ಕಲ್ಪ ಮೀಡಿಯಾ ಹೌಸ್ | ಝಾನ್ಸಿ(ಉತ್ತರ ಪ್ರದೇಶ) |
ಕಾರಿನಲ್ಲಿ ಹೆಲ್ಮೆಟ್ ಧರಿಸಿಲ್ಲ #Helmet in Car ಎಂಬ ಕಾರಣಕ್ಕಾಗಿ ಕಾರು ಮಾಲೀಕನಿಗೆ ಟ್ರಾಫಿಕ್ ಪೊಲೀಸರು ದಂಢ ವಿಧಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
यूपी | झांसी
बहादुर सिंह परिहार के पास ऑडी कार है. एक दिन उनका ई-चालान कटा.
जिसमें लिखा था- ‘वह बिना हेलमेट लगाए अपनी कार चला रहे थे.’
तब से बहादुर सिंह चालान से बचने के लिए हेलमेट लगाकर अपनी कार चला रहे हैं.
आदमी ऑडी का सुख भी नहीं ले पा रहा है !! pic.twitter.com/m0Z7JiWMHF
— Govind Pratap Singh | GPS (@govindprataps12) May 15, 2024
ಸಾಮಾನ್ಯವಾಗಿ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಇದ್ದರೆ ದಂಡ ವಿಧಿಸುವುದು ಸಾಮಾನ್ಯ. ಆದರೆ, ಕಾರು ಚಾಲಕ ಸಹ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿರುವುದು ವಿಚಿತ್ರ ಎನಿಸಿದೆ.
ಟ್ರಕ್ಕರ್ ಯೂನಿಯನ್ ಅಧ್ಯಕ್ಷರಾಗಿರುವ ಪರಿಹಾರ್ ಅವರ ಫೋನ್’ಗೆ ಮಾರ್ಚ್ ತಿಂಗಳಲ್ಲಿ ಸಂದೇಶವೊAದು ಬಂದಿದೆ. ಅದರಲ್ಲಿ ಅವರ ಕಾರಿಗೆ ದಂಡ ವಿಧಿಸಲಾಗಿತ್ತು. ಹೀಗಾಗಿ ವೆಬ್ ಸೈಟ್’ಗೆ ಹೋಗಿ ಏಕೆ ದಂಡ ವಿಧಿಸಲಾಗಿದೆ ಎಂದು ನೋಡಿದಾಗ, ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಅವರಿಗೆ ಚಲನ್ ಕಳುಹಿಸಲಾಗಿತ್ತು.
Also read: ಮುಂದಿನ 5 ದಿನ ರಾಜ್ಯದ ಹಲವೆಡೆ ಉತ್ತಮ ಮಳೆ | ಮಲೆನಾಡಿನ ಪರಿಸ್ಥಿತಿಯೇನು? ಇಲ್ಲಿದೆ ವಿವರ
ಈ ಹಿನ್ನೆಲೆಯಲ್ಲಿ ಝಾನ್ಸಿಯ ನಂದು ಕಾಲೋನಿಯ ನಿವಾಸಿಯಾದ ಪರಿಹಾರ್ ಅವರು ಸೀದಾ ಹೋಗಿ ಟ್ರಾಫಿಕ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದರೆ ಪೊಲೀಸರು ಈ ವಿಚಾರವನ್ನು ಲೋಕಸಭಾ ಚುನಾವಣೆಯ ನಂತರ ಗಮನಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇನ್ನಷ್ಟು ದಂಡ ಬೀಳದೇ ಇರಲಿ ಎಂಬ ಕಾರಣಕ್ಕೆ ತಾವು ಹೆಲ್ಮೆಟ್ ಧರಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post