ಭುವನೇಶ್ವರ: ಹಿಂದೂಗಳ ಪವಿತ್ರ ಅಚರಣೆಗಳಲ್ಲಿ ಒಂದಾದ ಪವಿತ್ರ ಜಗನ್ನಾಥ ರಥಯಾತ್ರೆ ಇಂದಿನಿಂದ ಒಡಿಶಾದ ಪುರಿಯಲ್ಲಿ ವೈಭವಯುತವಾಗಿ ಇಂದಿನಿಂದ ಆರಂಭವಾಗಿದ್ದು, 9 ದಿನ ನಡೆಯಲಿದೆ.
ಇದು ದೇಶದಲ್ಲಿ ಅತ್ಯಂತ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ ಹಾಗೂ ಇದರಲ್ಲಿ ಸುಮಾರು 10 ಲಕ್ಷ ಭಕ್ತರು ಸೇರುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಇಡಿಯ ಕಾರ್ಯಕ್ರಮಕ್ಕೆ ಅತ್ಯಂತ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ಇನ್ನು 9 ದಿನ ನಡೆಯಲಿರುವ ಈ ಯಾತ್ರೆಯಲ್ಲಿ ದೇಶ ಹಾಗೂ ವಿದೇಶಗಳಿಂದ ಸುಮಾರು 10 ಲಕ್ಷ ಭಕ್ತಾದಿಗಳು ಸೇರಲಿದ್ದಾರೆ.
ರಥಯಾತ್ರೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪವಿತ್ರ ಜಗನ್ನಾಥ ಯಾತ್ರೆಯ ಶುಭಾಶಯಗಳನ್ನು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ಸ್ವಾಮಿ ಜಗನ್ನಾಥನ ಕೃಪೆಯಿಂದ ನಮ್ಮ ದೇಶ ಸಮಗ್ರ ಅಭಿವೃದ್ದಿಯಾಗಲಿ. ದೇಶವಾಸಿಗಳಲ್ಲಿ ಶಾಂತಿ ಹಾಗೂ ಸಂಮೃದ್ದಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
Greetings on the auspicious occasion of Rath Yatra.
With the blessings of Lord Jagannath, may our country scale new heights of growth. May every Indian be happy and prosperous.
Jai Jagannath! pic.twitter.com/1Ifrxueaiu
— Narendra Modi (@narendramodi) July 14, 2018
ಹಾಗೆಯೇ, ತಮ್ಮ ವತಿಯಿಂದ ಸ್ವಾಮಿ ಜಗನ್ನಾಥ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಕೆಗಳನ್ನು ಕಳುಹಿಸಿದ್ದಾರೆ.
Ahmedabad: Latest #visuals of the annual Jagannath Rath Yatra from Jagannath Temple. #Gujarat pic.twitter.com/uExwriSlp8
— ANI (@ANI) July 14, 2018
ಸುಮಾರು ವರ್ಷಗಳಿಂದ ಇಲ್ಲಿಗೆ ಕಾಣಿಕೆಗಳನ್ನು ಕಳುಹಿಸುತ್ತಿರುವ ಮೋದಿ, ಈ ವರ್ಷ ಮಾವಿನ ಹಣ್ಣು, ಜಾಮೂನು, ದಾಳಿಂಬೆ ಹಣ್ಣುಗಳೊಂದಿಗೆ ಕಾಣಿಕೆಯನ್ನು ಕಳುಹಿಸಿದ್ದಾರೆ.
#Visuals of the annual Jagannath Rath Yatra from Jagannath Temple in Ahmedabad. #Gujarat pic.twitter.com/1vkeBHaY67
— ANI (@ANI) July 14, 2018
Discussion about this post