ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೌದು Entrepreneur (ಸ್ವ ಉದ್ಯೋಗ) ಎಂಬುದು ತಲೆ ತಲಾಂತರಗಳಿಂದ ಬಂದಿರುವ ಒಂದು ನುಡಿಗಂಟು.
ಈಗಿನ ಕಾಲದಲ್ಲಿ ನೌಕರಿ ವೃತ್ತಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಂದಿನ ಕಾಲದಲ್ಲಿ ಸ್ವಂತ ಉದ್ಯೋಗಿಗಳಿಗೆ ಅಷ್ಟೇ ಪ್ರಾಮುಖ್ಯತೆ ಇತ್ತು. ಸ್ವಂತ ಉದ್ಯೋಗವು ಮನುಷ್ಯನನ್ನು ಹಲವಾರು ಕಷ್ಟಗಳಿಗೆ ಎದೆಯೊಡ್ಡಿ ನಂತರ ಅವನಿಗೆ ಭವಿಷ್ಯದಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲುವ ಪ್ರಕ್ರಿಯೆಯನ್ನು ನೈಸರ್ಗಿಕವಾಗಿ ಹೇಳಿಕೊಡುತ್ತಿತ್ತು.
ಹಿಂದಿನ ಬದುಕು ಈಗಿನಷ್ಟು ಸುಲಭವಾಗಿರಲಿಲ್ಲ, ಬಹಳಷ್ಟು ಕಷ್ಟಜೀವಿಗಳಾಗಿದ್ದರು. ಹಿಂದಿನ ತಲೆಮಾರಿನವರು, ಅವರಿಗೆ ಬದುಕಿನ ಪ್ರತಿಯೊಂದು ಘಟನೆಗಳು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಸಂಪ್ರದಾಯವಾಗಿ ತಮ್ಮ ಸ್ವವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದರು. ಇಂದಿನ ಯುವ ಪೀಳಿಗೆಯು ಸ್ವಂತ ಉದ್ಯೋಗ ಮಾಡುವುದು ಇರಲಿ ಕೆಲವರಿಗೆ ಅದರ ಅರ್ಥವೇ ಗೊತ್ತಿರುವುದಿಲ್ಲ. ಇನ್ನು ಕೆಲವರಿಗೆ ಸ್ವ ಉದ್ಯೋಗವೆಂದರೆ ಒಂದು ರೀತಿಯ ಭಯ, ಭವಿಷ್ಯದಲ್ಲಿ ತಾನು ಆಯಿತು, ಕೆಲಸ ಆಯಿತು ಮತ್ತು ಮನೆ ಆಯಿತು ಎನ್ನುವವರು ಈಗಿನ ನಾಗರಿಕರು.
ಹಿಂದಿನ ಕಾಲದಲ್ಲಿ ಇನ್ನೊಬ್ಬರ ಅಡಿಯಲ್ಲಿ ಕೆಲಸ ಮಾಡುವಾರರನ್ನು ಜೀತದ ಆಳುಗಳು ಎಂದು ಕರೆಯುತ್ತಿದ್ದರು. ಈಗ ಅದಕ್ಕೆ ಆಧುನಿಕತೆ ಬಂದ ಮೇಲೆ ನೌಕರಿ ಎಂಬ ಅರ್ಥದೊಂದಿದೆ ಕರೆಯುತ್ತಿದ್ದಾರೆ. ನೌಕರಿ ಎಷ್ಟೇ ಮಾಡಿದರು ಜೀವನದ ಭಿಗುಮಾನಗಳು ಮನದಲ್ಲೇ ಉಳಿದುಕೊಳ್ಳುತ್ತದೆ. ಅದೇ ಸ್ವಂತ ಉದ್ಯೋಗದಲ್ಲಿ ಸಮಾಜದ ಬದಲಾವಣೆಗಳು ಕಾಣಬಹುದು. ಸಮಾಜದಲ್ಲಿ ನಾಗರಿಕರ ಬದಲಾವಣೆಗಳು ಅವರ ಒಡನಾಟಗಳನ್ನು ಬಹಳಷ್ಟು ಹತ್ತಿರದಿಂದ ಕಾಣಬಹುದು. ಸಮಾಜದಲ್ಲಿ ಒಂದು ದೃಢ ನಿರ್ಧಾರ ಹೊರಬಂದು ಆತ್ಮ ಭಲದಿಂದ ಸಮಾಜದಲ್ಲಿ ಒಬ್ಬ successful entrepreneur ಆಗಿ ಹೊರಹೊಮ್ಮಲು ಒಳ್ಳೆಯ ಮಾರ್ಗವು ದೊರಕಲಿದೆ.
ಜನಸಂಖ್ಯೆ ಹೆಚ್ಚಾದಂತೆ ನಿರುದ್ಯೋಗ ಸಮಸ್ಯೆಯು ಹೆಚ್ಚಾಗತೊಡಗಿದೆ. ಇದಕ್ಕೆ ಸರ್ಕಾರಗಳನ್ನು ದೂಷಿಸುವುದಕ್ಕಿಂತ, ರಾಜಕಾರಣಿಗಳನ್ನು ದೂರುವುದಕ್ಕಿಂತ ಉದ್ಯೋಗವನ್ನು ನಾವೇ ಸೃಷ್ಟಿಸಿಕೊಳ್ಳುವುದು ಒಳಿತು. ವ್ಯಕ್ತಿಯು ತನ್ನ ಕಾಲ ಮೇಲೆ ತಾನು ನಿಂತು ಸ್ವಾವಲಂಭನೆಯ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರಗಳು ಕೂಡ ಹಲವಾರು ಯೋಜನೆಗಳನ್ನು ತಂದಿದೆ ಮತ್ತು ಬ್ಯಾಂಕುಗಳಲ್ಲಿ ಸ್ವಂತ ಉದ್ಯೋಗ ನೆಡೆಸಲು ಹಣಕಾಸಿನ ಸಹಾಯ ಕೂಡ ಮಾಡುತ್ತದೆ. ಈ ವಿಚಾರಗಳು ಕೆಲವರಿಗೆ ತಿಳಿದಿರುತ್ತದೆ, ಇನ್ನು ಕೆಲವರಿಗೆ ಅದರ ಅರಿವೇ ಇರುವುದಿಲ್ಲ. ಅಂತವರು ಯಶಸ್ವಿ ಉದ್ಯೋಗಿಗಳ ಸ್ನೇಹವನ್ನು ಬೆಳೆಸಿ ಮಾರ್ಗದರ್ಶನಗಳನ್ನು ಪಡೆದುಕೊಂಡಲ್ಲಿ ಯಶಸ್ವಿ ಉದ್ಯೋಗಿ ಆಗುವುದರಲ್ಲಿ ಸಂದೇಹವೇ ಇಲ್ಲ.
ನೌಕರಿಯು ನಾಲ್ಕು ಗೋಡೆಯ ಮಧ್ಯೆ ಕೆಲಸ ನಿರ್ವಹಿಸಿದರೆ ಸಾರ್ವಜನಿಕರ ಮತ್ತು ಸಾಮಾಜಿಕ ಚಿಂತನೆ ಯಾವುದು ಸಹ ನಮಗೆ ದೊರೆಯುವುದು ಸಹ ಕಷ್ಟವೆನಿಸುತ್ತದೆ. ನೌಕರಿಯೊಂದೇ ಜೀವನವಲ್ಲ, ಅದೊಂದು ಹೊಟ್ಟೆಪಾಡಿನ ದುಡಿಮೆ ಮತ್ತು ಸಂಸಾರ ಸಾಗಿಸಲು ಒಂದು ದೋಣಿ ಅಷ್ಟೇ. ಅದೇ ಸ್ವಉದ್ಯೋಗವೂ ಹೊಟ್ಟೆಪಾಡಿಗೆ ಅನ್ನದೇ ಹೋದರು ಸ್ವಂತ ಉದ್ಯೋಗದಿಂದ ಆತ್ಮ ಶಕ್ತಿ ಹೆಚ್ಚಳ, ಸಾರ್ವಜನಿಕರ ಜೊತೆಯಲ್ಲಿ ಹೆಚ್ಚಿನ ರೀತಿಯಲ್ಲಿ ಬೆಳೆಯಲು ಅನುವು ಮಾಡಿಕೊಡುತ್ತದೆ, ಬದುಕನ್ನು ಅರ್ಥ ಮಾಡಿಸುತ್ತದೆ. ಸಮಾಜದಲ್ಲಿನ ಪ್ರತಿಯೊಬ್ಬ ಜನರ ಮನಃಸ್ಥಿತಿಯನ್ನು ಅರ್ಥವಾಗುವಂತೆ ಮಾಡಿಸುತ್ತದೆ, ಮೊಟ್ಟ ಮೊದಲು ತಾಳ್ಮೆಯನ್ನು ಕಲಿಸುತ್ತದೆ ಈ ಸ್ವ ಉದ್ಯೋಗ ಎಂಬುವ ವೃತ್ತಿ.
ಓದು ಎಂಬುದು ಕೇವಲ ನಮ್ಮ ಬುದ್ದಿ ಶಕ್ತಿಗೆ ಮತ್ತು ಆಲೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಲೇ ಹೊರತು ಅದರಿಂದ ಇಂತದ್ದೇ ನೌಕರಿಯನ್ನು ಪಡೆದೆ ತೀರುತ್ತೇನೆ ಅನ್ನುವುದಲ್ಲ, ವಿದ್ಯಾಭ್ಯಾಸವು ಮನುಷ್ಯನ ಸಂಸ್ಕಾರವನ್ನು ಹೇಳಿಕೊಡುತ್ತದೆ. ಆ ಸಂಸ್ಕಾರವೇ ಜೀವನ ಪರ್ಯಂತ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸ್ವ ಉದ್ಯೋಗಿಯನ್ನಾಗಿ ಒಬ್ಬ ಯಶಸ್ವಿ ಉದ್ಯೋಗಿಯನ್ನಾಗಿ ಮಾಡುತ್ತದೆ.
ಸ್ವ ಉದ್ಯೋಗವು ಮನುಷ್ಯನಲ್ಲಿ ಹಲವಾರು ಬದಲಾವಣೆಗಳನ್ನು ಕಲಿಸುತ್ತದೆ ಮುಖ್ಯವಾಗಿ ಜೀವನವನ್ನು ಬಹಳ ಸುಲಲಿತವಾಗಿ ಕಟ್ಟಿಕೊಳ್ಳುವುದು ಹೇಳಿಕೊಡುತ್ತದೆ, ಅದು ಯಾವುದೇ ಉದ್ಯೋಗವಾಗಿರಲಿ ವ್ಯವಸಾಯ, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಬಟ್ಟೆ ತಯಾರಿಕೆ, ಕಬ್ಬಿಣದ ಕೆಲಸಗಳು, ಚಿನ್ನ ಬೆಳ್ಳಿ ಕೆಲಸ, ಕಾರ್ ಪೇಂಟರ್, ಮೀನುಗಾರಿಕೆ, ವಸ್ರ ವಿನ್ಯಾಸಗಾರರು, ಕಮ್ಮಾರರೂ, ಅಕ್ಕಸಾಲಿಗರು, ಕುಂಬಾರರು, ನೇಗಾರರು, ಸ್ವ ಶಿಕ್ಷಣ ವೃತ್ತಿ, ಟೆಕ್ನಿಕಲ್ ವೃತ್ತಿ ಇನ್ನು ಹಲವಾರು ಆಧುನಿಕ ಸ್ವ ಉದ್ಯೋಗಳು ನಮ್ಮ ಕಣ್ಣ ಮುಂದೆಯೇ ಇವೆ. ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆಯನ್ನು ಮಾಡಿಕೊಂಡು ಜೀವನವು ಒಂದು ಅರ್ಥ ಪೂರ್ಣ ಬದುಕನ್ನಾಗಿ ಮಾಡಿಕೊಳ್ಳುವುದು ಒಳಿತು.
ಈಗಿನ ಕಾಲದ ಯುವಕರು ನೌಕರಿಯನ್ನೇ ಬಯಸದೇ ಸ್ವಂತ ಉದ್ಯೋಗ ಮಾಡಿಕೊಂಡು ನಿರುದ್ಯೋಗಿತನ ನಿವಾರಿಸಿಕೊಂಡು, ಒಂದು ಅರ್ಥಗರ್ಭಿತ ಜೀವನ ನಡೆಸಿಕೊಂಡು ಯಶಸ್ವಿ ಜೀವನ ಸಾಗಿಸುವುದು ಅತ್ಯಂತ ಅರ್ಥ ಗರ್ಭಿತವಾಗಿರುತ್ತದೆ.
Entrepreneur ಪ್ರತಿ ಒಬ್ಬ ವ್ಯಕ್ತಿಯು ಆಗಲು ಸದ್ಯ ಅವನ ನೈತಿಕ ಬೆಳವಣಿಗೆ ಅತ್ಯಂತ ಶೀಘ್ರದಲ್ಲಿ ಬೆಳವಣಿಗೆ ಹೊಂದುತ್ತದೆ. ಆಲೋಚನಾ ಶಕ್ತಿಯು ದುಪ್ಪಟ್ಟಾಗುತ್ತದೆ. ಪ್ರತಿಯೊಬ್ಬ ಪುರುಷಯಾಗಲೀ ಅಥವಾ ಸ್ತ್ರಿ ಆಗಲಿ ಇಬ್ಬರಿಗೂ ಜೀವನದ ಕಷ್ಟ ಸುಖಗಳನ್ನು ಯಾವ ರೀತಿ ಸುಧಾರಿಸುವುದು ಕಲಿಸಿ ಕೊಡುತ್ತದೆ. ಹಾಗೆಯೇ, ಆಲೋಚನಾ ಶಕ್ತಿಯು ಕೂಡ ದುಪ್ಪಟ್ಟಾಗಿರುತ್ತೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post