ಬೆಂಗಳೂರು: ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಜನಾರ್ಧನ ರೆಡ್ಡಿಗೆ ಇಂದು ಷರತ್ತುಬದ್ದ ಜಾಮೀನು ದೊರೆತಿದೆ.
ಈ ಕುರಿತಂತೆ ಇಂದು ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ, ಒಂದು ಲಕ್ಷ ಬಾಂಡ್ ಇಬ್ಬರು ಶೂರಿಟಿ ಪಡೆದಿದೆ.
ಅಂಬಿಡೆಂಟ್ ಕಂಪನಿಯಲ್ಲಿ ನಡೆದ ಕೋಟ್ಯಾಂತರ ರೂ. ಅವ್ಯವಹಾರದ ಕುರಿತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದ ರದ್ದತಿಗಾಗಿ ಡೀಲ್ ನಡೆದಿದೆ ಎನ್ನುವ ಆರೋಪದ ಅಡಿಯಲ್ಲಿ ರೆಡ್ಡಿಯನ್ನು ಬಂಧಿಸಲಾಗಿತ್ತು. ರೆಡ್ಡಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
Discussion about this post