ಮಂಡ್ಯ: ಸಿಎಂ ಪುತ್ರ ನಿಖಿಲ್ ಹಾಗೂ ಸುಮಲತಾ ಅಂಬರೀಶ್ ಅವರ ಸ್ಪರ್ಧೆಯಿಂದಾಗಿ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿರುವ ಮಂಡ್ಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಪ್ರತಿ ನಡೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಜಿಲ್ಲೆಯಾದ್ಯಂತ ಐಟಿ ಅಧಿಕಾರಿಗಳು ಮಫ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜನ ಸಾಮಾನ್ಯರಿಂದಲೇ ಮಾಹಿತಿ ಸಂಗ್ರಹಿಸುತ್ತಾ, ರಾಜಕೀಯ ಪಕ್ಷಗಳ ಮೇಲೆ ಕಣ್ಣಿಟ್ಟಿದ್ದಾರೆ.
ಕಳೆದ ವಾರವಷ್ಟೇ ಸಚಿವ ಸಿ.ಎಸ್. ಪುಟ್ಟರಾಜು ಸಂಬಂಧಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, ಆನಂತರ ಕಾಂಗ್ರೆಸ್ ಮುಖಂಡ ಎಂ.ಎಸ್. ಆತ್ಮಾನಂದ ಮನೆ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಗಳ ತಂಡ ಮಂಡ್ಯದಲ್ಲಿಯೇ ಬೀಡುಬಿಟ್ಟಿದೆ.
ಅಲ್ಲದೇ, ಕೆಆರ್’ಎಸ್ ಬಳಿ ಇರುವ ರಾಯಲ್ ಆರ್ಕಿಡ್’ನಲ್ಲಿ ನಿಖಿಲ್ ವಾಸ್ತವ್ಯ ಹೂಡಿದ್ದರು. ಅವರು ತಂಗಿದ್ದ ಕೊಠಡಿಯನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಅತ್ಯಂತ ಪ್ರಮುಖವಾಗಿ ಮೈತ್ರಿ ಪಕ್ಷಗಳು ಎಲ್ಲಿಲ್ಲಿ ಸಭೆ ನಡೆಸುತ್ತಿದ್ದಾರೋ, ಅಲ್ಲೆಲ್ಲಾ ಮಫ್ತಿಯಲ್ಲಿರುವ ಅಧಿಕಾರಿಗಳು ಜನರಿಂದಲೇ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Discussion about this post