿ ಕ್ರಾಂತಿ ಮಾಡುತ್ತಾರೆ. ಇವರ ಜಾತಕದಲ್ಲಿ ಲಗ್ನಾಧಿಪತಿ ಕರ್ಮದಲ್ಲಿ, ಚಂದ್ರನು ಚತುರ್ಥದಲ್ಲಿ. ಇವರೊಡನೆ ಸೇರಿದ ರಾಹು ಕೇತುಗಳು ಕಾಳಸರ್ಪ ಯೋಗ ನೀಡುತ್ತಾರೆ. ಅಂದರೆ ಸುಖ ಸ್ಥಾನದಿಂದ ಕರ್ಮ ಸ್ಥಾನದವರೆಗೆ ಇವರ ಕ್ರಾಂತಿಕಾರಿ ಪ್ರಭುತ್ವ ನಡೆಯುತ್ತದೆ. ಇಷ್ಟು ಸಾಲದ್ದಕ್ಕೆ ಚಂದ್ರ ದಶಮದಲ್ಲಿ ಕುಜನು ಯೋಗ ಕಾರಕನಾಗಿ ಒಂದು ರೀತಿಯ ಕೆದಕಿ ನೋಡುವ(Police Mind) ಇವರಿಗಿದೆ. ಶೀಘ್ರ ಕೋಪಿಷ್ಟನಾಗಿ ಪೂರ್ವಾಪರ ನೋಡದೆ ಮುಂದುವರಿಯುವ ಜಾಯಮಾನ ಇವರದ್ದು. ಆದರೆ ಇವರ ಜಾತಕದ ಶನಿ ವರ್ಗೋತ್ತಮನಾಗಿ, 0ಡಿಗ್ರಿ ಕರ್ಕದಲ್ಲಿ ದುರ್ಬಲ. ಇದನ್ನೇ ನಾನು ಹೇಳಿದ್ದು ಅಪಾಯಕಾರಿ ಎಂದು. ಸಿಟ್ಟಿಗೆದಹಾಕಬಹುದು. ಬೇಕಾದರೂ ಮಾಡಿ ಹೋದೀತು. ಕೊನೆಗೆ ನಿಮ್ಮ ಸಂತಾನವನ್ನೇ ನಿರ್ನಾಮ ಮಾಡಿಬಿಡುತ್ತೇನೆ ಎಂದು ಅಣ್ವಸ್ತ್ರಕ್ಕೂ ಕೈ ಹಾಕಬಹುದು.
ಇದು ಅತ್ಯಾಧುನಿಕ ತಂತ್ರಜ್ಞಾನದ ಯುಗ. ಕುಳಿತಲ್ಲಿಂದಲೇ ಅಸ್ತ್ರ ಪ್ರಯೋಗ ಮಾಡುವಂತಹ ತಂತ್ರಜ್ಞಾನ ಇದೆ. ಇದು ಎರಡೂ ಕಡೆಯೂ ಇದೆ. ಇದ್ದರೂ, ವಿವೇಚನೆ ಇಲ್ಲದವರ ಹತ್ತಿರ ಹೋರಾಡಬೇಕಿದ್ದರೆ ಸ್ವಲ್ಪ ಎಚ್ಚರಿಕೆ ಬೇಕು. ಇಲ್ಲಿ ಇರಾನ್ ತನ್ನ ಪಟ್ಟು ಬಿಡದೆ ಹಠ ಸಾಧಿಸಿದರೆ ನಿಶ್ಚಿತವಾಗಿಯೂ ಹೆಸರೇ ಹೇಳುವಂತೆ ’ಟ್ರಂಪ್’ ಗೆಲ್ಲುವುದು ನಿಶ್ಚಿತ. ಟ್ರಂಪ್’ಗೆ ಜನವರಿ ನಂತರ ಉತ್ತಮ ಗೋಚರಫಲವೂ ಇದೆ. ಆದರೆ 2020 ಆಗಸ್ಟ್’ಗೆ ಕುಜ ರಾಹು ಸಂಧಿಯ ಕಾಲ. ಇದು ಟ್ರಂಪ್’ಗೆ ಅಪಾಯ, ದುರ್ಮರಣಕ್ಕೂ ಕಾರಣವಾದೀತು. ಆದರೂ ಈ ಸಂಗ್ರಾಮದಲ್ಲಿ ಇರಾನ್ ಹೈರಾಣಾಗುವುದೂ ನಿಶ್ಚಿತ. ಈ ಮಧ್ಯೆ ಮತಾಂಧರು ಭಾರತದ ಮೇಲೆ ಕಣ್ಣಿಟ್ಟಿದ್ದು, ಇದೇ ಸುಸಂದರ್ಭ ಎಂದು ಭಾರತ ಮೇಲೂ ದಾಳಿ ಇಡಬಹುದು.
ಒಮ್ಮೆ ಕಸ ಕಡ್ಡಿ ಹೊಲಸು ಅಹಂಕಾರಿಗಳು ನಾಶ ಆಗಲಿ. ಆಗಲೇ ಸಜ್ಜನರಿಗೆ ನೆಮ್ಮದಿ. ಸಂಗ್ರಾಮ ಎಂದರೆ ಸಾವು ನೋವುಗಳೇ ಇರೋದು. ಅದಕ್ಕೆ ದುಃಖಿಸಿ ಪ್ರಯೋಜನವೂ ಇಲ್ಲ. ಶನಿಯ ಧನುರಾಶಿ, ಮಕರ ರಾಶಿ ಸಂಚಾರವು ಇಂತಹದ್ದಕ್ಕೆ ಪ್ರಚೋದಿಸುತ್ತದೆ. ಮುಂದೆ ಕುಂಭರಾಶಿಗೆ ಬಂದಾಗ ಹಕ್ಕು ಸ್ಥಾಪಿಸಲು ಬರುವ ಅಕ್ರಮಿಗರು ನೆಲಸಮವಾಗಿ, ಪ್ರಭುತ್ವ ಅರ್ಥಗರ್ಭಿತವಾಗುತ್ತದೆ.
Get in Touch With Us info@kalpa.news Whatsapp: 9481252093
Discussion about this post