ಕಲ್ಪ ಮೀಡಿಯಾ ಹೌಸ್
ಕಾಬೂಲ್: ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರು ಅಧಿಪತ್ಯ ಸ್ಥಾಪಿಸಿದ ನಂತರ ಇದೀಗ ಕಾಬೂಲ್ ಏರ್ ಸ್ಪೇಸನ್ನು ಸ್ಥಗಿತಗೊಳಿಸಲಾಗಿದ್ದು, ಭಾರತ ಸೇರಿದಂತೆ ಯಾವುದೇ ದೇಶದ ವಿಮಾನ ಅಲ್ಲಿಗೆ ತೆರಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಕುರಿತಂತೆ ಟೋಲೋ ನ್ಯೂಸ್ ಸುದ್ದಿ ಬಿತ್ತರಿಸಿದ್ದು, ಸೋಮವಾರ ಎಲ್ಲಾ ವಾಣಿಜ್ಯ ವಿಮಾನಗಳಿಗಾಗಿ ಅಫ್ಘಾನಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಕಾಬೂಲ್’ನ ಹಮೀದ್ ಕಜೈರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.
ಇಂದು ಮಧ್ಯಾಹ್ನ 12.30ಕ್ಕೆ ಏರ್ ಇಂಡಿಯಾ ವಿಮಾನ ಭಾರತದಿಂದ ಕಾಬೂಲ್’ಗೆ ತೆರಳಬೇಕಿತ್ತು. ಏತನ್ಮಧ್ಯೆ, ಅಮೆರಿಕಾ ಸೇನಾ ಪಡೆಗಳು ವಿಮಾನ ನಿಲ್ದಾಣದಲ್ಲಿ ಉಸ್ತುವಾರಿ ವಹಿಸಿದ್ದು, ರಾಯಭಾರ ಸಿಬ್ಬಂದಿ ಮತ್ತು ಇತರ ನಾಗರಿಕರನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post