ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಭಾನುಪ್ರಕಾಶ್ ಆಚಾರ್ಯ |
ಒಂದು ಹೆಣ್ಣು ಮಗಳು ಹುಟ್ಟಿನಿಂದ ಸಾಯುವವರೆಗೂ ಸಮಾಜದ ಸೃಷ್ಟಿಕರ್ತೆಯಾಗಿ ಸಮಾಜದ ಮಾದರಿ ಹೆಣ್ಣಾಗಿ, ಮನೆಗೆ ಬೆಳಕಾಗಿ, ಪೋಷಕರಿಗೆ ಒಳ್ಳೆಯ ಮಗಳಾಗಿ, ಸಹೋದರನಿಗೆ ಉತ್ತಮ ಸಹೋದರಿಯಾಗಿ ಮನೆಗೆ ಸೊಸೆಯಾಗಿ, ಕಾಳಜಿಯ ಪತಿಗೆ ಮುದ್ದಿನ ಹೆಂಡತಿಯಾಗಿ ಮಕ್ಕಳಿಗೆ ಮಮತೆಯ ತಾಯಿಯಾಗಿ ಮತ್ತು ಮಕ್ಕಳ ಮೊದಲ ಗುರುವಾಗಿ ತನ್ನ ಜೀವನದ ಎಲ್ಲಾ ಹಂತದಲ್ಲೂ ತಾನು ಹೊತ್ತಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾಳೆ.
ಹೆಣ್ಣು ಮಕ್ಕಳು ಪ್ರತಿಯೊಂದು ಉದ್ಯಮದಲ್ಲೂ ಮುಂದೆ ಬರುತ್ತಿರುವುದು ಸಂತೋಷದ ವಿಷಯ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಾಗಿ ಮೊರೆ ಹೋಗುತ್ತಾ ತನ್ನ ಎಲ್ಲಾ ಜವಾಬ್ದಾರಿಗಳನ್ನು ಮರೆಯುತ್ತಿರುವುದು ದುಃಖದ ಸಂಗತಿಯಾಗಿದೆ.
ನಮ್ಮ ಸಮಾಜದ ಹಿತದೃಷ್ಟಿಯ ಕಾಳಜಿ ಹೊಂದಿರುವ ಪ್ರತಿಯೊಬ್ಬ ಜವಾಬ್ದಾರಿಯುತ ಮಹಿಳೆಯು ಸಾಮಾಜಿಕ ಜಾಲತಾಣವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಪ್ರತಿಯೊಬ್ಬ ಮಹಿಳೆಯಲ್ಲಿ ಅವಳದ್ದೇ ಆದ ಕಲೆ, ಶಕ್ತಿ, ಸಂಸ್ಕಾರ ಇರುತ್ತದೆ. ಆ ಕಲೆ ಶಕ್ತಿ ಸಂಸ್ಕಾರ ಗುರುತಿಸಿಕೊಂಡು ಅದಕ್ಕೆ ಸಮಯ ಮತ್ತು ಮಹತ್ವವನ್ನು ಕೊಟ್ಟು ಶ್ರದ್ದೆ ಇಂದ ನೆಡೆದುಕೊಂಡರೆ ಜೀವನದ ಯಶಸ್ವಿನ ದಾರಿಯನ್ನು ಅತಿ ಎತ್ತರಕ್ಕೆ ತಲುಪುತ್ತಾರೆ.
ನಮ್ಮ ಸಮಾಜದ ಪ್ರತಿಯೊಂದು ಜವಾಬ್ದಾರಿಯು ಗಂಡಿಗಿಂತ ಹೆಣ್ಣಿನ ಕೈಯಲ್ಲಿಯೇ ಹೆಚ್ಚಾಗಿ ಇದೆ ಎಂದು ಹೇಳಬಹುದು. ಹೆಣ್ಣುಮಕ್ಕಳು ಆಡುವ ನುಡಿ ನಡೆದುಕೊಳ್ಳುವ ಸ್ವಭಾವದ ಮೇಲೆ ನಮ್ಮ ಸಮಾಜದ ಗೌರವ ನಿಂತಿದೆ.
ಆದ್ದರಿಂದ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಅರ್ಥಗರ್ಭಿತ ವಿಷಯವನ್ನು ಪ್ರಸ್ತಾಪ ಮಾಡುವುದು ಮತ್ತು ಅಷ್ಟೇ ಒಳ್ಳೆಯ ರೀತಿಯ ಭಾವಚಿತ್ರಗಳನ್ನೂ ಹಾಕುವುದು ನಿಮ್ಮ ನಿಮ್ಮ ಘನತೆಗೆ ಪ್ರಶಸ್ತಿ ಕೊಟ್ಟಂತೆ ಇರುತ್ತದೆ. ಅದರೊಂದಿಗೆ ಸಮಯಕ್ಕೂ ಬೆಲೆಕೊಟ್ಟು ಗುರು ಹಿರಿಯರಿಗೆ ಗೌರವ ಕೊಟ್ಟು ಅವರನ್ನು ಉತ್ತಮವಾಗಿ ನಡೆಸಿಕೊಳ್ಳುವ, ಉತ್ತಮ ಕಾಳಜಿ ತೋರಿಸುವ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕಿದೆ.
ಒಂದು ಮನೆ ಇಂದ ಆಗುವ ಈ ಬದಲಾವಣೆ ನಾಳೆಯ ದಿನಗಳಲ್ಲಿ ನಿಮ್ಮ ಅಕ್ಕಪಕ್ಕದ ಮನೆಯವರು ನಿಮ್ಮ ಊರು ನಿಮ್ಮ ಸುತ್ತಮುತ್ತಲಿನ ನಿಮ್ಮ ಗೆಳೆಯರು ಬಂಧುಗಳಿಗೂ ಬದಲಾವಣೆಯ ಗಾಳಿಯು ಬಿಸಲು ಶುರು ಆಗುತ್ತದೆ. ಅದೇ ರೀತಿ ನಮ್ಮ ದೇಶದ ಸಂಸ್ಕಾರ, ಸಂಸೃತಿ, ಕಲೆ ಮತ್ತು ಆಚಾರ ವಿಚಾರಗಳಿಗೆ ಗೌರವಿಸುವುದು ಮಹಿಳೆಯರ ಪತ್ರ ಪ್ರಧಾನವಾಗಿದೆ.
ಆತ್ಮಸ್ಥೈರ್ಯದಿಂದ ನಾವೆಲ್ಲರೂ ನಮ್ಮ ಜವಾಬಾರಿಯನ್ನು ನಿಭಾಯಿಸುತ್ತಾ ಮನೆಗೆ ಉತ್ತಮ ಹೆಣ್ಣುಮಗಳಾಗಿ ದೇಶಕ್ಕೆ ಅತ್ಯುತ್ತಮ ಮಹಿಳೆಯಾಗಿ ಗುರುತಿಸಿಕೊಳ್ಳೋಣ..
ಖಿನ್ನತೆಗೆ ಜಾರುವುದು ಬೇಡ, ದೇಶದ ಯಶಸ್ವಿ ಹೆಣ್ಣುಮಗಳಾಗಿ ಬೆಳೆದು ನಿಲ್ಲೋಣ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post