ಕಲ್ಪ ಮೀಡಿಯಾ ಹೌಸ್ | ಶ್ರೀನಗರ |
ಜಮ್ಮು ಕಾಶ್ಮೀರ #JammuKashmir ಸರ್ಕಾರವು ಅನಂತನಾಗ್’ನಲ್ಲಿರುವ ಪುರಾತನ ಮಾರ್ತಾಂಡ ಸೂರ್ಯ ದೇವಾಲಯವನ್ನು #MartandSunTemple ಮರುಸ್ಥಾಪನೆ ಮಾಡಲು ಮುಂದಾಗಿದೆ.
8ನೇ ಶತಮಾನದಲ್ಲಿ ಅನಂತನಾಗ್’ನಲ್ಲಿ ನಿರ್ಮಿಸಲಾಗಿದ್ದ ಈ ದೇವಾಲಯವನ್ನು ಮುಸ್ಲಿಂ ಆಡಳಿತಕಾರ ಸಿಕಂದರ್ ಬ್ಯುಟಿಕನ್ ನಾಶಪಡಿಸಿದ್ದನು.

ಹಿಂದೂ ರಾಜ ಲಲಿತಾದಿತ್ಯ ಮುಕ್ತಪದ ನಿರ್ಮಿಸಿದ 8 ನೇ ಶತಮಾನದ ಮಾರ್ತಾಂಡ ದೇವಾಲಯವು ಭಾರತದಲ್ಲಿನ ಸೂರ್ಯ ದೇವಾಲಯಗಳಲ್ಲಿ ಅತ್ಯಂತ ಹಳೆಯದು ಮತ್ತು ಅಮೂಲ್ಯವಾದ ಪ್ರಾಚೀನ ಆಧ್ಯಾತ್ಮಿಕ ಪರಂಪರೆಯ ಸಂಕೇತವಾಗಿದ್ದು, ಇದು ಎಎಸ್’ಐ #ArchaeologicalSurveyOfIndia ರಕ್ಷಿತ ಸ್ಮಾರಕವಾಗಿದೆ. ಸುಲ್ತಾನ್ ಸಿಕಂದರ್ ಶಾ ಮಿರಿಯ ಆದೇಶದ ಮೇರೆಗೆ ಮಾರ್ತಾಂಡ ಸೂರ್ಯ ದೇವಾಲಯವನ್ನು ನಾಶಪಡಿಸಲಾಯಿತು ಎಂದು ಹೇಳಲಾಗುತ್ತದೆ.

ಇತ್ತೀಚೆಗೆ, ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರಸಿದ್ಧ ಸೂರ್ಯ ದೇವಾಲಯದ ಆವರಣದಲ್ಲಿರುವ ರಾಮಮಂದಿರದಲ್ಲಿ ಅಯೋಧ್ಯೆಯ ಕಲಶವನ್ನು ಸ್ಥಾಪಿಸಲಾಯಿತು. ರಾಮಮಂದಿರಗಳನ್ನು ಆಯ್ಕೆ ಮಾಡಲು ಕಳುಹಿಸಲಾದ ‘ಕಲಶ’ವನ್ನು ಉತ್ತರ ಪ್ರದೇಶ ಮತ್ತು ತಮಿಳುನಾಡಿನ ಭಕ್ತರ ಸಮ್ಮುಖದಲ್ಲಿ ಸ್ಥಳೀಯ ಜನರು ಸ್ಥಾಪಿಸಿದರು.
ಕಳೆದ ತಿಂಗಳು, ಜೆ .ಕೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಮಾರ್ತಾಂಡ್ ಸೂರ್ಯ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಶ್ರೀ ಮಾರ್ತಾಂಡ ತೀರ್ಥ ಟ್ರಸ್ಟ್ ವತಿಯಿಂದ ನಡೆದ ಮಹಾಯಜ್ಞದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post