ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದು ವಿಚಾರವನ್ನು ಹೇಗೆ ಬೇಕಾದರೂ ತಿರುಚಬಹುದು. ವಿದ್ಯೆ ಇದ್ದರಾಯ್ತು. ವಿದ್ಯೆ ಅಂದರೆ ಜ್ಞಾನ, knowledge. ಇದರಲ್ಲಿ main target ಬ್ರಾಹ್ಮಣರನ್ನೇ ಮಾಡುವುದು ವಿಷಾದನೀಯ.
ಶೂದ್ರರಿಗೆ ವಿದ್ಯೆ ಕಲಿಸಲಿಲ್ಲ ಬ್ರಾಹ್ಮಣರು ಎಂದು ಹೇಳುವುದಕ್ಕೆ ಮುಂಚೆ, ಶೂದ್ರರು ಯಾಕೆ ವಿದ್ಯೆಯಲ್ಲಿ ಆಸಕ್ತರಾಗಲಿಲ್ಲ? ಮಡಿವಾಳ ಮಾಚಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಕನಕದಾಸರು, ಇತ್ತೀಚೆಗಿನ ಕುವೆಂಪು ಹೇಗೆ ಕವಿಗಳಾದರು ಸ್ವಾಮೀ. ಇದಕ್ಕೂ ಪೂರ್ವದಲ್ಲಿ ವಾಲ್ಮೀಕಿ ಋಷಿಗಳು, ಸೂತ ಪುರಾಣಿಕರು ಹೇಗೆ ಬ್ರಹ್ಮತ್ವ ಪಡೆದರೂ? ವಿದ್ಯಾವಂತರಾಗಲಿಲ್ವೇ?
ಆಗಿನ ಕಾಲದಲ್ಲಿ ಶೂದ್ರನಿಗೆ ಪಾಠ ಹೇಳಲಿಲ್ಲ ನಿಜ. ಯಾಕೆಂದರೆ ಅವನಿಗೆ ಪದೋಚ್ಛರಣೆಯೇ ಬರುತ್ತಿರಲಿಲ್ಲ. ಈಗಲೂ ಅಂತಹ ಉದಾಹರಣೆ ಸಾಕಷ್ಟಿದೆ. ವಿಶ್ವೇಶ್ವರಯ್ಯ ಎನ್ನುವ ಬದಲು ವಿಶ್ವ ರಯ್ಯ, ಕಿತ್ತೂರ ರಾಣಿ ಜಯಮ್ಮ ಎಂದು ಒದರುವ ಶೂದ್ರರು ಇದ್ದಾರೆ. ಹಕಾರದ ಬದಲು ಅ ಕಾರ, ಳ, ಲ, ಶ ಉಚ್ಚಾರ ಇಲ್ಲದ ಪೀಠಾಧಿಪತಿಗಳೂ ಇದ್ದಾರೆ. ಇಂತವರನ್ನು ಪೀಠಾಧಿಪತಿಗಳನ್ನಾಗಿಸಿದ ಫಲವೇ ವೇದಿಕೆಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಧಮ್ಕಿ ಹಾಕುವ ವಿದ್ಯಾಮಾನ ಬಂದಿದೆ. ಇದಕ್ಕೇನು ಹೇಳ್ತೀರೀ? ಇದು ಬ್ರಾಹ್ಮಣರು ಹೇಳಿಕೊಟ್ಟದ್ದೋ? ಅದಕ್ಕೆ ಬ್ರಾಹ್ಮಣರು ಕಾರಣವೋ? ಹೋಗಲಿ ಶೂದ್ರರ ಹಳೇ ಹೆಸರುಗಳನ್ನೇ ನೋಡಿ. ಚೋಮ-ಸೋಮ, ಮಾಧವ-ಮಾದ ಎಂದು ಅಪಭ್ರಂಶ ಮಾಡಿ ಹೇಳುವವರಿಗೇ ಎದೆ ಸೀಳಿದರೂ ಎರಡಕ್ಷರ ಬರಲ್ಲ ಎಂದಿದ್ದು.
ಪ್ರತಿಯೊಬ್ಬನಲ್ಲೂ ನಾಲ್ಕು ವರ್ಣಗಳಿವೆ. ಜ್ಞಾನವೇ ಬ್ರಾಹ್ಮಣ, ರಕ್ಷಣೆ ಮಾಡುವ ಗುಣವೇ ಕ್ಷತ್ರಿಯ. ವ್ಯವಹಾರ ಚತುರತೆಯೇ ವೈಶ್ಯ. ಸರ್ವಾಂಗ ಉಪಯೋಗಿಸಿ ದುಡಿಯುವ ಕಾಯಕವೇ ಶೂದ್ರ. ಬ್ರಾಹ್ಮಣ ಎಂಬ ಶಬ್ದವನ್ನು ಅಪಾರ್ಥ ಮಾಡಿಕೊಂಡರೆ, ಮತ್ಸರದಿಂದ ನೋಡಿದರೆ ನಿಂದನೆ, ಅವಹೇಳನ ಮಾಡುವ ಗುಣಗಳು ಉತ್ಪತ್ತಿಯಾಗೋದು. ಮಾತು ಮಾತಿಗೆ ಬ್ರಾಹ್ಮಣ ಬ್ರಾಹ್ಮಣಾ ಎಂದು ಟೀಕೆ ಮಾಡುವಿರಲ್ವೇ ಆ ಶೂದ್ರಜ ಎಂದು ಹೇಳಿಕೊಂಡ ಭಗವಾನ ವಿದ್ಯೆ ಕಲಿತು ಪುರಾಣಗಳನ್ನೇ ನಿಂದನೆ ಮಾಡಲು ಶುರುಮಾಡಿದ. ಪುರಾಣ ಪುರುಷರನ್ನೇ ನಿಂದಿಸಿದ. ಇಂತಹ ವ್ಯಕ್ತಿಗಳಿಗೆ ಸರ್ವಾಂಗ ಉಪಯೋಗಿಸಿ ಜ್ಞಾನವಿಲ್ಲದ ಶೂದ್ರ ಕರ್ಮವೇ ಲೇಸು.
ಒಬ್ಬ ಮನುಷ್ಯನಲ್ಲಿ ಬ್ರಾಹ್ಮಣ ಕರ್ಮವೂ ಬೇಕು. ಶೂದ್ರ ಕರ್ಮಗಳು ಬೇಕು. ಕ್ಷತ್ರಿಯ ಕರ್ಮವೂ ಬೇಕು. ವೈಶ್ಯ ಕರ್ಮವೂ ಬೇಕು. ಇದರಲ್ಲಿ ಯಾವುದಕ್ಕೆ ಪ್ರಾಧಾನ್ಯತೆ ಕೊಡುತ್ತಾನೋ ಅದು ಅವನಿಗೆ ಬಿಟ್ಟದ್ದು. ಅವನ ಆಯ್ಕೆ. ಆದರೆ ಶೂದ್ರ ಕರ್ಮವನ್ನೇ ಪ್ರಧಾನವಾಗಿರಿಸಿಕೊಂಡವನು ಬ್ರಾಹ್ಮಣ ಕರ್ಮ ಮಾಡಿದರೂ ಅದು ಸಫಲತೆಯನ್ನು ಕಾಣದು. ಹೇಗೆ ಒಬ್ಬ ಇತಿಹಾಸ ಪದವಿ ಪಡೆದು ಅರ್ಥಶಾಸ್ತ್ರ ಪಾಠ ಮಾಡಿದರೆ ಏನಾಗುತ್ತೋ ಹಾಗೆಯೇ, ಒಬ್ಬ ಬ್ರಾಹ್ಮಣ ಕರ್ಮವನ್ನೇ ಪ್ರಧಾನವಾಗಿರಿಸಿಕೊಂಡು ಕ್ಷತ್ರಿಯ ಕರ್ಮಕ್ಕಿಳಿದಂತಾದೀತು.
ಮಡಿವಂತಿಕೆಯು ಎಲ್ಲಾ ಚಾತುರ್ವರ್ಣಗಳಿಗೂ ಬೇಕು. ಆಯಾಯ ವರ್ಣಕ್ಕೆ ಸಂಬಂಧಿಸಿದ ಮಡಿವಂತಿಕೆ ಬೇಕು. ಮಡಿವಂತಿಕೆ ಎಂದರೆ ಅಸ್ಪೃಶ್ಯತೆ ಎಂದು ತಿಳಿಯಬಾರದು. ಮಡಿವಂತಿಕೆ ಎಂದರೆ ನಿಯಮ. ದೇವತಾ ಪೂಜೆಗೊಂದು ಮಡಿವಂತಿಕೆ, ರಕ್ಷಣಾ ವಿಚಾರಕ್ಕೊಂದು ಮಡಿವಂತಿಕೆ, ವ್ಯವಹಾರಕ್ಕೊಂದು ಮಡಿವಂತಿಕೆ, ಶೂದ್ರ ಕರ್ಮಕ್ಕೊಂದು ಅದರದ್ದೇ ಆದ ಮಡಿವಂತಿಕೆ ಇರುತ್ತದೆ. ಎಲ್ಲಾ ಮಡಿವಂತಿಕೆಗಳೊಳಗೆ ಅಹಂಕಾರ, ಮತ್ಸರ, ಮದ ತುಂಬಿದ್ದಾಗ ಇತರರನ್ನು ನಿಂದನೆ ಮಾಡುವ, ಹಿಂಸೆ ಮಾಡುವ, ಅವಹೇಳನ ಮಾಡುವ ದುರ್ಬುದ್ಧಿ ಶುರುವಾಗುತ್ತದೆ.
ಇಲ್ಲಿ ಎಲ್ಲಾ ಮನುಷ್ಯರೂ ಜನನದಲ್ಲಿ ಜಂತು ಸ್ವರೂಪವೇ. ಸಂಸ್ಕಾರ ಪಡೆಯುತ್ತಾ ಬ್ರಾಹ್ಮಣನೋ, ಕ್ಷತ್ರಿಯನೋ, ವೈಶ್ಯನೋ, ಶೂದ್ರನೋ ಆಗಬಹುದು. ಆದರೆ ಸಮಾಜದಲ್ಲಿ ಸಾಮಾನ್ಯವಾಗಿ ಬ್ರಾಹ್ಮಣನ ಮಗ ಬ್ರಾಹ್ಮಣ ಎಂದು ರೂಢಿಯಾಗಿದೆ. ಅಲ್ಲೂ ಬ್ರಹ್ಮ ಸಂಸ್ಕಾರ ದೊರೆಯದೇ ಹೋದಾಗ, ಪಾಲಿಸದೆ ಹೋದಾಗ ಬ್ರಾಹ್ಮಣ ಎನ್ನಲಾಗದು. ಬ್ರಾಹ್ಮಣ ಸಂಸ್ಕಾರ ಸ್ವಲ್ಪ ಕಷ್ಟ. ಉಪಾಸನೆ, ವೃತ ನಿಯಮ, ಅಧ್ಯಯನ ಇತ್ಯಾದಿ ಕಠಿಣ ಪರಿಶ್ರಮಗಳು ಬೇಕು.
ಕ್ಷತ್ರಿಯನಿಗೂ ಬೇಕು. ವೈಶ್ಯನಿಗೂ ಬೇಕು. ಆದರೆ ಶೂದ್ರನಿಗೆ ಕೈಕಾಲು ಘಟ್ಟಿ ಇರಬೇಕು. ಕಟ್ಟು ಹೊರೋದು, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಚಾಕಚಕ್ಯತೆ ಬೇಕಾಗುತ್ತದೆ. ಅದ್ಯಾವುದೂ ಸಾಧ್ಯವಾಗದೇ ಇದ್ದಾಗ ಭಿಕ್ಷಾಟನೆಯೇ ಉತ್ತಮ ಮಾರ್ಗ. ಅಲ್ಲೂ ಮಾನ ಮರ್ಯಾದೆಯ ಬಗ್ಗೆ ಯೋಚನೆ ಮಾಡಿದರೆ ಅವನಿಗೆ ಭಿಕ್ಷೆ ದುರ್ಲಭ. ಬೈಗಳನ್ನು ಕೇಳಲಾರೆ, ಅವಹೇಳನ ಕೇಳಲಾರೆ ಎಂದರೆ ಭಿಕ್ಷೆಯೂ ಸಿಗದು. ವೇದಾಧ್ಯಯನ ಬಹಳ ಕಷ್ಟ.
ನನ್ನಿಂದಾಗದು ಅದನ್ನು ಕಲಿಯಲು ಎಂದು ಸುಮ್ಮನೆ ಕುಳಿತರೆ ಆತ ಬ್ರಾಹ್ಮಣನೂ ಆಗಲಾರ. ಸಂಗ್ರಾಮ ಕಲೆಯನ್ನು ಕಲಿಯಲಾಗದವ, ಭೀತನಾದವ ಕ್ಷತ್ರಿಯನಾಗಲಾರ. ವ್ಯವಹಾರ ನಿಪುಣತೆ, ಆ ಲೆಕ್ಕಾಚಾರಗಳು ತಲೆಗೆ ಹತ್ತದಿದ್ದರೆ ಆತ ವೈಶ್ಯನಾಗುವುದೆಂತು? ಮೈ ಬಗ್ಗಿಸಿ, ಶ್ರಮ ಪಡದವನು ಶೂದ್ರನೂ ಆಗಲಾರ.
ಒಟ್ಟಿನಲ್ಲಿ ಯಾವ ಕರ್ಮಕ್ಕೂ ಅದರದ್ದೇ ಆದಂತಹ ಪಾಠ, ನಿಯಮಗಳು, ವಿಧಿ ವಿಧಾನಗಳು ಇದ್ದೇ ಇರುತ್ತದೆ. ಆಯ್ಕೆಯು ಅವರವರಿಗೆ ಬಿಟ್ಟ ವಿಚಾರ. ಎಲ್ಲಾ ವರ್ಣಗಳಿಗೂ ಭಕ್ತಿ ಶ್ರದ್ಧೆ ಇದ್ದಾಗ ಮಾತ್ರ ಆ ಕರ್ಮಗಳು ಸಫಲತೆಯನ್ನೂ ಕಾಣುತ್ತದೆ, ಸಮಾಜದಲ್ಲಿ ಕೀರ್ತಿಯೂ ಬರುತ್ತದೆ. ಹಾಗಾಗಿ ಬ್ರಾಹ್ಮಣ ಎಂಬ ಅರ್ಥ ತಿಳಿಯದೆ ನಿಂದನೆ ಮಾಡುವುದು ಮತ್ಸರಿಗಳ ಮೂರ್ಖರ ಕಾಯಕವಾಗುತ್ತದೆ. ಜನಿಸಿದ ಮಾನವನು ಹಂತ ಹಂತವಾಗಿ ಬ್ರಾಹ್ಮಣತ್ವಕ್ಕೆ ತಲುಪಿ ಮೋಕ್ಷ ಪಡೆಯಬೇಕು. ಲೇಖಕರು ಬ್ರಾಹ್ಮಣರ ನಿಂದನೆಗಾಗಿ ರಾಮಾಯಣದ ಶಂಭೂಕನ ಉಲ್ಲೇಖ ಮಾಡಿದ್ದರು. ಇದು ಅವರೊಳಗಿನ ದೌರ್ಭಲ್ಯತೆಯೇ ಅಲ್ಲದೆ ಅವರು ನೀಡಿದ ಪುಷ್ಟೀಕರಣವಾಗದು. ತಾನು ಗೋವು ತಿನ್ನಬೇಕೆಂಬ ಆಸೆಯಲ್ಲಿ ರಾಮನೂ ತಿಂದಿದ್ದ, ಕೃಷ್ಣನೂ ತಿಂದಿದ್ದ ಎಂದು ಹೇಳಿದಂತಾಗುತ್ತದೆ. ನಿನಗೆ ತಿನ್ನುವ ಚಪಲತೆ ಇದೆಯೋ? ತಿನ್ನು. ಯಾರು ಬೇಡವೆಂದರು? ಆದರೆ ಅವ ತಿಂದ, ಇವ ತಿಂದ ಎಂದು ಉಲ್ಲೇಖಿಸಬೇಡ.
ಶಂಭೂಕನೆಂಬ ಶೂದ್ರಜನ ತಪ್ಪಸ್ಸಿನಿಂದ ರಾಮ ರಾಜ್ಯದಲ್ಲಿ ಅಪಶಕುನಗಳು ಉದ್ಭವಿಸಿದವು. ಶಂಭೂಕನಿಗೆ ರಾಮನು ಅವನ ತಪಸ್ಸಿನ ಉದ್ದೇಶವನ್ನು ಕೇಳಿದಾಗ, ಶಂಭೂಕನು ತನ್ನ ಮೋಕ್ಷಕ್ಕಾಗಿ ಮಾಡುತ್ತಿದ್ದೇನೆ ಎನ್ನುತ್ತಾನೆ. ನಿನಗೆ ಮೋಕ್ಷವೊಂದೇ ಸಾಕು ಎಂದಿದ್ದರೆ ನಿನಗೆ ಮಡದಿ ಮಕ್ಕಳು ಯಾಕಯ್ಯಾ ಬೇಕಿತ್ತೂ? ಎಂದು ರಾಮನು ಆತನ ಶಿರಚ್ಛೇಧನ ಮಾಡಿದ್ದ. ಸಾಲ ಮಾಡಿ ಪೂಜೆ ಮಾಡು ಎಂದು ಪ್ರಾಜ್ಞರು ಹೇಳಿಲ್ಲ. ಮನೆಯವರನ್ನು ಉಪವಾಸ ಹಾಕಿ ತಪಸ್ಸನ್ನಾಚರಿಸಿ ಮೋಕ್ಷ ಪಡೆಯಬಹುದು ಎಂದು ಹೇಳಲಿಲ್ಲ. ನಿನ್ನ ನಿನ್ನ ಕರ್ಮಗಳನ್ನು ಭಕ್ತಿ ಶ್ರದ್ಧೆಯಿಂದ ಮಾಡಿದರೆ ಮೋಕ್ಷ ಸಿಗುತ್ತದೆಯೇ ಹೊರತು, ತಪಸ್ಸಿನಿಂದ ಸಿಗಲಾರದು. ತಪಸ್ಸಿನಿಂದ ಜ್ಞಾನವನ್ನು ಪಡೆಯಬೇಕು. ಆ ಜ್ಞಾನವನ್ನು ಸಮಾಜಕ್ಕೆ ಪ್ರಾಮಾಣಿಕವಾಗಿ ಅರ್ಪಣೆ ಮಾಡು. ಆಗಲೇ ನೀನು ಕೃತಾರ್ಥನಾಗಿ ಮೋಕ್ಷ ಪಡೆಯುತ್ತಿ ಎಂದು ಪ್ರಾಜ್ಞರು ತಿಳಿಸಿದರು. ಶ್ರಮ ಇಲ್ಲದೆ ಮೋಕ್ಷವಿಲ್ಲ.
ಎಲ್ಲರೂ ಅವರವರ ಕರ್ಮ ಬಿಟ್ಟು ತಪಸ್ಸು ಮಾಡುತ್ತಾ ಕುಳಿತು ಮೋಕ್ಷಕ್ಕೆ ಹೋದರೆ ಯಾರಿಗೆ ಬೇಕು ಈ ಭೂಮಿ. ರಾಮನೂ ಅದನ್ನು ಮಾಡಬಹುದಿತ್ತು. ಕೃಷ್ಣನೂ ಮಾಡಬಹುದಿತ್ತು. ಈ ಬ್ರಾಹ್ಮಣ ನಿಂದನೆ ಮಾಡಿದವನೂ ಮಾಡಬಹುದಲ್ಲಾ. ಯಾರಿಗೆ ಬೇಕು ಜೀವನದ ಜಂಜಾಟ? ಹಾಗೆಲ್ಲ ಮೋಕ್ಷ ಸಿಗುವುದೂ ಇಲ್ಲ. ಮೋಕ್ಷಕ್ಕೂ ನಿಯಮವಿದೆ. ನೀನು ಪಾಲಿಸಿಕೊಂಡು ಬಂದ ಕರ್ಮವನ್ನು ಭಕ್ತಿ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಭಗವಂತನಿಗೆ ಅರ್ಪಿಸಿ ಕೃತಾರ್ಥನಾಗು. ಆಗ ಮೋಕ್ಷ ಮಾರ್ಗವು ಸುಗಮ ಎಂದು ಸಕಲ ಧರ್ಮ ಗ್ರಂಥಗಳೂ ಹೇಳಿವೆ. ಮೋಕ್ಷಕ್ಕೆ ಬ್ರಾಹ್ಮಣರೊಬ್ಬರೇ ಅರ್ಹವಲ್ಲ. ಸಕಲ ಜಾತಿಯ, ಸಕಲ ವರ್ಣಗಳವರೂ ಭಕ್ತಿಶ್ರದ್ದೆಯಿಂದ ಪ್ರಾಮಾಣಿಕವಾಗಿ ಕರ್ಮ ಮಾಡಿದರೆ ಎಲ್ಲರೂ ಅರ್ಹರೆ. ಮೋಕ್ಷಕ್ಕೆ ಯಾವತ್ತೂ ಯಾರಿಗೂ patent ಇಲ್ಲ. ಭಕ್ತಿ ಶ್ರದ್ಧೆ ಪ್ರಾಮಾಣಿಕತೆಯೇ ಅದರ ಅರ್ಹತೆ ಎಂಬುದನ್ನು ನೆನಪಿಡಿ.
Get in Touch With Us info@kalpa.news Whatsapp: 9481252093
Discussion about this post