ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸುಮಾರು 400 ವರ್ಷಗಳ ನಂತರ ಬರಿಗಣ್ಣಿಗೆ ಕಂಡ ಗುರು ಮತ್ತು ಶನಿ ಗ್ರಹಗಳ ಸಮಾಗಮದ ವಿಸ್ಮಯವನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು.
ನಗರದ ಜೆಎನ್’ಎನ್’ಸಿಇ ಇಂಜಿನಿಯರಿಂಗ್ ಕಾಲೇಜಿನ ಚಿರಂತನ ಗ್ರಿನ್ ಟೆಕ್ನಾಲಜಿ ಸೆಂಟರ್ ಮತ್ತು ಸೆಂಟರ್ ಫಾರ್ ಇನೊವೇಷನ್ ಅಂಡ್ ಎಂಟ್ರಪ್ರಿನರ್ಶಿಪ್ ವತಿಯಿಂದ ಇಂದು ಏರ್ಪಡಿಸಿದ್ದ ಸ್ಕೈ ವಾಚಿಂಗ್ ಕಾರ್ಯಕ್ರಮದಲ್ಲಿ ಗ್ರಹಗಳ ಸಮಾಗಮವನ್ನು ಟೆಲಿಸ್ಕೋಪ್ ಮೂಲಕ ಕಣ್ತುಂಬಿಕೊಳ್ಳಲಾಯಿತು.
ಸೂರ್ಯ ಮುಳುಗುತ್ತಿದ್ದಂತೆ ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳ ನಡುವಿನ ನೈರುತ್ಯ ದಿಕ್ಕಿಗೆ ತಿರುಗಿ ಕ್ಷಿತಿಜದಿಂದ ಸುಮಾರು 40 ಡಿಗ್ರಿ ತಲೆ ಮೇಲೆತ್ತಿ ನೋಡಿದರೆ ಹೊಳೆಯುವ ದೊಡ್ಡ ಗುರು ಗ್ರಹ ಅದರ ಮೇಲೆಯೇ ಒಂದಡಿ ದೂರದಲ್ಲಿ ಶನಿಗ್ರಹ ಕಂಡ ಬಂದಿತು. 1226 ಹಾಗೂ 1623ರಲ್ಲಿ ಈ ಸಮಾಗಮ ಸಂಭವಿಸಿತ್ತು.
ಕಾರ್ಯಕ್ರಮದಲ್ಲಿ ಜೆಎನ್’ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಶಿಧರ ಕೆ ಕುದರಿ, ಶೈಕ್ಷಣಿಕ ಡೀನ್ ಡಾ.ಪಿ. ಮಂಜುನಾಥ, ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ. ರಜತ್ ಹೆಗಡೆ, ನಿವೃತ್ತ ಉಪ ಪ್ರಾಂಶುಪಾಲರಾದ ಡಾ.ಎಲ್.ಕೆ. ಶ್ರೀಪತಿ, ಸಹ ಪ್ರಾಧ್ಯಾಪಕರಾದ ಎಚ್.ಕೆ. ಪ್ರದೀಪ್, ಎಸ್.ಜಿ. ಚೇತನ್, ಕೆ.ಎಲ್. ಅರುಣ್ ಕುಮಾರ್, ನಾವಿನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರದ ಯೋಜನಾ ಸಂಯೋಜಕ ಸಿ.ಎಂ. ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post