ಕಲ್ಪ ಮೀಡಿಯಾ ಹೌಸ್ | ಜಮ್ಮು |
ಖಾಸಗಿ ಬಸ್ ಸೇತುವೆ ಮೇಲಿಂದ ಆಳವಾದ ಕಂದರಕ್ಕೆ ಬಿದ್ದ ಪರಿಣಾಮ 10 ಪ್ರಯಾಣಿಕರು ದುರ್ಮರಣ ಹೊಂದಿರುವ ಘಟನೆ ಜಮ್ಮುವಿನ ಬಳಿ ನಡೆದಿದೆ.
#WATCH | J&K | A bus going from Amritsar to Katra fell into a deep gorge. As per Jammu DC, 10 people died in the accident. More details awaited.
Visuals from the spot. pic.twitter.com/fM2rN0fMSN
— ANI (@ANI) May 30, 2023
ಅಮೃತಸರದಿಂದ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದ್ದು, ಕತ್ರಾದಿಂದ ಸುಮಾರು 15 ಕಿಮೀ ದೂರದಲ್ಲಿರುವ ಜಜ್ಜರ್ ಕೋಟ್ಲಿ ಬಳಿ ಇಂದು ಮುಂಜಾನೆ ಆಳವಾದ ಕಂದರಕ್ಕೆ ಬಸ್ ಉರುಳಿ ಬಿದ್ದಿರುವುದಾಗಿ ಜಮ್ಮು ಡೆಪ್ಯುಟಿ ಕಮಿಷನರ್ ಅವ್ನಿ ಲವಾಸಾ ಎಎನ್‌ಐಗೆ ತಿಳಿಸಿದ್ದಾರೆ.
ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, 55 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಜಮ್ಮು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Also read: ಮಹಾರಾಷ್ಟ್ರ ಕಾಂಗ್ರೆಸ್‌ನ ಏಕೈಕ ಲೋಕಸಭಾ ಸದಸ್ಯ ಬಾಲು ಧನೋರ್ಕರ್ ನಿಧನ
ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಬಹುತೇಕ ಮುಗಿದಿದೆ. ಬಸ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದುದ್ದೇ ಅಪಘಾತಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಮ್ಮು ಎಸ್ ಎಸ್ ಪಿ ಚಂದನ್ ಕೊಹ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post