ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಲೋಕಸಭಾ ಚುನಾವಣೆಯಲ್ಲಿ ತಾವೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಘೋಷಣೆ ಮಾಡಿದ್ದಾರೆ.
ತಮ್ಮ ಪುತ್ರನಿಗೆ ಹಾವೇರಿಯಲ್ಲಿ ಟಿಕೇಟ್ ಸಿಗದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ನಡೆದ ರಾಷ್ಟçಭಕ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಾನೇ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ #Congress ಪಕ್ಷದಲ್ಲಿ ಕುಟುಂಬದ ರಾಜಕಾರಣ ವಿರೋಧಿಸಿ ಬಂದವನು ನಾನು. ನನ್ನ ಮಗನ ಮೇಲೆ ಪ್ರಮಾಣ ಮಾಡಿ ಹೇಳುವೆ. ಯಡಿಯೂರಪ್ಪ #BSYediyurappa ಟಿಕೆಟ್ ಕೊಡಿಸುವೆ ಎಂದು ಹೇಳಿದ್ದು ನಿಜ ಎಂದರು.
Also read: ನಮ್ಮದು ಯುದ್ಧಕಾಲೇ ಶಸ್ತ್ರಾಭ್ಯಾಸ ಅಲ್ಲ | ಸಂಸದ ರಾಘವೇಂದ್ರ ಖಡಕ್ ಸಂದೇಶ ರವಾನೆ
ನನ್ನ ಮಗನಿಗೆ ನೀಡದ ಟಿಕೆಟ್ ನೀಡದ ಯಡಿಯೂರಪ್ಪ ಶೋಭ ಕರಂದ್ಲಾಜೆಗೆ ಟಿಕೆಟ್ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ಪಕ್ಷ ರಾಜಕಾರಣದ ವಿರುದ್ದ ಹೋರಾಟ ನಡೆಸಿದ ನಾನು ಇದೀಗ ಪಕ್ಷದ ನಿಷ್ಟಾವಂತರಿಗೆ ಅಪ್ಪ ಮಕ್ಕಳ ಪಕ್ಷದಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದರು.
ನಿಮ್ಮ ಮಗ ಎಂಪಿ, ಇನ್ನೂಬ್ಬ ಎಂಎಲ್’ಎ ಮತ್ತು ರಾಜ್ಯಾಧ್ಯಕ್ಷ. ನನ್ನ ಮಗ ಏನಾಗಿದ್ದಾನೆ ಎಂದು ನೋವಿನಿಂದ ನುಡಿದರು.
ಪ್ರಧಾನಿ ನರೇಂದ್ರ ಮೋದಿ ಯವರ ಬೆಂಬಲಕ್ಕೆ ನಾನಿದ್ದೇನೆ. ಆದರೆ ನನ್ನ ಬೆಂಬಲ ಕುಟುಂಬದ ರಾಜಕಾರಣಕ್ಕಿಲ್ಲ. ಕಾಂಗ್ರೆಸ್ ನ ರಾಜಕೀಯ ವಂಶಪಾರಂಪರ್ಯ ವಿರೋಧಿಸುವುದು ನನ್ನ ನಿಲುವು ಎಂದರು.
ನಾನು ಪಕ್ಷ ಬಿಟ್ಟು ಹೋಗಲ್ಲ. ಪಕ್ಷ ನನ್ನ ತಾಯಿ ಎಂದಿದ್ದೇ. ಆದರೆ ನನ್ನ ತಾಯಿ ನನಗೆ ಸಾಯಿಸುತ್ತಿರುವಾಗ ಸುಮ್ಮನಿರಬೇಕಾ ಎಂದು ಪ್ರಶ್ನಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಜನ ಗೆಲ್ಲುತ್ತಾರೆ ನೋಡುವೆ ಯಡಿಯೂರಪ್ಪನವರೆ. ಇದು ನನ್ನ ಮಾತಲ್ಲ ನೊಂದ ಕಾರ್ಯಕರ್ತರು ಅಭಿಮಾನಿಗಳ ನೋವು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post