ಕಲ್ಪ ಮೀಡಿಯಾ ಹೌಸ್ | ಜಮ್ಮು |
ಇಲ್ಲಿನ ಇಂದು ಮುಂಜಾನೆ ಭಾರತೀಯ ಸೇನೆ Indian Army ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಎನ್ಕೌಂಟರ್ ಮಾಡಲಾಗಿದೆ.
ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಡಿರುವ ಮಾಹಿತಿಯ ಪ್ರಕಾರ ಜಮ್ಮು ಹೆದ್ದಾರಿಯಲ್ಲಿ ಅನುಮಾಸ್ಪಾದವಾಗಿ ಲಾರಿಯೊಂದು ಸಂಚರಿಸುತ್ತಿದ್ದು, ಕೂಡಲೇ ಭದ್ರತಾ ಪಡೆಗಳು ಅದನ್ನು ಹಿಂಭಾಲಿಸಿ ಅಡ್ಡಗಟ್ಟಿ ನಿಲ್ಲಿಸಿದ ವೇಳೆ ಚಾಲಕ ಪರಾರಿಯಾಗಿದ್ದಾನೆ. ಈ ವೇಳೆ ಲಾರಿಯನ್ನು ಪರಿಶೀಲಿಸಿದಾಗ ಉಗ್ರರು ಅಡಗಿ ಕುಳಿತಿದ್ದು ಪತ್ತೆಯಾಗಿದೆ.
ಭದ್ರತಾ ಪಡೆಗಳನ್ನು ಕಂಡ ಉಗ್ರರು ಗುಂಡಿನ ದಾಳಿಗೆ ಮುಂದಾದ ವೇಳೆ ಇಡೀ ಸ್ಥಳವನ್ನು ಸುತ್ತುವರಿದ ಯೋಧರು ಭಾರೀ ಪ್ರಮಾಣದ ಪ್ರತೀ ಧಾಳಿ ನಡೆಸಿ, ನಾಲ್ವರು ಉಗ್ರರನ್ನು ಸದೆ ಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post