ಭಾರತದ ಇತಿಹಾಸ ಕಂಡು ಕೇಳರಿಯದ ಯುರೋಪ್ ಮಾದರಿಯಲ್ಲಿ ಉಗ್ರರು ನಡೆಸಿದ ಭೀಕರ ಸ್ಫೋಟಕ್ಕೆ ನಮ್ಮ ಸೇನೆ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಪಾಕಿಸ್ಥಾನ ಪ್ರೇರಿತ ಉಗ್ರರ ಈ ಕ್ರೂರ ಕೃತ್ಯಕ್ಕೆ ಇಡಿಯ ಭಾರತವೇ ಕೆರಳಿದ್ದು, ಪ್ರತೀಕಾರದ ಕಿಚ್ಚಿನಲ್ಲಿ ತಾಯಿ ಭಾರತಿಯ ಮಕ್ಕಳು ಕುದಿಯುತ್ತಿದ್ದಾರೆ.
ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ
ಪಾಕಿಸ್ಥಾನ ಚುನಾವಣೆ ವೇಳೆ ಇಮ್ರಾನ್ ಖಾನ್ ಜಾತಕ ವಿಮರ್ಷೆ ಮಾಡಿ ಲೇಖನ ಬರೆದಿದ್ದ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರು, ಚುನಾವಣೆಗೂ ಮುನ್ನ ಪಾಕಿಸ್ಥಾನದಿಂದ ಘೋರ ದುರಂತಗಳು, ಉಪಟಳಗಳು ಹೆಚ್ಚಾಗಬಹುದು. ಅಲ್ಲದೇ, ಕಾರ್ಗಿಲ್’ನಂತಹ ಘಟನೆಯೂ ಸಹ ನಡೆಯಬಹುದು ಎಂದು ನುಡಿದಿದ್ದರು.
ಈಗ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿಯಿರುವಂತೆಯೇ ಪಾಕಿ ಉಗ್ರರು ಇಂತಹ ಕೃತ್ಯ ಎಸಗಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಕಲ್ಪ ನ್ಯೂಸ್ ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು:
ಈ ಸಂದರ್ಭದಲ್ಲಿ ಹೇಳುವುದಾದರೆ, ಪಾಕಿಸ್ಥಾನಿಗಳು ನಿಜಕ್ಕೂ ಎಡವಟ್ಟು ಮಾಡಿಕೊಳ್ಳುತ್ತಾರೆ. ಪಾಕ್ ಈಗಾಗಲೇ ಸಾಲ ಸೋಲದಲ್ಲಿ ಮುಳುಗಿ ಬೀದಿಗೆ ಬಿದ್ದಿದೆ. ಇಂತಹ ವೇಳೆಯಲ್ಲಿಯೇ ಅವರು ಬೇರೆಯವರ ಮುಲಾಜಿನಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, ಅಲ್ಲಿನ ನಿಯಂತ್ರಣ ಇಮ್ರಾನ್ ಕೈ ಹಿಡಿತದಲ್ಲಿ ಇಲ್ಲ.
ಇದಕ್ಕೂ ಮುಖ್ಯವಾಗಿ ಕೇತು ಧನುರಾಶಿಗೆ ಬರುವಾಗ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾಂದರ್ಭಿಕ ಹಾಗೂ ಜ್ಯೋತಿಷ್ಯಾಧಾರಿತವಾಗಿ ನೋಡುವುದಾದರೆ ಪಾಕಿಸ್ಥಾನ ತಾನೇ ಎಡವಟ್ಟು ಮಾಡಿಕೊಳ್ಳುವುದು ನಿಶ್ಚಿತ. ಇಮ್ರಾನ್ ಖಾನ್ ಮೂಲಕವೇ ಆ ದೇಶಕ್ಕೆ ಭಾರೀ ಹೊಡೆತ ಖಂಡಿತ. ಎಷ್ಟರ ಮಟ್ಟಿಗೆ ಹೋಗಬಹುದು ಎಂದರೆ ಪ್ರಪಂಚದ ಭೂಪಟದಿಂದ ಪಾಕಿಸ್ಥಾನವನ್ನು ಕಿತ್ತು ಹಾಕುವ ದುರಂತಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳೂ ದಟ್ಟವಾಗಿವೆ.
ಇವೆಲ್ಲವೂ, ಭಾರತ ಹಾಗೂ ನರೇಂದ್ರ ಮೋದಿಗೆ ವರದಾನವಾಗಲಿದೆ.
ಇಮ್ರಾನ್ ಖಾನ್ ಕುರಿತು 2018ರ ಜುಲೈ 28ರಂದು ಪ್ರಕಾಶ್ ಅಮ್ಮಣ್ಣಾಯ ಅವರು ಬರೆದ ಲೇಖನ ಯಥಾವತ್ ಇಲ್ಲಿದೆ:
ಈಗಾಗಲೇ ಪಾಕಿಸ್ಥಾನದ ಮಹಾ ಚುನಾವಣೆ ಮುಗಿದಿದೆ. ಇನ್ನೇನು ಸರಕಾರ ರಚನೆಯಾಗುವುದೊಂದೇ ಬಾಕಿ. ಶಾಂತಿಯೋ ಸಂಗ್ರಾಮವೋ ಅದು ನಿರ್ಧಾರವಾಗುವುದು ಆ ನಾಯಕನ ಗುಣಗಳ ಆಧಾರದಲ್ಲಿ. ಜ್ಯೋತಿಷ್ಯರು ತಮ್ಮ ತಮ್ಮ ದೃಷ್ಟಿ ಕೋನಗಳಲ್ಲಿ(view) ನಲ್ಲಿ ನೋಡುವವರು. ಇತರರೂ ಅಂದರೆ ರಾಜಕೀಯ ತಂತ್ರಜ್ಞರೂ ಅವರದ್ದೇ ದೃಷ್ಟಿಕೋನದಲ್ಲಿ ನೋಡುತ್ತಾರೆ.
ಒಟ್ಟಿನಲ್ಲಿ ಪಾಕಿಸ್ಥಾನವು ಜಗತ್ತಿನ ಸಂಬಂಧಗಳ ಪ್ರಸಕ್ತ ಪರಿಸ್ಥಿತಿಯಲ್ಲಿ, ಅಲ್ಲಿನ ಸರಕಾರವನ್ನು ರಚನೆಗೆ ಅನುವು ಮಾಡಿಕೊಟ್ಟ ಪ್ರಜೆಗಳ ಭಾವನೆಗಳಿಗಾಗಿ ಸ್ಪಂದಿಸಬೇಕಾಗುತ್ತದೆ. ಅದಕ್ಕೆ ತದ್ವಿರುದ್ಧವಾದಾಗ ಪತನವೂ ಆಗಬಹುದು.
ಇಡೀ ಜಗತ್ತಿನ ಹಲವು ಅಭಿವೃದ್ಧಿ ರಾಷ್ಟ್ರಗಳು ಪಾಕಿಸ್ಥಾನವನ್ನು ಒಂದು ಭಯೋತ್ಪಾದಕರ ರಾಷ್ಟ್ರ, ಭಯೋತ್ಪಾದಕರಿಗೆ ರಕ್ಷಣೆ ನೀಡುವ ರಾಷ್ಟ್ರ ಎಂದು ಪರಿಗಣಿಸಿಯಾಗಿದೆ. ಕೆಲವರು ಘೋಷಣೆಯನ್ನೂ ಮಾಡಿದ್ದಾಗಿದೆ.
ಇಂತಹ ಒಂದು ಪಾಕಿಸ್ಥಾನಕ್ಕೆ ಈ ಚುನಾವಣೆಯಲ್ಲಿ ಇಮ್ರಾನ್ ಖಾನ್ ತಮ್ಮ ಪಕ್ಷ PTI ಯಲ್ಲಿ 121 seat ಗೆದ್ದು ತಂದಿದ್ದಾರೆ. ಯಾವ ಪಕ್ಷಕ್ಕೂ ಸ್ವತಂತ್ರವಾಗಿ ಸರಕಾರ ರಚಿಸುವುದಕ್ಕಾಗುವುದಿಲ್ಲ. 342 seat ನ ಸಂಸತ್ತಿನಲ್ಲಿ 172 ಸ್ಥಾನಗಳು ಬಹುಮತಕ್ಕೆ ಬೇಕಾಗುತ್ತದೆ. ಅಂತಹದ್ದರಲ್ಲಿ ಅತಿದೊಡ್ಡ ಸಂಖ್ಯೆಯು ಇಮ್ರಾನ್ ಖಾನ್ ಗೆ ಇದೆ. ಬಹುತೇಕ ಇಮ್ರಾನ್ ಖಾನ್ ಪ್ರಧಾನಿಯಾಗುವ ಸೂಚನೆಗಳೂ ಇವೆ.
ಮೋದಿಯೊಂದಿಗೆ ಹೋಲಿಕೆ ಮಾಡಿಕೊಂಡಿದ್ದ
ಇಮ್ರಾನ್ ಖಾನ್ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಭಾರತದ ಪ್ರಧಾನಿ ಮೋದಿಯವರ ಆದರ್ಶತೆಯನ್ನು ಬಣ್ಣಿಸಿ ಅದರ ಲಾಭದಿಂದ ಗೆಲುವನ್ನು ಸಾಧಿಸಿರಲೂಬಹುದು. ಅಂದರೆ ಅವನು ಮೋದಿಯವರ ಸಂಘಟನಾ ಸಾಮರ್ಥ್ಯ ಮತ್ತು ದೇಶ ವಿದೇಶಗಳ ಕೀರ್ತಿಯನ್ನು ವರ್ಣಿಸಿ, ಅದೇ ಮಾದರಿಯಲ್ಲಿ ನಾನೂ ಇದ್ದೇನೆ ಎಂಬ ಆಶ್ವಾಸನೆ ನೀಡಿದಂತಾಯ್ತು. ಇಲ್ಲಿ ಮೋದಿಯವರ ಸಂಘ ಶಕ್ತಿಯ ವರ್ಣನೆ ಮಾಡಿದ್ದಷ್ಟೆ. ಅದು ಯಾವ ಸ್ವರೂಪದ್ದು ಎಂದೇನೂ ಹೇಳಲಿಲ್ಲ.
ಹಾಗಾದರೆ ಇಮ್ರಾನ್ ಖಾನ್ ಆ ಶಕ್ತಿಯನ್ನು ಹೇಗೆ ಅನುಷ್ಟಾನಿಸಿಕೊಳ್ಳಬಹುದು ಎಂದು ಚಿಂತನೆ ಮಾಡಬೇಕು. ಮೋದಿಯವರ ಪ್ರಖ್ಯಾತಿ ಹಿಂದುತ್ವ, ಭಾರತೀಯ ಸನಾತನ ಪರಂಪರೆಯ ಉಳಿವು. ಆದರೆ ಇಮ್ರಾನ್ ಖಾನ್ ನದ್ದು ಹಾಗಿರಲು ಸಾಧ್ಯವಿಲ್ಲ. ಮೋದಿಯವರಂತೆ ದಕ್ಷ ಆಡಳಿತ ನೀಡಬೇಕಾದರೆ, ಬೆಂಬಲಿಗರ ಮನಸ್ಸನ್ನು ಸಂತೋಷಗಳಿಸಬೇಕು. ಇದರಲ್ಲಿ ಪ್ರಧಾನವಾದದ್ದು ಇಸ್ಲಾಂ ಎಂದು ಹೇಳಲಾಗದು.
ಇಸ್ಲಾಮಿನೊಳಗೆ ಇರುವ ಮತಾಂಧತೆಯನ್ನೇ ಹೈಲೈಟ್ ಮಾಡಬೇಕಾದೀತು. ಇಸ್ಲಾಂ ತತ್ವವು ಒಂದು ಸಾತ್ವಿಕವಾದ ಅಹಿಂಸಾತ್ಮಕ ರೂಪ. ಆದರೆ ಅದರೊಳಗೆ ಉಗ್ರಗಾಮಿತ್ವವಿದೆ. ಇದು ಮತಾಂಧ ಸ್ವರೂಪದಲ್ಲಿ ಭಯೋತ್ಪಾದನೆ ಮಾಡುವಂತಹದ್ದು.
ಭಾರತಕ್ಕಾಗುವಾಗ ಕಾಶ್ಮೀರವನ್ನು ತಮ್ಮದಾಗಿಸಿಕೊಳ್ಳುವ ಬಯಕೆ. ಇಲ್ಲಿ ಮೋದಿಯವರು ಇರುವುದರಿಂದ ಸಂಧಾನ ಮೂಲಕ ಪಡೆಯವುದು ಅಸಂಭವ. ಹಾಗಾದರೆ ಸಂಘರ್ಷ(ಯುದ್ಧವಲ್ಲ ಹಿಂಸೆ)ದ ಮೂಲಕವೇ ಆಗಬೇಕಷ್ಟೆ.
ನಮ್ಮ ದೃಷ್ಟಿಯು ಪಕ್ಕನೆ ಹೋಗುವುದು ಜಾತಕಕ್ಕೆ. ಇಮ್ರಾನ್ ಖಾನ್ ಜಾತಕ ಹೇಗಿದೆ?
ನೈತಿಕ ಹಾಗೂ ಜಾಗತಿಕ ಬಲವಿಲ್ಲ
ಇಮ್ರಾನ್ ಖಾನ್ ವೃಶ್ಚಿಕ ಲಗ್ನ ಜನಿತರು, ಕುಂಭ ರಾಶಿ ಶತಭಿಷ ನಕ್ಷತ್ರ. ಸದ್ಯ ಶುಕ್ರದಶೆ. ಗೋಚರದಲ್ಲೂ ಅಕ್ಟೋಬರ್ ನಂತರ ಇವರಿಗೆ ಉತ್ತಮ ಫಲ ನೀಡುವ ಕಾಲ. ಇವರ ಜಾತಕದಲ್ಲಿ ಶನಿ ಅತ್ಯಂತ ಬಲಿಷ್ಟ 29.5°(ಮೋದಿಯವರ ಜಾತಕದ ಶನಿಯಂತೆ) ಚಾಪೆಯಡಿಯಲ್ಲಿ ನುಗ್ಗಿದರೆ ರಂಗೋಲಿಯಡಿಯಲ್ಲಿ ನುಸುಳುವ ಜಾಯ ಮಾನ ಇವರದ್ದು. same as Modi. ಆದರೆ ಈ ಶನಿಯು ಇವರಿಗೆ ಏಕಾದಶ ಭಾವದಲ್ಲಿರುವುದು. ವೃಶ್ಚಿಕಕ್ಕೆ ಕನ್ಯಾ ರಾಶಿಯು ಮಹಾಬಾಧಾ ರಾಶಿಯೂ, ಶನಿಗೆ ಏಕಾದಶ ವೀಕ್ಷಣೆ ಉತ್ತಮವಾದರೆ, ಏಕಾದಶದಲ್ಲಿ ಸ್ಥಿತನಾಗುವುದು ಅನಿಷ್ಟವೂ ಆಗುತ್ತದೆ. ಯಾಕೆಂದರೆ ಶನಿಯ ಮೂರನೆಯ ಪೂರ್ಣ ದೃಷ್ಟಿ ಲಗ್ನಕ್ಕೆ ಬಿದ್ದಾಗ ದುರ್ಬುದ್ಧಿ ಶುರುವಾಗುತ್ತದೆ. ಒಂದು ವೇಳೆ ಗುರು ವೀಕ್ಷಣೆ, ಗುರುವಿನ ಕ್ಷೇತ್ರ, ಗುರು ನಕ್ಷತ್ರದಲ್ಲಿ ಇದ್ದರೆ ದುರ್ಬುದ್ಧಿ ನಾಶವಾಗುತ್ತದೆ. ಇಲ್ಲಿ ಇದು ಯಾವುದೂ ಇಲ್ಲ. ಹಿಂದೆ ರಾವಣನಿಗೆ ಏಕಾದಶದಲ್ಲಿ ಶನಿ ಇದ್ದ. ಪರಿಣಾಮ ಏನೆಂದು ಬೇರೆ ಹೇಳಬೇಕಾಗಿಲ್ಲ.
ಇನ್ನು ನೈತಿಕತೆ, ಧರ್ಮ ಪ್ರಜ್ಞೆಯಲ್ಲಿ ವ್ಯತ್ಯಾಸಗಳಿವೆ. ಹಿಂದೆ ರಾಕ್ಷಸರೂ ವರ ಬಲದಿಂದ ದೇವತೆಗಳನ್ನು ಓಡಿಸಿದಂತೆ ಇಂದು ಇವನೂ ಮೋದಿಯವರಿಗೆ ಒಂದು ಸವಾಲು ಆದಾನು. ಆದರೆ ಇವನಿಗೆ ದೈವ ಬಲ(ಜ್ಞಾನ) ಇಲ್ಲ. ಅಂದರೆ ಇಡೀ ಜಗತ್ತಿನಲ್ಲೇ ನೈತಿಕ ಬಲ ಇಲ್ಲದಿರುವುದು ಮತ್ತು ಭಯೋತ್ಪಾದಕ ಗಣಗಳ ಮಧ್ಯದಲ್ಲೇ ಇರುವುದು. ಹಾಗಾಗಿ ಮೋದಿಯವರೆದುರು ಬಲಹೀನನಾಗಬಹುದು.
ಆದರೂ ನಮ್ಮ ದೇಶದೊಳಗಿನ ಹಿತಶತ್ರುಗಳು ಮೋದಿಯವನ್ನು ನಾಶಮಾಡಲಿಕ್ಕಾಗಿ ಇವನ ಸಂಪರ್ಕ ಪಡೆಯಬಹುದು. ಮುಂದಿನ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇವರ ಉಪಟಳ ಹೆಚ್ಚಾಗಿ ಮೋದಿಯವರಿಗೆ ಬಹಳ ಕಷ್ಟವಾದೀತು. ಕಾರ್ಗಿಲ್ ನಂತಹ ಘಟನೆ ನಡೆಯಬಹುದು. ಸಾಲದ್ದಕ್ಕೆ ಇದನ್ನು ಇನ್ನಷ್ಟು ಬಲಪಡಿಸಲು, 27 ನೆಯ ತಾರೀಕಿನ ಪೂರ್ಣ ಚಂದ್ರಗ್ರಹಣದ ಫಲವೂ ಇದಕ್ಕೆ ಪೂರಕ ಎನ್ನಬಹುದು.
ಇವೆಲ್ಲಾ ವಿದ್ಯಮಾನಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ವರವಾದೀತು.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post