ಕಲ್ಪ ಮೀಡಿಯಾ ಹೌಸ್ | ರಾಜೌರಿ(ಜಮ್ಮು ಕಾಶ್ಮೀರ) |
ಇಲ್ಲಿನ ರಾಜೌರಿಯ ಸೋಲ್ಕಿ ಪ್ರದೇಶದಲ್ಲಿ ಸೇನೆ ಹಾಗೂ ಉಗ್ರರ #Terrorist ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಧಿಕಾರಿಗಳೂ ಸೇರಿದಂತೆ ನಾಲ್ವರು ಯೋಧರು ವೀರಸ್ವರ್ಗ #martyr ಸೇರಿದ್ದಾರೆ.
ಇಲ್ಲಿನ ಕಾಲಾಕೋಟ್ ಪ್ರದೇಶದಲ್ಲಿ ಜೈಶ್ ಉಗ್ರರ ಹಲವು ತಂಡಗಳು ಅಡಗಿವೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಸೇನೆ #IndianArmy ಕಾರ್ಯಾಚರಣೆ ನಡೆಸುತ್ತಿದೆ.

ಇದೇ ವೇಳೆ ಇಬ್ಬರು ಭಯೋತ್ಪಾದಕರನ್ನು #Terrorist ಜೀವಂತ ಸೆರೆ ಹಿಡಿಯುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.

ಬಾಜಿಮಲ್ ಪ್ರದೇಶದ ಬಳಿಯ ಗುಲಾಬ್’ಗಢ ಅರಣ್ಯ ಪ್ರದೇಶದಲ್ಲಿ ಜೈಶ್ ಸಂಘಟನೆಯ ವಿವಿಧ ಗುಂಪುಗಳು ಚದುರಿ ಬೀಡುಬಿಟ್ಟಿವೆ ಎಂಬ ಮಾಹಿತಿ ಸೇನೆಗೆ ಅಕ್ಟೋಬರ್ ಮೊದಲ ವಾರದಲ್ಲೇ ಮಾಹಿತಿಯಿತ್ತು ಎಂದು ಹೇಳಲಾಗಿದೆ. ಆದರೆ, ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ನ.19 ರಂದು ಕಾಲಾಕೋಟ್ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post