ಕಲ್ಪ ಮೀಡಿಯಾ ಹೌಸ್
ಕಲಬುರಗಿ: ಚೈಲ್ಡ್ ಲೈನ್ -1098ಕ್ಕೆ ಬಂದ ಅನಾಮಿಕ ಕರೆಯ ಮೇರೆಗೆ ಜೇವರ್ಗಿ ತಾಲೂಕಿನ ರಾಜವಾಳ ಗ್ರಾಮದಲ್ಲಿನ ಒಟ್ಟು ೪ ಬಾಲ್ಯವಿವಾಹಗಳು ಹಾಗೂ ಅಂದೊಳ ಗ್ರಾಮದ 1 ಬಾಲ್ಯವಿವಾಹ ತಡೆಹಿಡಿಯಲಾಯಿತು.
ಎಲ್ಲಾ ಬಾಲ್ಯವಿವಾಹ ಪ್ರಕರಣಗಳಲ್ಲಿ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಶಿಕ್ಷೆ ಕುರಿತು ಅರಿವು ಮೂಡಿಸಲಾಯಿತು. ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲು ತಿಳಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಆದೇಶದಂತೆ ಜೇವರ್ಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಗಣ್ಣ ಗೌಡ, ಆರಕ್ಷಕ ಉಪ ನಿರೀಕ್ಷಕ ವಿಶ್ವನಾಥ ಮತ್ತು ಜೇವರ್ಗಿ ಪೊಲೀಸ ಠಾಣೆ ಸಿಬ್ಬಂದಿ ಶಿವಲಿಂಗಪ್ಪ, ಶ್ರೀಶೈಲ್ ಬಿರದಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಮಾಜ ಸೇವಕರು ಕಲಾವತಿ, ಚೈಲ್ಡ್ ಲೈನ್ ಕೋಲ್ಯಾಬ್ ಕೇಂದ್ರ ಡಾನ ಬಾಸ್ಕೊ ಸಂಸ್ಥೆ ನಿರ್ದೇಶಕರು ಫಾದರ್ ಟಾಮಿ ಚಿರಾಕಲ್, ಜಿಲ್ಲಾ ಸಂಯೋಜಕರು ಬಸವರಾಜ ತೆಂಗಳಿ ಮತ್ತು ಮಲ್ಲಯ್ಯ ಗುತ್ತೇದಾರ್, ಚಿದಾನಂದ ಅವರನ್ನೊಳಗೊಂಡ ತಂಡದ ನೇತೃತ್ವದಲ್ಲಿ ಬಾಲ್ಯ ವಿವಾಹ ತಡೆಹಿಡಿಯಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	


 Loading ...
 Loading ... 
							



 
                
Discussion about this post