ಕಲ್ಪ ಮೀಡಿಯಾ ಹೌಸ್ | ಜಮ್ಮು |
ಕಣಿವೆ ರಾಜ್ಯ ಜಮ್ಮು ಕಾಶ್ಮೀರದ #Jammu and Kashmir ಕಥುವಾ ಹಾಗೂ ದೋಡಾ ಜಿಲ್ಲೆಗಳಲ್ಲಿ ಸಿಆರ್’ಪಿಎಫ್ ಯೋಧರ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾದ ಉಗ್ರರಿಗೆ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದು, ಈ ವೇಳೆ ಸಿಆರ್’ಪಿಎಫ್ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಎರಡೂ ಜಿಲ್ಲೆಗಳಲ್ಲಿ ಯೋಧರು ಹಾಗೂ ಉಗ್ರರ ನಡುವೆ ಭಾರೀ ಸಂಘರ್ಷ ನಡೆದಿದ್ದು, ಸಿಆರ್’ಪಿಎಫ್ ಓರ್ವ ಜವಾನ ಹುತಾತ್ಮರಾಗಿದ್ದು, ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Also read: ಆಂಧ್ರಪ್ರದೇಶ | ನಾಯ್ಡು ಸಿಎಂ, ಪವನ್ ಕಲ್ಯಾಣ್ ಡಿಸಿಎಂ | ಪ್ರಮಾಣ ವಚನ ಸ್ವೀಕಾರ | ಪ್ರಧಾನಿ ಉಪಸ್ಥಿತಿ
ದೋಡಾ ಜಿಲ್ಲೆಯಲ್ಲಿ, ಭದವಾರ್-ಪಥಂಕೋಟ್ ರಸ್ತೆಯಲ್ಲಿ ಚಟಗರ್’ದ ಮೇಲ್ಭಾಗದಲ್ಲಿ ಜಂಟಿ ಚೆಕ್ ಹುದ್ದೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ರಾಷ್ಟ್ರೀಯ ರೈಫಲ್’ನ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.
ಮತ್ತೊಂದೆಡೆ, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಜವಾನ ಕಬೀರ್ ದಾಸ್ ಅವರು ನಸುಕಿನ ಜಾವ 3 ಗಂಟೆ ಸುಮಾರಿಗೆ ಕಥುವಾ ಜಿಲ್ಲೆಯ ಸೈದಾ ಸುಖಲ್ ಗ್ರಾಮದಲ್ಲಿ ನಡೆದ ಭಯೋತ್ಪಾದಕರಿಂದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post