ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಚೆನ್ನೈನಲ್ಲಿ ತಮ್ಮ ಚಾರ್ತುಮಾಸ್ಯ ವ್ರತವನ್ನು ಸಂಪನ್ನಗೊಳಿಸಿರುವ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು Shri Vidyadhishathirtha Udupi Palimaaru Mutt ಅಕ್ಟೋಬರ್ 6ರಂದು ನಗರದಲ್ಲಿ ಆಗಮಿಸಲಿದ್ದಾರೆ.
ಅಕ್ಟೋಬರ್ 6ರಂದು ಸಾಯಂಕಾಲ ನಗರಕ್ಕೆ ಆಗಮಿಸಲಿರುವ ಶ್ರೀಗಳು ಅ.11ರವರೆಗೂ ನಗರದಲ್ಲಿ ಪ್ರವಚನ ನೀಡಲಿದ್ದಾರೆ.
ಅ.7ರಿಂದ 11ರವರೆಗೂ ಪ್ರತಿದಿನ ಸಾಯಂಕಾಲ 6.30ರಿಂದ 8 ಗಂಟೆಯವರೆಗೆ ಹೊಸ ಜೇವರ್ಗಿ ರಸ್ತೆಯ ಶ್ರೀ ರಾಮಮಂದಿರದಲ್ಲಿ ಶ್ರೀಗಳಿಂದ ಪ್ರವಚನ ನೀಡಲಿದ್ದಾರೆ.
Also read: ಕೇಂದ್ರ ಕಾರಾಗೃಹದ ಖೈದಿಗಳಿಗೆ ಪೇಜಾವರ ಶ್ರೀಗಳ ಅದ್ಬುತ ಬೋಧನೆ ಏನು ಗೊತ್ತಾ?
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಿಶೋರ ದೇಶಪಾಂಡೆ(9449731728), ವ್ಯಾಸರಾಜ ಸಂತೆಕಲ್ಲೂರು(9449644366) ಅವರನ್ನು ಸಂಪರ್ಕಿಸಲು ವ್ಯವಸ್ಥಾಪಕರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post