No Result
View All Result
ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ದಾಖಲೆ ನಿಧಿ ಸಂಗ್ರಹ
English Articles

Haseena Themali Raises Over ₹5 Lakh for Palliative Care at the Tata Mumbai Marathon 2026 in her bid

by ಕಲ್ಪ ನ್ಯೂಸ್
January 15, 2026
0

Kalpa Media House  |  Bangalore  | The bid to support the creation of the first world-class palliative care centre in...

Read moreDetails
ಚಳಿಗಾಲದ ಸೋಂಕುಗಳು & ಆಂಟಿಬಯೋಟಿಕ್ ದುರ್ಬಳಕೆ | ವೈರಲ್ ಯಾವುದು? ಅಪಾಯಕಾರಿ ಯಾವುದು?

Winter Infections and Antibiotic Misuse: What Is Viral? What Is Dangerous?

January 12, 2026
ಶಿವಮೊಗ್ಗ | ಜ.5-9 | ಕೃಷಿ ವಿವಿಯಲ್ಲಿ ನಡೆಯಲಿದೆ ಅಂತಾರಾಷ್ಟ್ರೀಯ ಮಹತ್ವದ ಕಾರ್ಯಾಗಾರ

Shivamogga | An international workshop will be held at the Agricultural University from Jan 5-9

January 1, 2026
ನಿಮಗೂ ಹೊಟ್ಟೆ ಹಿಂಸೆ ಇದೆಯಾ? ಹಾಗಾದ್ರೆ `ವಿಂಟರ್ ಪಾರ್ಟಿ ಸಿಂಡ್ರೋಮ್’ ಇರಬಹುದು | ಏನಿದು ಕಾಯಿಲೆ?

Winter Party Syndrome: Festive Bingeing Triggers 25% Spike in Stomach Troubles”

January 1, 2026
ಲೆವೆಲ್ ಕ್ರಾಸಿಂಗ್ ಕಾಮಗಾರಿ | ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ರದ್ದು

Major update of Shivamogga – Bengaluru Jana Shathabdi, Shivamogga – Chikkamagalur, Tumkur trains

December 27, 2025
  • Advertise With Us
  • Grievances
  • About Us
  • Contact Us
Thursday, January 15, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಭೀಕರ ಘಟನೆ ಬಗ್ಗೆ 8 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ

ಪ್ರಪಂಚದ ಭೂಪಟದಿಂದ ಪಾಕಿಸ್ಥಾನವನ್ನು ಕಿತ್ತು ಹಾಕುವ ದುರಂತಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳೂ ದಟ್ಟವಾಗಿವೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 17, 2019
in Special Articles
0
ಭೀಕರ ಘಟನೆ ಬಗ್ಗೆ 8 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ
Share on FacebookShare on TwitterShare on WhatsApp

ಭಾರತದ ಇತಿಹಾಸ ಕಂಡು ಕೇಳರಿಯದ ಯುರೋಪ್ ಮಾದರಿಯಲ್ಲಿ ಉಗ್ರರು ನಡೆಸಿದ ಭೀಕರ ಸ್ಫೋಟಕ್ಕೆ ನಮ್ಮ ಸೇನೆ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಪಾಕಿಸ್ಥಾನ ಪ್ರೇರಿತ ಉಗ್ರರ ಈ ಕ್ರೂರ ಕೃತ್ಯಕ್ಕೆ ಇಡಿಯ ಭಾರತವೇ ಕೆರಳಿದ್ದು, ಪ್ರತೀಕಾರದ ಕಿಚ್ಚಿನಲ್ಲಿ ತಾಯಿ ಭಾರತಿಯ ಮಕ್ಕಳು ಕುದಿಯುತ್ತಿದ್ದಾರೆ.

ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ

ಪಾಕಿಸ್ಥಾನ ಚುನಾವಣೆ ವೇಳೆ ಇಮ್ರಾನ್ ಖಾನ್ ಜಾತಕ ವಿಮರ್ಷೆ ಮಾಡಿ ಲೇಖನ ಬರೆದಿದ್ದ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರು, ಚುನಾವಣೆಗೂ ಮುನ್ನ ಪಾಕಿಸ್ಥಾನದಿಂದ ಘೋರ ದುರಂತಗಳು, ಉಪಟಳಗಳು ಹೆಚ್ಚಾಗಬಹುದು. ಅಲ್ಲದೇ, ಕಾರ್ಗಿಲ್’ನಂತಹ ಘಟನೆಯೂ ಸಹ ನಡೆಯಬಹುದು ಎಂದು ನುಡಿದಿದ್ದರು.

ಪ್ರಕಾಶ್ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ

ಈಗ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿಯಿರುವಂತೆಯೇ ಪಾಕಿ ಉಗ್ರರು ಇಂತಹ ಕೃತ್ಯ ಎಸಗಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಕಲ್ಪ ನ್ಯೂಸ್ ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು:

ಈ ಸಂದರ್ಭದಲ್ಲಿ ಹೇಳುವುದಾದರೆ, ಪಾಕಿಸ್ಥಾನಿಗಳು ನಿಜಕ್ಕೂ ಎಡವಟ್ಟು ಮಾಡಿಕೊಳ್ಳುತ್ತಾರೆ. ಪಾಕ್ ಈಗಾಗಲೇ ಸಾಲ ಸೋಲದಲ್ಲಿ ಮುಳುಗಿ ಬೀದಿಗೆ ಬಿದ್ದಿದೆ. ಇಂತಹ ವೇಳೆಯಲ್ಲಿಯೇ ಅವರು ಬೇರೆಯವರ ಮುಲಾಜಿನಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, ಅಲ್ಲಿನ ನಿಯಂತ್ರಣ ಇಮ್ರಾನ್ ಕೈ ಹಿಡಿತದಲ್ಲಿ ಇಲ್ಲ.
ಇದಕ್ಕೂ ಮುಖ್ಯವಾಗಿ ಕೇತು ಧನುರಾಶಿಗೆ ಬರುವಾಗ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾಂದರ್ಭಿಕ ಹಾಗೂ ಜ್ಯೋತಿಷ್ಯಾಧಾರಿತವಾಗಿ ನೋಡುವುದಾದರೆ ಪಾಕಿಸ್ಥಾನ ತಾನೇ ಎಡವಟ್ಟು ಮಾಡಿಕೊಳ್ಳುವುದು ನಿಶ್ಚಿತ. ಇಮ್ರಾನ್ ಖಾನ್ ಮೂಲಕವೇ ಆ ದೇಶಕ್ಕೆ ಭಾರೀ ಹೊಡೆತ ಖಂಡಿತ. ಎಷ್ಟರ ಮಟ್ಟಿಗೆ ಹೋಗಬಹುದು ಎಂದರೆ ಪ್ರಪಂಚದ ಭೂಪಟದಿಂದ ಪಾಕಿಸ್ಥಾನವನ್ನು ಕಿತ್ತು ಹಾಕುವ ದುರಂತಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳೂ ದಟ್ಟವಾಗಿವೆ.
ಇವೆಲ್ಲವೂ, ಭಾರತ ಹಾಗೂ ನರೇಂದ್ರ ಮೋದಿಗೆ ವರದಾನವಾಗಲಿದೆ.

ಇಮ್ರಾನ್ ಖಾನ್ ಕುರಿತು 2018ರ ಜುಲೈ 28ರಂದು ಪ್ರಕಾಶ್ ಅಮ್ಮಣ್ಣಾಯ ಅವರು ಬರೆದ ಲೇಖನ ಯಥಾವತ್ ಇಲ್ಲಿದೆ:

ಈಗಾಗಲೇ ಪಾಕಿಸ್ಥಾನದ ಮಹಾ ಚುನಾವಣೆ ಮುಗಿದಿದೆ. ಇನ್ನೇನು ಸರಕಾರ ರಚನೆಯಾಗುವುದೊಂದೇ ಬಾಕಿ. ಶಾಂತಿಯೋ ಸಂಗ್ರಾಮವೋ ಅದು ನಿರ್ಧಾರವಾಗುವುದು ಆ ನಾಯಕನ ಗುಣಗಳ ಆಧಾರದಲ್ಲಿ. ಜ್ಯೋತಿಷ್ಯರು ತಮ್ಮ ತಮ್ಮ ದೃಷ್ಟಿ ಕೋನಗಳಲ್ಲಿ(view) ನಲ್ಲಿ ನೋಡುವವರು. ಇತರರೂ ಅಂದರೆ ರಾಜಕೀಯ ತಂತ್ರಜ್ಞರೂ ಅವರದ್ದೇ ದೃಷ್ಟಿಕೋನದಲ್ಲಿ ನೋಡುತ್ತಾರೆ.

ಒಟ್ಟಿನಲ್ಲಿ ಪಾಕಿಸ್ಥಾನವು ಜಗತ್ತಿನ ಸಂಬಂಧಗಳ ಪ್ರಸಕ್ತ ಪರಿಸ್ಥಿತಿಯಲ್ಲಿ, ಅಲ್ಲಿನ ಸರಕಾರವನ್ನು ರಚನೆಗೆ ಅನುವು ಮಾಡಿಕೊಟ್ಟ ಪ್ರಜೆಗಳ ಭಾವನೆಗಳಿಗಾಗಿ ಸ್ಪಂದಿಸಬೇಕಾಗುತ್ತದೆ. ಅದಕ್ಕೆ ತದ್ವಿರುದ್ಧವಾದಾಗ ಪತನವೂ ಆಗಬಹುದು.

ಇಡೀ ಜಗತ್ತಿನ ಹಲವು ಅಭಿವೃದ್ಧಿ ರಾಷ್ಟ್ರಗಳು ಪಾಕಿಸ್ಥಾನವನ್ನು ಒಂದು ಭಯೋತ್ಪಾದಕರ ರಾಷ್ಟ್ರ, ಭಯೋತ್ಪಾದಕರಿಗೆ ರಕ್ಷಣೆ ನೀಡುವ ರಾಷ್ಟ್ರ ಎಂದು ಪರಿಗಣಿಸಿಯಾಗಿದೆ. ಕೆಲವರು ಘೋಷಣೆಯನ್ನೂ ಮಾಡಿದ್ದಾಗಿದೆ.

ಇಂತಹ ಒಂದು ಪಾಕಿಸ್ಥಾನಕ್ಕೆ ಈ ಚುನಾವಣೆಯಲ್ಲಿ ಇಮ್ರಾನ್ ಖಾನ್ ತಮ್ಮ ಪಕ್ಷ PTI ಯಲ್ಲಿ 121 seat ಗೆದ್ದು ತಂದಿದ್ದಾರೆ. ಯಾವ ಪಕ್ಷಕ್ಕೂ ಸ್ವತಂತ್ರವಾಗಿ ಸರಕಾರ ರಚಿಸುವುದಕ್ಕಾಗುವುದಿಲ್ಲ. 342 seat ನ ಸಂಸತ್ತಿನಲ್ಲಿ 172 ಸ್ಥಾನಗಳು ಬಹುಮತಕ್ಕೆ ಬೇಕಾಗುತ್ತದೆ. ಅಂತಹದ್ದರಲ್ಲಿ ಅತಿದೊಡ್ಡ ಸಂಖ್ಯೆಯು ಇಮ್ರಾನ್ ಖಾನ್ ಗೆ ಇದೆ. ಬಹುತೇಕ ಇಮ್ರಾನ್ ಖಾನ್ ಪ್ರಧಾನಿಯಾಗುವ ಸೂಚನೆಗಳೂ ಇವೆ.

ಮೋದಿಯೊಂದಿಗೆ ಹೋಲಿಕೆ ಮಾಡಿಕೊಂಡಿದ್ದ

ಇಮ್ರಾನ್ ಖಾನ್ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಭಾರತದ ಪ್ರಧಾನಿ ಮೋದಿಯವರ ಆದರ್ಶತೆಯನ್ನು ಬಣ್ಣಿಸಿ ಅದರ ಲಾಭದಿಂದ ಗೆಲುವನ್ನು ಸಾಧಿಸಿರಲೂಬಹುದು. ಅಂದರೆ ಅವನು ಮೋದಿಯವರ ಸಂಘಟನಾ ಸಾಮರ್ಥ್ಯ ಮತ್ತು ದೇಶ ವಿದೇಶಗಳ ಕೀರ್ತಿಯನ್ನು ವರ್ಣಿಸಿ, ಅದೇ ಮಾದರಿಯಲ್ಲಿ ನಾನೂ ಇದ್ದೇನೆ ಎಂಬ ಆಶ್ವಾಸನೆ ನೀಡಿದಂತಾಯ್ತು. ಇಲ್ಲಿ ಮೋದಿಯವರ ಸಂಘ ಶಕ್ತಿಯ ವರ್ಣನೆ ಮಾಡಿದ್ದಷ್ಟೆ. ಅದು ಯಾವ ಸ್ವರೂಪದ್ದು ಎಂದೇನೂ ಹೇಳಲಿಲ್ಲ.

ಹಾಗಾದರೆ ಇಮ್ರಾನ್ ಖಾನ್ ಆ ಶಕ್ತಿಯನ್ನು ಹೇಗೆ ಅನುಷ್ಟಾನಿಸಿಕೊಳ್ಳಬಹುದು ಎಂದು ಚಿಂತನೆ ಮಾಡಬೇಕು. ಮೋದಿಯವರ ಪ್ರಖ್ಯಾತಿ ಹಿಂದುತ್ವ, ಭಾರತೀಯ ಸನಾತನ ಪರಂಪರೆಯ ಉಳಿವು. ಆದರೆ ಇಮ್ರಾನ್ ಖಾನ್ ನದ್ದು ಹಾಗಿರಲು ಸಾಧ್ಯವಿಲ್ಲ. ಮೋದಿಯವರಂತೆ ದಕ್ಷ ಆಡಳಿತ ನೀಡಬೇಕಾದರೆ, ಬೆಂಬಲಿಗರ ಮನಸ್ಸನ್ನು ಸಂತೋಷಗಳಿಸಬೇಕು. ಇದರಲ್ಲಿ ಪ್ರಧಾನವಾದದ್ದು ಇಸ್ಲಾಂ ಎಂದು ಹೇಳಲಾಗದು.

ಪಾಕಿಸ್ಥಾನದ ಇಮ್ರಾನ್ ಖಾನನಿಂದ ಶಾಂತಿಯೋ, ಸಂಗ್ರಾಮವೋ??

ಇಸ್ಲಾಮಿನೊಳಗೆ ಇರುವ ಮತಾಂಧತೆಯನ್ನೇ ಹೈಲೈಟ್ ಮಾಡಬೇಕಾದೀತು. ಇಸ್ಲಾಂ ತತ್ವವು ಒಂದು ಸಾತ್ವಿಕವಾದ ಅಹಿಂಸಾತ್ಮಕ ರೂಪ. ಆದರೆ ಅದರೊಳಗೆ ಉಗ್ರಗಾಮಿತ್ವವಿದೆ. ಇದು ಮತಾಂಧ ಸ್ವರೂಪದಲ್ಲಿ ಭಯೋತ್ಪಾದನೆ ಮಾಡುವಂತಹದ್ದು.

ಭಾರತಕ್ಕಾಗುವಾಗ ಕಾಶ್ಮೀರವನ್ನು ತಮ್ಮದಾಗಿಸಿಕೊಳ್ಳುವ ಬಯಕೆ. ಇಲ್ಲಿ ಮೋದಿಯವರು ಇರುವುದರಿಂದ ಸಂಧಾನ ಮೂಲಕ ಪಡೆಯವುದು ಅಸಂಭವ. ಹಾಗಾದರೆ ಸಂಘರ್ಷ(ಯುದ್ಧವಲ್ಲ ಹಿಂಸೆ)ದ ಮೂಲಕವೇ ಆಗಬೇಕಷ್ಟೆ.

ನಮ್ಮ ದೃಷ್ಟಿಯು ಪಕ್ಕನೆ ಹೋಗುವುದು ಜಾತಕಕ್ಕೆ. ಇಮ್ರಾನ್ ಖಾನ್ ಜಾತಕ ಹೇಗಿದೆ?

ನೈತಿಕ ಹಾಗೂ ಜಾಗತಿಕ ಬಲವಿಲ್ಲ

ಇಮ್ರಾನ್ ಖಾನ್ ವೃಶ್ಚಿಕ ಲಗ್ನ ಜನಿತರು, ಕುಂಭ ರಾಶಿ ಶತಭಿಷ ನಕ್ಷತ್ರ. ಸದ್ಯ ಶುಕ್ರದಶೆ. ಗೋಚರದಲ್ಲೂ ಅಕ್ಟೋಬರ್ ನಂತರ ಇವರಿಗೆ ಉತ್ತಮ ಫಲ ನೀಡುವ ಕಾಲ. ಇವರ ಜಾತಕದಲ್ಲಿ ಶನಿ ಅತ್ಯಂತ ಬಲಿಷ್ಟ 29.5°(ಮೋದಿಯವರ ಜಾತಕದ ಶನಿಯಂತೆ) ಚಾಪೆಯಡಿಯಲ್ಲಿ ನುಗ್ಗಿದರೆ ರಂಗೋಲಿಯಡಿಯಲ್ಲಿ ನುಸುಳುವ ಜಾಯ ಮಾನ ಇವರದ್ದು. same as Modi. ಆದರೆ ಈ ಶನಿಯು ಇವರಿಗೆ ಏಕಾದಶ ಭಾವದಲ್ಲಿರುವುದು. ವೃಶ್ಚಿಕಕ್ಕೆ ಕನ್ಯಾ ರಾಶಿಯು ಮಹಾಬಾಧಾ ರಾಶಿಯೂ, ಶನಿಗೆ ಏಕಾದಶ ವೀಕ್ಷಣೆ ಉತ್ತಮವಾದರೆ, ಏಕಾದಶದಲ್ಲಿ ಸ್ಥಿತನಾಗುವುದು ಅನಿಷ್ಟವೂ ಆಗುತ್ತದೆ. ಯಾಕೆಂದರೆ ಶನಿಯ ಮೂರನೆಯ ಪೂರ್ಣ ದೃಷ್ಟಿ ಲಗ್ನಕ್ಕೆ ಬಿದ್ದಾಗ ದುರ್ಬುದ್ಧಿ ಶುರುವಾಗುತ್ತದೆ. ಒಂದು ವೇಳೆ ಗುರು ವೀಕ್ಷಣೆ, ಗುರುವಿನ ಕ್ಷೇತ್ರ, ಗುರು ನಕ್ಷತ್ರದಲ್ಲಿ ಇದ್ದರೆ ದುರ್ಬುದ್ಧಿ ನಾಶವಾಗುತ್ತದೆ. ಇಲ್ಲಿ ಇದು ಯಾವುದೂ ಇಲ್ಲ. ಹಿಂದೆ ರಾವಣನಿಗೆ ಏಕಾದಶದಲ್ಲಿ ಶನಿ ಇದ್ದ. ಪರಿಣಾಮ ಏನೆಂದು ಬೇರೆ ಹೇಳಬೇಕಾಗಿಲ್ಲ.

ಇನ್ನು ನೈತಿಕತೆ, ಧರ್ಮ ಪ್ರಜ್ಞೆಯಲ್ಲಿ ವ್ಯತ್ಯಾಸಗಳಿವೆ. ಹಿಂದೆ ರಾಕ್ಷಸರೂ ವರ ಬಲದಿಂದ ದೇವತೆಗಳನ್ನು ಓಡಿಸಿದಂತೆ ಇಂದು ಇವನೂ ಮೋದಿಯವರಿಗೆ ಒಂದು ಸವಾಲು ಆದಾನು. ಆದರೆ ಇವನಿಗೆ ದೈವ ಬಲ(ಜ್ಞಾನ) ಇಲ್ಲ. ಅಂದರೆ ಇಡೀ ಜಗತ್ತಿನಲ್ಲೇ ನೈತಿಕ ಬಲ ಇಲ್ಲದಿರುವುದು ಮತ್ತು ಭಯೋತ್ಪಾದಕ ಗಣಗಳ ಮಧ್ಯದಲ್ಲೇ ಇರುವುದು. ಹಾಗಾಗಿ ಮೋದಿಯವರೆದುರು ಬಲಹೀನನಾಗಬಹುದು.

ಆದರೂ ನಮ್ಮ ದೇಶದೊಳಗಿನ ಹಿತಶತ್ರುಗಳು ಮೋದಿಯವನ್ನು ನಾಶಮಾಡಲಿಕ್ಕಾಗಿ ಇವನ ಸಂಪರ್ಕ ಪಡೆಯಬಹುದು. ಮುಂದಿನ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇವರ ಉಪಟಳ ಹೆಚ್ಚಾಗಿ ಮೋದಿಯವರಿಗೆ ಬಹಳ ಕಷ್ಟವಾದೀತು. ಕಾರ್ಗಿಲ್ ನಂತಹ ಘಟನೆ ನಡೆಯಬಹುದು. ಸಾಲದ್ದಕ್ಕೆ ಇದನ್ನು ಇನ್ನಷ್ಟು ಬಲಪಡಿಸಲು, 27 ನೆಯ ತಾರೀಕಿನ ಪೂರ್ಣ ಚಂದ್ರಗ್ರಹಣದ ಫಲವೂ ಇದಕ್ಕೆ ಪೂರಕ ಎನ್ನಬಹುದು.

ಇವೆಲ್ಲಾ ವಿದ್ಯಮಾನಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ವರವಾದೀತು.

-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: AstrologyImran KhanIndiaIndia VS PakistanKalpa NewsKannada NewsLoksabha election 2019PakistanPakistan VanishPM Narendra ModiPrakash AmmannayaPredictionPulwama terror attackWorld Mapಇಮ್ರಾನ್ ಖಾನ್ಜ್ಯೋತಿಷ್ಯಪ್ರಕಾಶ್ ಅಮ್ಮಣ್ಣಾಯಭಯೋತ್ಪಾದಕರ ರಾಷ್ಟ್ರಭವಿಷ್ಯ
Share196Tweet123Send
Previous Post

ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯದ ಪರವಾಗಿ ಧನ್ಯವಾದಗಳು

Next Post

ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆ ಹಿಂತೆಗೆದ ಕೇಂದ್ರ ಸರ್ಕಾರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆ ಹಿಂತೆಗೆದ ಕೇಂದ್ರ ಸರ್ಕಾರ

ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆ ಹಿಂತೆಗೆದ ಕೇಂದ್ರ ಸರ್ಕಾರ

Leave a Reply Cancel reply

Your email address will not be published. Required fields are marked *

  • Trending
  • Latest
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

January 12, 2026
ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

January 9, 2026
ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

January 10, 2026
ತೀರ್ಥಹಳ್ಳಿ ಭೀಕರ ಅಪಘಾತ | ನಾಲ್ಕಕ್ಕೆ ಏರಿದ ಸಾವಿನ ಸಂಖ್ಯೆ

ತೀರ್ಥಹಳ್ಳಿ ಭೀಕರ ಅಪಘಾತ | ನಾಲ್ಕಕ್ಕೆ ಏರಿದ ಸಾವಿನ ಸಂಖ್ಯೆ

January 14, 2026
ಬೀದಿನಾಯಿ ಕಚ್ಚಿ ಗಂಭೀರ ಗಾಯಗೊಂಡಿದ್ದ ಬಾಲಕಿ ಸಾವು

ಬೀದಿನಾಯಿ ಕಚ್ಚಿ ಗಂಭೀರ ಗಾಯಗೊಂಡಿದ್ದ ಬಾಲಕಿ ಸಾವು

January 15, 2026
ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು – ಟುಟಿಕೊರಿನ್ ನಡುವೆ ಎರಡು ವಿಶೇಷ ರೈಲುಗಳು

ಟರ್ಮಿನಲ್ ಬದಲಾವಣೆ | ಎರ್ನಾಕುಲಂ – ಬೆಂಗಳೂರು ಎಕ್ಸ್‌ಪ್ರೆಸ್ – ಹರ್ಜೂ ಸಾಹಿಬ್ ನಾಂದೇಡ್ ರೈಲು ಸಂಚಾರ ಭಾಗಶಃ ರದ್ದು

January 15, 2026
ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಜೈಹಿಂದ್ ಅಭಿಯಾನ ಮತ್ತು ವಿಶ್ವ ತರ್ಕ ದಿನ ಆಚರಣೆ

ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಜೈಹಿಂದ್ ಅಭಿಯಾನ ಮತ್ತು ವಿಶ್ವ ತರ್ಕ ದಿನ ಆಚರಣೆ

January 15, 2026
ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ದಾಖಲೆ ನಿಧಿ ಸಂಗ್ರಹ

ಮಂಗಳೂರಿನಲ್ಲಿ ಪ್ಯಾಲಿಯೇಟಿವ್ ಕೇರ್‌ಗಾಗಿ ₹5 ಲಕ್ಷಕ್ಕೂ ಅಧಿಕ ನಿಧಿ ಸಂಗ್ರಹಿಸಿದ ಹಸೀನಾ ಥೆಮಾಲಿ!

January 15, 2026
ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ದಾಖಲೆ ನಿಧಿ ಸಂಗ್ರಹ

Haseena Themali Raises Over ₹5 Lakh for Palliative Care at the Tata Mumbai Marathon 2026 in her bid

January 15, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL