ಕಲ್ಪ ಮೀಡಿಯಾ ಹೌಸ್ | ಕಲಬುರಗಿ/ಬಾಲ್ಕಿ |
ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿದ್ದೂ ಸಹ ತಮ್ಮ ಕ್ಷೇತ್ರದಲ್ಲೇ ಅವರಿಗೆ ನನ್ನನ್ನು ಕಂಡರೆ ಭಯವಾಗಿದ್ದು, ಅವರನ್ನು ನೋಡಿದ ಅಯ್ಯೋ ಪಾಪ ಎನಿಸುತ್ತೆ ತಂದು ಚಿಂತಕ ಚಕ್ರವರ್ತಿ ಸೂಲಿಬೆಲೆ Chakravarthy Sulibbele ಕಟಕಿಯಾಡಿದ್ದಾರೆ.
ಪ್ರಿಯಾಂಕ್ ಖರ್ಗೆ Priyanka Kharge ಅವರ ಸ್ವಕ್ಷೇತ್ರ ಜಿಲ್ಲೆಯ ಚಿತ್ತಾಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಕ್ರವರ್ತಿ ಸೂಲೆಬೆಲೆ ತೆರಳುತ್ತಿದ್ದರು. ಆದರೆ ಬಾಲ್ಕಿ ಬಳಿಯಲ್ಲೇ ಅವರನ್ನು ನಿನ್ನೆ ರಾತ್ರಿ 11 ಗಂಟೆಗೆ ಪೊಲೀಸರು ತಡೆದಿದ್ದಾರೆ ಎಂದು ವರದಿಯಾಗಿದೆ.

Also read: ನಟ, ಮಾಜಿ ಐಎಎಸ್ ಅಧಿಕಾರಿ ಕೆ. ಶಿವರಾಮ್ ವಿಧಿವಶ
ಈ ಕುರಿತಂತೆ ಮಾಧ್ಯಮಗಳಿಗೆ ಮಾತನಾಡಿರುವ ಚಕ್ರವರ್ತಿ ಸೂಲಿಬೆಲೆ, ಲೋಕಸಭಾ ಚುನಾವಣೆಯ ದೃಷ್ಠಿಯಿಂದ ಪ್ರಧಾನಿ ಮೋದಿಯವರ PM Narendra Modi ಸಾಧನೆಗಳನ್ನು ಎಲ್ಲ ನಗರ ಹಾಗೂ ಗ್ರಾಮಗಳಿಗೆ ತಲುಪಿಸುವ ಸಲುವಾಗಿ ರಾಜ್ಯದಾದ್ಯಂತ ಹಲವು ಕಡೆಗಳಲ್ಲಿ ಈಗಾಗಲೇ ಕಾರ್ಯಕ್ರಮಗಳನ್ನು ನಡೆಸಿz್ದೆÃವೆ. ಎಲ್ಲಿಯೂ ಸಹ ಯಾವುದೇ ರೀತಿಯ ಅಹಿತಕರ ಘಟನೆಯಾಗಲೀ, ತೊಂದರೆಯಾಗಲೀ ಆಗಿಲ್ಲ. ಹೀಗಿದ್ದಾಗ, ಕಲಬುರಗಿ ಪ್ರವೇಶಕ್ಕೆ ಯಾಕೆ ತಡೆ ಒಡ್ಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post