ಕಲ್ಪ ಮೀಡಿಯಾ ಹೌಸ್ | ಕಲಬುರಗಿ/ಬೆಂಗಳೂರು |
ಚಿಂತಕ ಚಕ್ರವರ್ತಿ ಸೂಲಿಬೆಲೆ Chakravarthy Sulibele ಅವರಿಗೆ ಕಲಬುರಗಿ ಪ್ರವೇಶಕ್ಕೆ ತಹಶೀಲ್ದಾರ್, ಪೊಲೀಸರು ಹೇರಿದ್ದ ನಿರ್ಬಂಧದ ಆದೇಶವನ್ನು ರಾಜ್ಯ ಹೈಕೋರ್ಟ್ High Court ತೆರವುಗೊಳಿಸಿದ್ದು, ಈ ಮೂಲಕ ವಿರೋಧಿಗಳಿಗೆ ಭಾರೀ ಮುಖಭಂಗ ಆದಂತಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆಯೋಜಿಸಲಾಗಿದ್ದ ನಮೋ ಭಾರತ್ ಕಾಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಬೇಕಿತ್ತು. ಆದರೆ, ನಿನ್ನೆ ರಾತ್ರಿ ಅವರನ್ನು ಬಾಲ್ಕಿ ಬಳಿಯಲ್ಲಿ ತಡೆಯಲಾಗಿತ್ತು. ಸೂಲಿಬೆಲೆ ಅವರು ಕಲಬುರಗಿ ಪ್ರವೇಶಿಸದಂತೆ ತಡರಾತ್ರಿ 11 ಗಂಟೆಗೆ ಆದೇಶವನ್ನು ಹೊರಡಿಸಲಾಗಿತ್ತು.

Also read: ಸೂಲಿಬೆಲೆಗೆ ಸಾಂವಿಧಾನಿಕ ಜಯ | ಚಿತ್ತಾಪುರ ಕಾರ್ಯಕ್ರಮಕ್ಕೆ ಹೇರಿದ್ದ ನಿರ್ಬಂಧ ಕೋರ್ಟ್’ನಿಂದ ರದ್ದು
ಇನ್ನು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚಕ್ರವರ್ತಿ ಸೂಲಿಬೆಲೆ ಅವರು, ಚಿತ್ತಾಪುರದಲ್ಲಿ ಕಾರ್ಯಕ್ರಮ ತಡೆಯುವ ಖರ್ಗೆ Kharge ಸಾಹೇಬರ ಪ್ರಯತ್ನಕ್ಕೆ ಕೋರ್ಟ್ ಮಂಗಳಾರತಿ ಎತ್ತಿದೆ ಎಂದು ಕಟಕಿಯಾಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post