ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ದೇಶದ್ರೋಹಿಗಳಿಗೆ ಸಂಸತ್’ಗೆ ಪಾಸ್ ಕೊಟ್ಟ ಪ್ರತಾಪ್ ಸಿಂಹಗೆ Prathap Simha ಟಿಕೇಟ್ ಕೊಟ್ಟರೆ ಹೇಗೆ ಎಂದು ಸಚಿವ ಪ್ರಿಯಾಂಕ್ ಖರ್ಗೆ Minister Priyanka Kharge ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಮೈಸೂರು-ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೇಟ್ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಟಿಕೆಟ್ ಕಟ್ ಮಾಡುವುದಕ್ಕೆ ನನಗೆ ಏನು ಸಂಬAಧ. ಅದು ಮೈಸೂರು, ಅವರಿಗೆ ಟಿಕೆಟ್ ಕೊಡ್ತಾರಾ, ಬಿಡ್ತಾರಾ ಎಂಬುದನ್ನು ನಾನು ಹೇಗೆ ಹೇಳಲಿ. ದೇಶದ್ರೋಹಿಗಳಿಗೆ ಪಾಸ್ ಕೊಟ್ಟವರಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು.

Also read: ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ಓದಿ | ಏಮ್ಸ್ ಹೊರಹಾಕಿದೆ ಆತಂಕಕಾರಿ ಮಾಹಿತಿ
ಅಲ್ಲದೇ, ಸಿದ್ದರಾಮಯ್ಯ ಕೈ ಬಲ ಪಡಿಸಲು ಟಿಕೆಟ್ ಕಟ್ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರು ಅವರ ಟಿಕೆಟ್ ಕಟ್ ಮಾಡಿಸುತ್ತಿದ್ದಾರೆ ಅವರೇ ಹೇಳಲಿ. ಬಿಜೆಪಿಯಲ್ಲಿ ಮಿಲಾಪಿ ಕುಸ್ತಿ ಎಂದು ಹೇಳುತ್ತಿದ್ದಾರೆ. ಇಂತಹ ಪ್ರಗತಿಪರ ಯುವಕನ ಹೋರಾಟ ಯಾರು ನಿಲ್ಲಿಸುತ್ತಿದ್ದಾರೆ ಅವರೇ ಹೇಳಲಿ ಎಂದು ತಿರುಗೇಟು ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post