ಕಲ್ಪ ಮೀಡಿಯಾ ಹೌಸ್ | ಕಡಬ |
ಪಕ್ಷದ ಕಾರ್ಯಕರ್ತರನ್ನು ಹುರಿ ದುಂಬಿಸುವ ಕೆಲಸ ಮಾಡುತಿದ್ದೇವೆ. ಯಾವುದೇ ಚುನಾವಣೆ ಇರಲಿ ಪಕ್ಷದ ಸಂಘಟನೆಗೆ ಒತ್ತನ್ನು ಕೊಡುವ ಕೆಲಸ ಮಾಡಬೇಕಾಗಿದೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಾಗೂ ಮುಖಂಡ ನಿಖಿಲ್ ಕುಮಾರಸ್ವಾಮಿ #Nikhil Kumaraswamy ನುಡಿದರು.
ಅವರು ಸೋಮವಾರ ಪತ್ನಿ ಸಮೇತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಹಾಗೂ ಪ್ರಸಾದವನ್ನು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಜಾಕೆ ಮಾಧವ ಗೌಡ, ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಜೆಡಿಎಸ್, ಒಕ್ಕಲಿಗ ಗೌಡ ಮುಖಂಡರುಗಳಾದ ಸಂತೋಷ್ ಜಾಕೆ, ಗೋಪಾಲ ಎಣ್ಣೆ ಮಜಲ್, ಶಿವರಾಮ ಏನಕ್ಕಲ್, ಸುಬ್ರಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ಡಾ. ಎ. ಎ. ತಿಲಕ್, ಕಾರ್ಯದರ್ಶಿ ವಿಶ್ವನಾಥ ನಡುತೋಟ, ಉಪಾಧ್ಯಕ್ಷ ನಾರಾಯಣ ಅಗ್ರಹಾರ, ಪೂರ್ವ ಅಧ್ಯಕ್ಷ ಲೊಕೇಶ ಬಿಎನ್, ಜಯರಾಮ ಕಟ್ಟೆಮನೆ, ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post