ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಕ್ಷೇತ್ರದ ಶ್ರೀ ಮಾರುತಿ ಗುರೂಜಿಯವರು #Shri Maruthi Guruji of Shri Kshetra Bangaramakki ಜ.16ರ ಸಂಜೆಯ ಆರು ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.
ನಾಳೆ ಸಂಜೆ ನೂರು ಅಡಿ ರಸ್ತೆಯಲ್ಲಿರುವ ನವ್ಯಶ್ರೀ ಸಭಾಂಗಣಕ್ಕೆ ಭೇಟಿ ನೀಡಿ, ಸಭೆ ನಡೆಸಲಿದ್ದಾರೆ.
Also read: ಸೊರಬ | ಪಾಳು ಬಿದ್ದಿದ್ದ ಬಾವಿಗೆ 10 ವರ್ಷದ ನಂತರ ಪುನರ್ ವೈಭವ | ಮಾದರಿ ಕಾರ್ಯ
ಶ್ರೀ ವೀರಾಂಜನೇಯ ದೇವರ ಪುನಃ ಪ್ರತಿಷ್ಠೆ, ನೂತನ ಗೋಪುರ, ಸ್ವರ್ಣ ಕಲಶ, ಶ್ರೀ ಮಹಾಗಣಪತಿ, ಶ್ರೀ ಚೌಡೇಶ್ವರಿ, ಶ್ರೀ ಸುಬ್ರಮಣ್ಯ, ಪರಿವಾರ ದೇವತಾದಿಗಳ ಪ್ರತಿಷ್ಠಾಪನೆ ಹಾಗೂ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಪೀಠಾರೋಹಣದ ರಜತ ಮಹೋತ್ಸವ ಕುರಿತಾಗಿ ಅವರು ಚರ್ಚೆ ನಡೆಸಲಿದ್ದಾರೆ.
ಸಭೆಗೆ ವಿಶೇಷವಾಗಿ ಬಂಗಾರಮಕ್ಕಿ ಶ್ರೀ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಅವರು ಆಗಮಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ವ್ಯವಸ್ಥಾಪಕರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post