ಕಲ್ಪ ಮೀಡಿಯಾ ಹೌಸ್ | ಜಲಂಧರ್ |
ಭಾರತದ ಗಡಿ ಪ್ರವೇಶಿಸುತ್ತಿದ್ದ ಪಾಕಿಸ್ತಾನಿ ಡ್ರೋನ್ Pakistan drone ಅನ್ನು ಭಾರತೀಯ ಸೇನಾ ಪಡೆ Indian Army ಹೊಡೆದುರುಳಿಸಿ, 10 ಕೆಜಿಗೂ ಹೆಚ್ಚಿನ ಪ್ರಮಾಣದ ಹೆರಾಯಿನ್ ಪ್ಯಾಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾನುವಾರ ತಡರಾತ್ರಿ ಪಂಜಾಬ್ನ ಅಮೃತಸರ ಸೆಕ್ಟರ್ನಲ್ಲಿ ಪಾಕಿಸ್ತಾನ ಕಡೆಯಿಂದ ಡ್ರೋನ್ ಒಂದು ಭಾರತದ ಗಡಿ ಪ್ರವೇಶಿಸುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳ ಸಿಬ್ಬಂದಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಡ್ರೋನ್ ಅನ್ನು ಹೊಡೆದುರುಳಿಸಿ, ಡ್ರೋನ್ನೊಂದಿಗೆ ಕಟ್ಟಲಾಗಿದ್ದ ಬ್ಯಾಗ್ನಿಂದ 10 ಕೆಜಿ 670 ಗ್ರಾಂ ತೂಕದ ಒಂಬತ್ತು ಹೆರಾಯಿನ್ ಪ್ಯಾಕೆಟ್ಗಳನ್ನು ಯೋಧರು ವಶಪಡಿಸಿಕೊಂಡಿದ್ದಾರೆ ಎಂದು ಬಿಎಸ್ಎಫ್ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Also read: ಭದ್ರಾವತಿ: ಆಸ್ತಿ ತೆರಿಗೆ ಹೆಚ್ಚಳ ಆದೇಶ ಹಿಂಪಡೆಯಲು ಆಗ್ರಹ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post