ಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ |
ಹಿಂದೂ ಬಾಲಕಿಯನ್ನು ಅಪಹರಿಸಿ ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಿಸಿದ ವ್ಯಕ್ತಿಯ ಪರವಾಗಿಯೇ ಪಾಕಿಸ್ತಾನದ ಕರಾಚಿ ಕೋರ್ಟ್ ತೀರ್ಪು ನೀಡಿದೆ.
ಶಮನ್ ಮ್ಯಾಕ್ಸಿ ಬಲೋಚ್ ಎಂಬ ವ್ಯಕ್ತಿ ಅಕ್ಟೋಬರ್ 13ರಂದು ಸಿಂಧ್‍ನ ಹೈದರಾಬಾದ್ ನಗರದಿಂದ ಹಿಂದೂ ಬಾಲಕಿ ಚಂದಾ ಮಹಾರಾಜ್ (15)ಳನ್ನು ಅಹರಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದ.
ಘಟನೆಗೆ ಸಂಬಂಧಿಸಿದಂತೆ ಬಾಲಕಿ ಮನೆಯವರು ಅಲ್ಲಿನ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆ ಕರಾಚಿ ಪೊಲೀಸರು ನಗರದ ಬಾಡಿಗೆ ಮನೆಯಲ್ಲಿ ಪತ್ತೆಹಚ್ಚಿ ಬಳಿಕ ಕರಾಚಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯದಲ್ಲಿ ಆಕೆ ತನಾಗಾದ ಭಯನಾಕತೆಯನ್ನು ವಿವರಿಸಿದ್ದರೂ ಆರೋಪಿ ಶಾಮನ್ ಮ್ಯಾಗ್ಸಿ ಬಲೋಚ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.
ನ್ಯಾಯಾಲಯದಲ್ಲಿ ಚಂದಾ ಪೋಷಕರನ್ನು ನೋಡಿದ ತಕ್ಷಣ ಅವರ ಬಳಿ ಓಡಿ ಹೋಗಿ ಅವರನ್ನು ತಬ್ಬಿಕೊಂಡು ಕಣ್ಣಿರಿಟ್ಟಿದ್ದಾಳೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಾದ ಬಳಿಕ ನ್ಯಾಯಾಲಯವು ತನ್ನ ನಿರ್ಧಾರವನ್ನು ಬದಲಾಯಿಸಿದೆ. ಬಾಲಕಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಚಂದಾಗೆ ವೈದ್ಯಕೀಯ ಪರೀಕ್ಷೆ ಮಾಡಲು ಅನುಮತಿ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post