ಶ್ರೀನಗರ: ಗಡಿಯಲ್ಲಿ ಹೆಚ್ಚಾಗಿರುವ ಉಗ್ರರ ಉಪಟಳವನ್ನು ಹತ್ತಿಕ್ಕಲು ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆ ಇಂದು ಮಧ್ಯಾಹ್ನ ಮೂವರು ಉಗ್ರರನ್ನು ಬೇಟೆಯಾಡಿದೆ.
ಕುಪ್ವಾರ ಜಿಲ್ಲೆಯಲ್ಲಿ ಇಂದು ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಬಲಿ ಹಾಕಿರುವ ಸೇನೆ, ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇದೇ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ವೀರಸ್ವರ್ಗ ಸೇರಿದ್ದಾರೆ.
ಇಂದು ನಡೆದ ಕಾರ್ಯಾಚರಣೆಯಲ್ಲಿ ಒಟ್ಟು ಐವರನ್ನು ಹತ್ಯೆ ಮಾಡಲಾಗಿದ್ದು, ಇದರಲ್ಲಿ ಮೂವರು ಉಗ್ರರು ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ತಿಳಿದುಬಂದಿಲ್ಲ ಎನ್ನಲಾಗಿದೆ.
ಎಲ್ಲ ಉಗ್ರರು ಜೈಷ್ ಎ ಮೊಹಮದ್ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
Discussion about this post