ಶಿವಮೊಗ್ಗ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಕೆ.ಎಸ್. ಈಶ್ವರಪ್ಪ ಪ್ರಮಾಣವಚನ ಸ್ವೀಕರಿಸಿದ ನಂತರ ನಾಳೆ ನಗರಕ್ಕೆ ಮೊದಲ ಬಾರಿಗೆ ಆಗಮಿಸುತ್ತಿದ್ದು, ಆತ್ಮೀಯವಾಗಿ ಸ್ವಾಗತಕ್ಕೆ ಪಕ್ಷ ಸಜ್ಜಾಗಿದೆ.
ನಾಳೆ ಮುಂಜಾನೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 10 ಗಂಟೆಗೆ ನಗರಕ್ಕೆ ಆಗಮಿಸುವ ಈಶ್ವರಪ್ಪ, ಕೋಟೆ ಐತಿಹಾಸಿಕ ಶ್ರೀಸೀತಾರಾಮಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನಾಗರಿಕ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನು ಈ ಕುರಿತಂತೆ ಹೇಳಿಕೆ ನೀಡಿರುವ ಬಿಜೆಪಿ, ರಾಜ್ಯದಲ್ಲಿ ಅನೇಕ ಕಡೆ ಭೀಕರ ಪ್ರವಾಹದಿಂದ ರಾಜ್ಯದ ಜನತೆ ನೋವು ಅನುಭವಿಸುತ್ತಿರುವ ಈ ವಿಷಮ ಘಳಿಗೆಯಲ್ಲಿ ನಾವೆಲ್ಲರೂ ಈ ಅಭಿನಂದನಾ ಸಮಾರಂಭವನ್ನು ಅತಿ ಸರಳ ರೀತಿಯಲ್ಲಿ ಆಚರಿಸಲು ಯೋಚಿಸಿದ್ದೇವೆ. ಯಾವುದೇ ಹಾರ-ತುರಾಯಿ ಇಲ್ಲದೆ ಹಾಗೂ ಮುಖ್ಯವಾಗಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ, ಇದಕ್ಕೆ ಬದಲಾಗಿ ನೆರೆ ಸಂತ್ರಸ್ತರಿಗೆ ಅನುವು ಆಗುವ ಟವಲ್’ಗಳು ಮತ್ತು ಆರ್ಥಿಕ ಸಹಾಯ ಮಾಡುವಲ್ಲಿ ಸಹಕಾರಿಯಾಗುವಂತೆ ಅತ್ಯಂತ ಸರಳವಾಗಿ ಆತ್ಮಿಯವಾಗಿ ಆಚರಿಸಲು ಚಿಂತಿಸಿದೆ. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದೆ.
Discussion about this post