ಭದ್ರಾವತಿ: ನಗರದಲ್ಲಿ ರಾತ್ರಿ ವೇಳೆ ಸಂಚರಿಸುವ ಬಿಡಾಡಿ ಹಸು ಹಾಗೂ ದನಗಳ ಮಾರಣಹೋಮವನ್ನು ದುಷ್ಕರ್ಮಿಗಳು ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ನಗರದ ಪ್ರಖ್ಯಾತ ಇರುವೆ ಟ್ರಸ್ಟ್, ಒಂದು ಹಸುವು ರಾತ್ರಿ ವೇಳೆಯಲ್ಲಿ ನಿರ್ಜನ ಪ್ರದೇಶದಲ್ಲಿ ಕಂಡುಬಂದರೆ ಅದನ್ನು ಕಡಿಯುವ ಸಲುವಾಗಿ ಆ ಹಸುವನ್ನು ಗಾಯಗೊಳಿಸುತ್ತಾರೆ. ಅದರ ಕಾಲು ಮುರಿಯುವುದು, ಕಾಲಿನ ನರ ಕತ್ತರಿಸುವುದು, ಇಲ್ಲವಾದರೆ ಗಾಡಿಯಿಂದ ಹಸುವನ್ನು ಗುದ್ದಿ ನೆಲಕ್ಕುರಲಿಸುವುದು ಮುಂತಾದ ವಿಚಿತ್ರ ಪ್ರಕಾರದಲ್ಲಿ ಅವುಗಳನ್ನು ಕದಿಯಲಾಗುತ್ತಿದೆ ಎಂದಿದೆ.
ಕೆಲವು ಬಲಶಾಲಿ ಗೋಲಿಗಳು ಅಥವಾ ಹಸುಗಳು ಇವರ ಕೈಯಿಂದ ತಪ್ಪಿಸಿಕೊಂಡರೆ ಅವುಗಳು ಜೀವನ ಪೂರ್ತಿ ನರಳಿ ಸಾಯಬೇಕು, ಇಂತಹುದ್ದೇ ಒಂದು ವಿಚಾರವನ್ನು 15 ದಿನದ ಹಿಂದೆ ಉಜ್ಜಿನಿಪುರದಲ್ಲಿ ನಾವು ನೋಡಿದ್ದೆವು. ಆ ಹೋರಿಯ 3 ಕಾಲುಗಳ ನರವನ್ನು ಕಿಡಿಗೇಡಿಗಳು ಕತ್ತರಿಸಿಬಿಟ್ಟಿದ್ದರು. ಅದನ್ನು ಗಾಡಿಯಲ್ಲಿ ಹಾಕಲು ಸಾಧ್ಯವಾಗದಿದ್ದಾಗ ಅದನ್ನು ಹಾಗೆ ಬಿಟ್ಟು ಓಡಿ ಹೋಗಿದ್ದರು ಎಂದಿದ್ದಾರೆ.
ಈ ಬಾರಿ ಜಿಂಕ್’ಲೈನ್ ಬಳಿ ಅಪರೂಪ ಎನ್ನಬಹುದಾದ 5 ಕಾಲಿನ ಒಂದು ಹೋರಿಯನ್ನು ನಿನ್ನೆ ಕದಿಯಲು ನೋಡಿದ ಕಳ್ಳರು ಅದರ ಮುಂಗಾಲನ್ನು ಒಂದು ದಪ್ಪ ದೊಣ್ಣೆಯಿಂದ ಹೊಡೆದು ಮುರಿದಿದ್ದರೆ, ಈ ಹೋರಿಯು ತನ್ನ ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡಿದೇ ಪರಿಣಾಮ ಅದನ್ನು ಕಳ್ಳರು ಹಾಗೆ ಬಿಟ್ಟುಹೋಗಬೇಕಾಯಿತು ಎಂದು ಮಾಹಿತಿ ನೀಡಿದ್ದಾರೆ.
ಇರುವೆ ಟ್ರಸ್ಟ್ ಕಾರ್ಯದರ್ಶಿಗಳಾದ ಕಾರ್ತಿಕ್ ಜಿ ಕೆದಿಲಾಯ ಅವರಿಗೆ ಗಿರೀಶ್ ಎಂಬ ಜಿಂಕ್ ಲೈನ್ ವ್ಯಕ್ತಿ ಕರೆ ಮಾಡಿ ಹೊರಿಯ ವಿಚಾರವನ್ನು ಮುಟ್ಟಿಸಿದ್ದರು. ಟ್ರಸ್ಟ್’ನ ಭದ್ರಾವತಿಯ ಸರ್ಕಾರಿ ಪಶು ವೈದ್ಯ ಡಾ. ಮಧುಕುಮಾರ್ ಅವರ ಸಹಾಯದಿಂದ ಹೊರಿಯ ಕಾಲಿಗೆ ಪಿಒಪಿ ಕಟ್ಟನ್ನು ಹಾಕಿ ಚಿಕಿತ್ಸೆ ನೀಡಿದ್ದಾರೆ.
ಇರುವೆ ಟ್ರಸ್ಟ್ ಅಧ್ಯಕ್ಷ ಶಾಂತಕುಮಾರ್ ಬಿ.ಎಂ ಮತ್ತು ನಗರದ ಪ್ರಖ್ಯಾತ ಚಾರ್ಟೆಡ್ ಅಕೌಂಟೆಡ್ ಧರ್ಮಪ್ರಸಾದ್ ಚಿಕಿತ್ಸೆಯ ಖರ್ಚನ್ನು ಭರಿಸಿದ್ದಾರೆ.
ಡಾ. ಮಧುಕುಮಾರ್, ಮುನಿಸಿಪಾಲ್ ವಾಟರ್ ಮೆನ್ ಗಿರೀಶ್, ಸಿಎ ಧರ್ಮಪ್ರಸಾದ್, ಇರುವೆ ಟ್ರಸ್ಟಿನ ಸುಮಂತ್ ಇದ್ದರು.
Discussion about this post