ಕಲ್ಪ ಮೀಡಿಯಾ ಹೌಸ್ | ಕಲಬುರಗಿ | ವರದಿ: ಡಿ.ಎಲ್. ಹರೀಶ್
ನಿರುದ್ಯೋಗ ಸಮಸ್ಯೆ ಬಗೆಹರಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ #CM Siddaramaiah ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮತ್ತು ಮಹಾನಗರ ಪಾಲಿಕೆ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಕಲಬುರಗಿಯ ಕೆಸಿಟಿ ಕಾಲೇಜು ಆವರಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ ( ಯುವ ಸಮೃದ್ದಿ ಸಮ್ಮೇಳನ) ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದೆವು. ಯುವನಿಧಿ ಯೋಜನೆಯಡಿಯಲ್ಲಿ ಪದವಿ ನಿರುದ್ಯೋಗಿ ಯುವಕರಿಗೆ ರೂ 2000 ಹಾಗೂ ಡಿಪ್ಲೋಮಾ ಪಾಸ್ ಆದವರಿಗೆ ರೂ 1500 ಗೌರವಧನ ( ಪ್ರತಿತಿಂಗಳು) ಎರಡು ವರ್ಷದ ಅವಧಿಯವರೆಗೆ ಕೊಡುತ್ತಿದ್ದೇವೆ.

Periodic Labour Force Survey ಪ್ರಕಾರ ದೇಶದಲ್ಲಿ ಡಿಗ್ರಿ ಪಾಸಾದವರಲ್ಲಿ 18.9% ಹಾಗೂ ಡಿಪ್ಲೋಮಾ ಪಾಸಾದವರಲ್ಲಿ 17.1 ನಿರುದ್ಯೋಗ ಇದೆ. ನಮ್ಮ ರಾಜ್ಯದಲ್ಲಿ 2.5% ನಿರುದ್ಯೋಗ ಇದೆ. ಇದು ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ಕಡಿಮೆ. ಇದಕ್ಕೆ ರಾಜ್ಯ ಸರ್ಕಾರ ಉದ್ಯೋಗ ಒದಗಿಸಯವಲ್ಲಿ ಕೈಗೊಂಡ ಕ್ರಮಗಳೇ ಸಾಕ್ಷಿ. FDA ಹೆಚ್ಚು ಹೆಚ್ಚು ಆದರೆ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತವೆ. ಕೆಕೆ ಭಾಗದ ಕೈಗಾರಿಕೆಗಳು ಬರಬೇಕೆಂದರೆ ಹೆಚ್ಚುವರಿ 60% incentive ಕೊಡಬೇಕು ಎಂದು ಖರ್ಗೆ ಅವರು ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ಮಾಡಿ ಈ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಹಾಗೂ ಅಭಿವೃದ್ದಿಗೆ ಕ್ರಮ ವಹಿಸುತ್ತಿದೆ ಎಂದು ಸಿಎಂ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇಂದು ನೇಮಕವಾದ ಹತ್ತು ಜನ ಯುವಕರಿಗೆ ನೇಮಕಾತಿ ಪತ್ರ ವಿತರಿಸಿ ಅವರಿಗೆ ಶುಭ ಹಾರೈಸಿ ಭಾಗವಹಿಸಿದ ಕಂಪನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post