ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೋಟ್ಯಂತರ ಹಿಂದೂಗಳ ನೂರಾರು ವರ್ಷಗಳ ಕನಸು ನನಸಾಗಲು ಇಂದು ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಿದ್ದು, ಇಡಿಯ ವಿಶ್ವವೇ ಇದಕ್ಕೆ ಸಾಕ್ಷಿಯಾಗಿದೆ.
ಇನ್ನೊಂದೆಡೆ ರಾಮಜನ್ಮ ಭೂಮಿ ವಿವಾದದಲ್ಲಿ ರಾಮ್ ಲಲ್ಲಾ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿದ್ದ ಹಿರಿಯ ವಕೀಲ ಕೆ. ಪರಾಸರನ್ ಅವರು ಇಂದು ತಮ್ಮ ಮನೆಯಲ್ಲೇ ಕುಳಿತು ರಾಮ ಮಂದಿರ ನಿರ್ಮಾಣ ಶಿಲಾನ್ಯಾಸವನ್ನು ಕಣ್ತುಂಬಿಕೊಂಡರು.
ರಾಮಮಂದಿರ ನಿರ್ಮಾಣಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಐತಿಹಾಸಿಕ ಕ್ಷಣವನ್ನು ತಮ್ಮ ನಿವಾಸದಲ್ಲಿ ಕುಟುಂಬಸ್ಥರೊಂದಿಗೆ ಕುಳಿತು ಟಿವಿಯಲ್ಲಿ ವೀಕ್ಷಿಸಿದ ಪರಾಸರನ್ ಅವರ ಮೊಗದಲ್ಲಿ ಧನ್ಯತಾಭಾವ ಎದ್ದು ಕಾಣುತ್ತಿತ್ತು.
Get In Touch With Us info@kalpa.news Whatsapp: 9481252093
Discussion about this post