ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಶಶಿಯ ಅಂಗಳದಲ್ಲಿ ಚಂದ್ರಯಾನ-3 #Chandrayana3 ಹೆಜ್ಜೆಯಿಡುವ ಐತಿಹಾಸಿಕ ಕ್ಷಣಗಳಿಗೆ ಎದುರು ನೋಡುತ್ತಿರುವ ಕೋಟ್ಯಂತರ ಭಾರತೀಯರಿಗೆ ಇಸ್ರೋ #ISRO ಸಂಸ್ಥೆ ಮಹತ್ವದ ಮಾಹಿತಿ ಪ್ರಕಟಿಸಿದ್ದು, ಇದರೊಂದಿಗೆ ವೀಡಿಯೋವೊಂದನ್ನೂ ಸಹ ಬಿಡುಗಡೆ ಮಾಡಿದೆ.
ಈ ಕುರಿತಂತೆ ಇಸ್ರೋ ತನ್ನ ಅಧಿಕೃತ ಟ್ವಿಟರ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಚಂದ್ರಯಾನ-3 ಮಿಷನ್ ಕುರಿತಾಗಿ ಈಗಾಗಲೇ ನಿಗದಿಯಾಗಿರುವಂತೆ ಎಲ್ಲವೂ ಸಹ ಸರಿಯಾಗಿ ಸಾಗುತ್ತಿದೆ ಎಂದಿದೆ.
ಈ ನೌಕಾಯಾನವು ಸರಾಗವಾಗಿ ನಡೆಯುತ್ತಿದ್ದು, ಸಾಫ್ಟ್ ಲ್ಯಾಂಡಿಂಗ್’ಗಾಗಿ #SoftLanding ನಡೆಯುತ್ತಿರುವ ಎಲ್ಲ ಹಂತದ ಪರೀಕ್ಷೆಗಳೂ ಸಹ ಯಶಸ್ವಿಯಾಗಿವೆ. ನಿಯಮಿತ ತಪಾಸಣೆಗಳಲ್ಲೂ ಸಹ ಎಲ್ಲವೂ ಸಕಾರಾತ್ಮಕವಾಗಿಯೇ ಇವೆ ಎಂದಿದೆ.
ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ #MOX ಶಕ್ತಿ ಮತ್ತು ಉತ್ಸಾಹದಿಂದ ಮುನ್ನುಗ್ಗುತ್ತಿದೆ ಎಂದಿದೆ.
ಲೈವ್ ನೋಡಿ
ಎಂಒಎಕ್ಸ್/ಐಎಸ್’ಟಿಆರ್’ಎಸಿಟಒನಲ್ಲಿ ಲ್ಯಾಂಡಿಂಗ್ ಕಾರ್ಯಾಚರಣೆಗಳ ನೇರ ಪ್ರಸಾರವು #Live ಆಗಸ್ಟ್ 23ರ ಸಂಜೆ 17:20 ಗಂಟೆಗೆ ಪ್ರಾರಂಭವಾಗಲಿದ್ದು, ಆಸಕ್ತರು ವೀಕ್ಷಿಸಬಹುದಾಗಿದೆ.
ಆಗಸ್ಟ್ 19 ರಂದು ಸುಮಾರು 70 ಕಿಮೀ ಎತ್ತರದಿಂದ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ #LPDC ಸೆರೆಹಿಡಿದ ಚಂದ್ರನ #Moon ಚಿತ್ರಗಳು ಇಲ್ಲಿವೆ.
Chandrayaan-3 Mission:
The mission is on schedule.
Systems are undergoing regular checks.
Smooth sailing is continuing.The Mission Operations Complex (MOX) is buzzed with energy & excitement!
The live telecast of the landing operations at MOX/ISTRAC begins at 17:20 Hrs. IST… pic.twitter.com/Ucfg9HAvrY
— ISRO (@isro) August 22, 2023
ಎಲ್’ಪಿಡಿಸಿ ಚಿತ್ರಗಳು ಲ್ಯಾಂಡರ್ ಮಾಡ್ಯೂಲ್ ಅನ್ನು ಆನ್ಬೋರ್ಡ್ ಚಂದ್ರನ ಉಲ್ಲೇಖ ನಕ್ಷೆಯೊಂದಿಗೆ ಹೊಂದಿಸುವ ಮೂಲಕ ಅದರ ಸ್ಥಾನವನ್ನು (ಅಕ್ಷಾಂಶ ಮತ್ತು ರೇಖಾಂಶ) ನಿರ್ಧರಿಸಲು ಸಹಾಯ ಮಾಡುತ್ತದೆ.
Discussion about this post