ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತುಮಕೂರು: ಕೆಲವು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಸೇಬು ಹಣ್ಣು ಬೆಳೆಯುವುದನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಕೆಲಸದ ಮೇಲೆ ಬದ್ಧತೆಯಿರುವ ಕೆಲವು ರೈತರು, ಹಿಮಾಲಯ ಪರ್ವತ ಪ್ರದೇಶದ ತಪ್ಪಲಿನಲ್ಲಿ ಬೆಳೆಯುವ ಸೇಬು ಹಣ್ಣನ್ನು ನಮ್ಮ ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಒಜ್ಜುಕುಂಟೆ ಕೂಡ ಬೆಳೆಯಬಹುದೆಂದು ತೋರಿಸಿಕೊಟ್ಟಿದ್ದಾರೆ.
ಶಿರಾ ನಗರದ ಮದೀನ ಎಲೆಕ್ಟ್ರಿಕಲ್ ಎಂ.ಡಿ. ಫಯಾಜ್ ಅವರು ಸುದ್ದಿ ಇಲ್ಲದೆ ರಾಜ್ಯದ ವಿವಿಧ ಬಾಗದಲ್ಲಿ ಕೃಷಿ ಬಗ್ಗೆ ಹಲವಾರು ಮಾಹಿತಿಯನ್ನು ಪಡೆದು ನಂತರ ಸುದ್ದಿ ವಾಹಿನಿಯಲ್ಲಿ ಸಣ್ಣ ಕುಡ್ಡದಲ್ಲಿ (ಪಾಟ್ಟು) ಮನೆಯಲ್ಲಿ ಸೇಬು ಹಣ್ಣಿನನ್ನು ಬೆಳೆಯುವ ಸುದ್ದಿಯಿಂದ ತಾನು ಏಕೆ ಬೆಳೆಯಬಾರದು ಎಂದು ದಾಳಿಂಬೆಯಿಂದ ನಷ್ಟ ಅನುಭವಿಸಿದ ಇವರು ಹೊಸ ಸಾಹಸಕ್ಕೆ ಕೈಹಾಕಿದರು.
ಸೀಬೆ ಹಣ್ಣಿನ ವ್ಯವಸಾಯವನ್ನು ಕೈಗೆತ್ತಿಕೊಂಡಿದ್ದು ಅದರ ಯಶಸ್ಸನ್ನು ಹಾದಿಯಲ್ಲಿ ಕಾಯುತ್ತಿದ್ದಾರೆ. ಈ ರೈತರು ತಮ್ಮ ಯಶಸ್ಸಿನ ಶ್ರೇಯಸ್ಸನ್ನೆಲ್ಲಾ ರಾಜ್ಯದ ಹಲವಾರು ರೈತರು ಮಾಹಿತಿ ನೀಡಿ ನನ್ನಗೆ ಪ್ರೇರೇಪಣೆ ನೀಡಿದರು.
ಜೊತೆಗೆ ತಮ್ಮ ಪುತ್ರ ಸಬ್ಬರ್ ಸಹಾಯ ಮತ್ತು ಬೆನ್ನಿಗೆ ನಿಂತುಕೊಂಡು ಸೇಬು ಬೆಳೆಯಲು ಸಹಕಾರಿ ನೀಡಿದು ಕಳೆದ ಜನವರಿ 2019ರಲ್ಲಿ ರೈತ ಒರಿಸ್ಸಾ ಮೂಲದವರಿಂದ ಸುಮಾರು 250 ಗಿಡಗಳನ್ನು ಖರೀದಿಸಿ ತಮ್ಮ ಮೂರು ಎಕರೆ ಪ್ರದೇಶದಲ್ಲಿ ಸೇಬು ಹಣ್ಣು ಗಿಡವನ್ನು ಬೆಳೆಸಿದರು.
ಸದ್ಯ ಈಗ ಗಿಡದಲ್ಲಿ ಹೂವು ಬಂದಿದೆ ಮತ್ತು ಸಣ್ಣ ಕಾಯಿ ಬಿಡುತ್ತಿದ್ದು. ಕೆಲವು ಗಿಡದಲ್ಲಿ ಹಣ್ಣು ಬಂದಿದೆ. ಅದರೆ ಹಣ್ಣಿನ ಫಲದಲ್ಲಿ ಇಳುವರಿ (ದಪ್ಪ) ಕಡಿಮೆ ಪ್ರಮಾಣದಲ್ಲಿದ್ದು, ಇದಕ್ಕೆ ಕೆಲವು ವಿಜ್ಞಾವಿಗಳ ಸಲಹೆಗೆ ಇವರು ಕಾಯುತ್ತಿದ್ದರು.
ಈ ವೇಳೆ ರಾಜಸ್ಥಾನದಿಂದ ವಿಜ್ಞಾನಿಗಳು ಬರಲು ಕೊರೋನಾ ಲಾಕ್ ಡೌನ್ ನಿಂದ ಮಾಹಿತಿ ಕೊರತೆ ಉಂಟಾಗುತ್ತದೆ. ಒಟ್ಟಾರೆ ಶಿರಾ ಅಂತಹ ಬರಡು ಭೂಮಿಯಲ್ಲಿ ಯಾವುದೇ ನೀರಾವರಿ ಸೌಲಭ್ಯ ಹೊಂದಿಲ್ಲದ ಈ ಪ್ರದೇಶದಲ್ಲಿ ತಮ್ಮ ಸ್ವಂತ ಅನುಭವ ಮತ್ತು ವಿವಿಧ ರಾಜ್ಯದ ರೈತರು ಮಾಹಿತಿಯಿಂದ ತಾವು ಸೇಬು ಬೆಳೆಯಬಹುದೆಂಬ ತೋರಿಸಿ ಕೊಟ್ಟಿದ್ದಾರೆ. ಆದರೆ, ಅವರ ಕೊರತೆ ಎಂದರೆ ತಾವು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸೇಬು ಬೆಳೆದರೂ ಸ್ಥಳೀಯ ತೋಟಗಾರಿಕೆ ಇಲಾಖೆ ಯಾವುದೇ ರೀತಿಯ ಮಾಹಿತಿ ಮತ್ತು ಸಹಕಾರ ನೀಡದೆ ಇರುವುದು ವೈಜ್ಞಾನಿಕ ಈ ಬೆಳೆಗೆ ಮಾಹಿತಿಯ ಕೊರತೆ ಎದುರಿಸುತ್ತಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post