ಬೆಂಗಳೂರು: ವಿಶ್ವದಾದ್ಯಂತ ಭಾರೀ ಸಂಚಲನ ಸೃಷ್ಠಿಸಿರುವ ಕೆಜಿಎಫ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಪ್ರಭುದ್ದ ನಟ ಲಕ್ಷ್ಮೀಪತಿ ಅವರ ಅಕಾಲಿಕ ನಿಧನಕ್ಕೆ ತುತ್ತಾಗಿದ್ದಾರೆ.
ಚಿತ್ರದಲ್ಲಿ ಹುಚ್ಚನ ಪಾತ್ರದಲ್ಲಿ ನರಾಚಿ ಕಾರ್ಖಾನೆಯಲ್ಲಿ ಕಾರ್ಮಿಕರ ಎದುರು ನೋವನ್ನು ಹೇಳಿಕೊಳ್ಳುವ ಪಾತ್ರದಲ್ಲಿ ಲಕ್ಷ್ಮೀ ಪತಿ ನಟಿಸಿ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಉಳಿದಿದ್ದರು. ಇಂತಹ ನಟನಿಗೆ ಅನಾರೋಗ್ಯ ಹಠಾತ್ತಾಗಿ ಬಾಧಿಸಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರ ಇಹಲೋಕ ತ್ಯಜಿಸಿದ್ದಾರೆ.
ಇನ್ನು, ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರು ಲಕ್ಷ್ಮೀ ಪತಿ ಅವರು ನಿಧನ ಹೊಂದಿರುವ ವಿಚಾರವನ್ನು ಸಾಮಾಜಿಕ ತಾಣಗಳಲ್ಲಿ ಬಹಿರಂಗ ಪಡಿಸಿದ್ದಾರೆ.
ಕೆಜಿಎಫ್ ಭಾರೀ ಯಶಸ್ಸು ಸಾಗಿ ಮುನ್ನುಗ್ಗುತ್ತಿರುವ ವೇಳೆಯಲ್ಲೇ ಪಾತ್ರಧಾರಿಯೊಬ್ಬರ ಅಕಾಲಿಕ ಮರಣದಿಂದ ಚಿತ್ರತಂಡ ತೀವ್ರ ನೋವಿಗೆ ಸಿಲುಕಿದೆ.
#ಕೆಜಿಎಫ್ ನ ನರಾಚಿಯ ನಿತ್ಯ ನೊಂದ ಕಾರ್ಮಿಕರ ಎದುರು ಭರವಸೆಯ ಕಥೆಗಳನ್ನು ಹೇಳಿ ಕ್ಷಣಕಾಲ ದುಃಖ ಮರೆಯುವಂತೆ ಮಾಡುವ ಅರೆ ಹುಚ್ಚನ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದ #ಲಕ್ಷ್ಮೀಪತಿ ಅವರು ಇಂದು ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥಿಸೋಣ…!! 😞😢🙏#KGF #RIPLakshmipathiSir pic.twitter.com/2vh3phmKuQ
— Yash Official FC (@YashFC) December 29, 2018
Discussion about this post