ದ್ರೋಣರನ್ನು ವಧೆ ಮಾಡುವುದು ಪಾಂಡವರಿಗೆ ಆಗದ ಕೆಲಸವೇ. ದ್ರೋಣರ ವಧೆಯಾಗದೆ ಪಾಂಡವರ ಗೆಲುವೂ ಕಷ್ಟವೇ. ದ್ರೋಣರಿಂದ ಕೌರವ ಪಡೆ ಗೆದ್ದರೇ? ಅಧರ್ಮದ ಗೆಲುವೂ ಶಾಶ್ವತ. ಆಗ ಕೃಷ್ಣನು ಒಂದು ಯೋಚನೆ ಮಾಡಿದ. ದ್ರೋಣರಿಗೆ ಒಂದು ಸುಳ್ಳು ಸುದ್ದಿ ರವಾನಿಸುವುದು. ಅದು ದ್ರೋಣರ ಮಗ ಅಶ್ವತ್ಥಾಮನ ವಧೆಯಾಗಿದೆ ಎಂಬುದು. ಆಗ ದ್ರೋಣರು ಮಗನ ಸಾವಿನಿಂದ ನೊಂದುಕೊಂಡು ಶಸ್ತ್ರತ್ಯಾಗ ಮಾಡುವುದು ನಿಶ್ಚಿತ.
ಆದರೆ ಸುಳ್ಳು ಸುದ್ದಿಯನ್ನು ಯಾರ್ಯಾರೋ ರವಾನಿಸಿದರೆ ದ್ರೋಣಾಚಾರ್ಯರು ನಂಬಲ್ಲ. ಹಾಗಾಗಿ ಧರ್ಮರಾಜನೇ ಇದನ್ನು ಹೇಳಿದರೆ? ಅಯ್ಯೋ… ಆ ಧರ್ಮಾತ್ಮನು ಸುಳ್ಳು ಹೇಳಲಾರ. ಅದೇನೇ ಇರಲಿ ಅಶ್ವತ್ಥಾಮ ಎಂಬ ಆನೆಯನ್ನು ಕೊಂದು ಹಾಕಿ, ನಂತರ ಅಶ್ವತ್ಥಾಮ ಹತಃ ಕುಂಜರ ಎಂದು ಹೇಳಬಹುದಲ್ಲವೇ?
ಸರಿ ಧರ್ಮರಾಜ ಒಪ್ಪಿದ. ಭೀಮಸೇನ ಆ ಅಶ್ವತ್ಥಾಮ ಎಂಬ ಆನೆಯನ್ನು ಕೊಂದು ಹಾಕಿದ. ದ್ರೋಣರಲ್ಲಿ ಅಶ್ವತ್ಥಾಮನ ವಧೆ ಮಾಡಿದೆ ಎಂದೂ ಅಬ್ಬರದಿಂದ ಹೇಳಿಯೂ ಬಿಟ್ಟ. ಗಡಿಬಿಡಿಗೊಂಡ ದ್ರೋಣರು ಈ ಘಟನೆಯ ಸತ್ಯಾಸತ್ಯಕ್ಕಾಗಿ ಧರ್ಮರಾಜನಲ್ಲಿ,’ ಭೀಮ ಸೇನ ಹೇಳಿದ್ದು ನಿಜವೇ’ ಎಂದು ಕೇಳಲಾಗಿ, ಧರ್ಮರಾಜನು ಅಶ್ವತ್ಥಾಮ ಹತಃ ಎನ್ನುವಷ್ಟರಲ್ಲಿ ಕೃಷ್ಣನು ಪಾಂಚಜನ್ಯ ಊದಿದ. ಧರ್ಮರಾಜ ಮುಂದಿನ ಶಬ್ದ ಕುಂಜರ ಎಂದು ಹೇಳಿದ್ದು ದ್ರೋಣರಿಗೆ ಕೇಳದಂತೆ ಮಾಡಿದ. war tricks ಇದು. ದ್ರೋಣರು ಶಸ್ತ್ರತ್ಯಾಗ ಮಾಡಿದರು. ದೃಷ್ಟಧ್ಯುಮ್ನ ದ್ರೋಣರ ಶಿರಚ್ಛೇದನವನ್ನೂ ಮಾಡಿದ. ದ್ರೋಣರ ಅಂತ್ಯವೂ ಆಯ್ತು. ಅದೇ ರೀತಿ ನರೇಂದ್ರ ಮೋದಿಯವರು ಪರಿಹಾರ ನೀಡಲಿಲ್ಲ ಎಂದು ಒಂದಷ್ಟು ಅಭಿಮಾನಿ ವರ್ಗ ಇರುವವರ ಮೂಲಕ ಹೇಳಿಸಿದರೆ? ಆರ್ಥಿಕ ದಿವಾಳಿ ಎಂದು ಹೇಳಿಸಿದರೆ? ನಂಬಲೇ ಬೇಕಲ್ಲವೇ? This is present politics ಯಾಕೆ ಆಗಿರಬಾರದು ಎಂದು ಒಂದು ಚಿಂತನೆ. ರಾಜಕಾರಣದಲ್ಲಿ ಅದು ನಡೆಯದು ಇದು ನಡೆಯದು ಎಂದು ಹೇಳಲಾಗದು.
ಅಲ್ಲಿ ಅಧರ್ಮದ ನಾಶಕ್ಕಾದರೆ, ಇಲ್ಲಿ ಧರ್ಮದ ನಾಶಕ್ಕೆ.
Discussion about this post