ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಸ್ನೇಹಿತರ ಜೊತೆಯಲ್ಲಿ ಮಾತನಾಡುತ್ತಾ ಕುಳಿತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ಏಕಾಏಕಿ ಹೃದಯಾಘಾತಕ್ಕೆ #Student died by Hear Attack ಒಳಗಾಗಿ ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಕೋರೇಶ್ ಸಿದ್ದಣ್ಣ ಮದ್ರಿ (17) ಎಂದು ಗುರುತಿಸಲಾಗಿದೆ.ಮೃತ ಸಿದ್ದಣ್ಣ ನಗರದ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದನು.
Also read: ಜ.16 | ಶಿವಮೊಗ್ಗಕ್ಕೆ ಬಂಗಾರಮಕ್ಕಿ ಶ್ರೀ ಕ್ಷೇತ್ರದ ಶ್ರೀ ಮಾರುತಿ ಗುರೂಜಿ
ಗ್ರಾಮದಲ್ಲಿ ತನ್ನ ಸ್ನೇಹಿತರ ಜೊತೆಗೆ ಕುಳಿತಿದ್ದ ವೇಳೆ ಎದೆ ನೋವಿನಿಂದ ಅಸ್ವಸ್ಥನಾಗಿದ್ದಾನೆ.
ತಕ್ಷಣವೇ ಆತನನ್ನು ಗೆಳೆಯ ಬೈಕ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾನೆ. ಆದರೆ ಮಾರ್ಗ ಮಧ್ಯೆ ಕೋರೇಶ್ ಕೊನೆಯುಸಿರೆಳೆದಿದ್ದಾನೆ.
ಮಗನನ್ನು ಕಳೆದುಕೊಂಡ ಪೋಷಕರ ರೋಧನ ಮುಗಿಲು ಮುಟ್ಟಿದೆ. 17 ವರ್ಷದ ಬಾಲಕ ಹೃದಯಾಘಾತಕ್ಕೊಳಗಾಗಿರುವುದು ಆತಂಕ ಸೃಷ್ಟಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post