ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಲು ಭಾವಚಿತ್ರ ಹೊಂದಿರುವ ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್) ವನ್ನು ಹೊಂದಿಲ್ಲದಿದ್ದರೂ ಮತದಾರರು ಚುನಾವಣಾ ಆಯೋಗ ತಿಳಿಸಿದ ಕೆಳಕಂಡ 12 ಪರ್ಯಾಯ ದಾಖಲಾತಿಗಳಲ್ಲಿ ಒಂದು ದಾಖಲಾತಿಯನ್ನು ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ಅವರು ತಿಳಿಸಿದ್ದಾರೆ.
ಮೇ 10ರ ಬೆಳಗಿನ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಧಿಯನ್ನು ನಿಗದಿಪಡಿಸಿದ್ದು, ಮತದಾರರ ಗುರುತಿನ ಚೀಟಿ (ಎಪಿಕ್) ಕಾರ್ಡ್ ಅಥವಾ ತಮ್ಮ ಭಾವಚಿತ್ರವಿರುವ ಕೆಳಕಂಡ 12 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸಿ ಮತದಾನ ಮಾಡಲು ಭಾರತ ಚುನಾವಣಾ ಆಯೋಗ ಅವಕಾಶ ಕಲ್ಲಿಸಿದೆ. 12 ಪರ್ಯಾಯ ದಾಖಲೆಗಳ ವಿವರ ಇಂತಿದೆ.
Also read: ಮೇ 2ರಿಂದ ಶ್ರೀಲಂಕಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರೋತ್ಸವ
- ಆಧಾರ್ ಕಾರ್ಡ್
- ಎಮ್.ಎನ್.ಆರ್.ಇ.ಜಿ.ಎ. (ಒಓಖಇಉಂ) ಜಾಬ್ ಕಾರ್ಡ್
- ಬ್ಯಾಂಕ್ ಮತು ಅಂಚೆ ಕಚೇರಿಗಳು ನೀಡುವ ಭಾವಚಿತ್ರವುಳ್ಳ ಪಾಸ್‍ಬುಕ್
- ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಪ್ಯಾನ್ ಕಾರ್ಡ್
- ಎನ್‍ಪಿಆರ್ ಅಡಿ ಆರ್‍ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್
- ಇಂಡಿಯನ್ ಪಾಸ್‍ಪೋರ್ಟ್
- ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ
- ರಾಜ್ಯ/ ಕೇಂದ್ರ ಸರ್ಕಾರ/ ಸಾರ್ವಜನಿಕ ಉದ್ಯಮಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ನೀಡುವ ಭಾವಚಿತ್ರವುಳ್ಳ ಸೇವಾ ಗುರುತಿನ ಚೀಟಿ
- ಸಂಸದರು, ವಿಧಾನಸಭಾ ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಸರ್ಕಾರ ನೀಡಿರುವ ಅಧಿಕೃತ ಗುರುತಿನ ಚೀಟಿ
- ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿರುವ ವಿಶಿಷ್ಟ ಅಂಗವೈಕಲ್ಯ ಐಡಿ (ಯುಡಿಐಡಿ) ಕಾರ್ಡ್.













Discussion about this post